35.4 C
Hubli
ಏಪ್ರಿಲ್ 29, 2024
eNews Land
ಸುದ್ದಿ

ನೌಕರರಲ್ಲಿ ಉಲ್ಲಾಸ ಮತ್ತು ಚೈತನ್ಯ ಪಡೆಯಲು ಸಾಂಸ್ಕøತಿಕ ಸ್ಪರ್ಧೆಗಳು ಅಗತ್ಯ: ಕಸಾಪ ಜಿಲ್ಲಾಧ್ಯಕ್ಷ ಡಾ.ಲಿಂಗರಾಜ ಅಂಗಡಿ

ಇಎನ್ಎಲ್ ಧಾರವಾಡ: ಸದಾ ಕರ್ತವ್ಯನಿರತ ನೌಕರರು ತಮ್ಮ ವೃತ್ತಿಯಲ್ಲಿ ವಿಶ್ರಾಂತಿ ಮತ್ತು ಚೈತನ್ಯ ಪಡೆಯಲು ಕ್ರೀಡೆ ಮತ್ತು ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಪ್ರತಿದಿನ ತೊಡಗಿಸಿಕೊಳ್ಳಬೇಕು. ಆ ಮೂಲಕ ಪ್ರಶಾಂತವಾದ ಮನಸ್ಸು ಮತ್ತು ಸದೃಢವಾದ ದೈಹಿಕ ಆರೋಗ್ಯವನ್ನು ಹೊಂದಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಹೇಳಿದರು.

ಗಡ್ಕರಿಯಿಂದ ಬೆಂಗಳೂರು ಮೈಸೂರು ಎಕ್ಸ್’ಪ್ರೆಸ್ ವೇ ವೈಮಾನಿಕ ಸಮೀಕ್ಷೆ ಇಂದು

ನಗರದ ಆಲೂರು ವೆಂಕಟರಾವ್ ಸಾಂಸ್ಕøತಿಕ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಧಾರವಾಡ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಇಂದು ಬೆಳಿಗ್ಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಾಂಸ್ಕøತಿಕ ಸ್ಪರ್ಧೆಗಳನ್ನು ವಾದ್ಯ ನುಡಿಸುವ ಮೂಲಕ ಉದ್ಘಾಟಸಿ, ಮಾತನಾಡಿದರು.

ಎ.ಟಿ.ಎಮ್ ಹಣ ನಿರಾಕರಿಸಿದ ಹೆಚ್.ಡಿ.ಎಫ್.ಸಿ.ಬ್ಯಾಂಕಿಗೆ ರೂ.2 ಲಕ್ಷದ 24 ಸಾವಿರ ರೂ.ಗಳ ಭಾರಿದಂಡ

ನೌಕರರ ಸಂಘವು ಅಧಿಕಾರಿ ಮತ್ತು ಸಿಬ್ಬಂದಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಮತ್ತು ವೃತ್ತಿಯಲ್ಲಿ ಏಕಾಗೃತೆಯನ್ನು ಹೆಚ್ಚಿಸಲು ಪ್ರತಿ ವರ್ಷ ಕ್ರೀಡೆ ಮತ್ತು ಸಾಂಸ್ಕøತಿಕ ಸ್ಪರ್ಧೆಗಳನ್ನು ಆಯೋಜಿಸುತ್ತಿದೆ. ಶಿಕ್ಷಣ ವಲಯದಲ್ಲಿ ಇರುವ ನೌಕರರು ಸದಾಕಾಲ ಕ್ರೀಯಾಶೀಲರಾಗಿ ಮಕ್ಕಳೊಂದಿಗೆ ಬೆರೆಯುತ್ತಾರೆ. ಆದರೆ ಇತರ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ವರ್ಷಕ್ಕೊಂದು ಬಾರಿ ಈ ಅವಕಾಶ ಲಭಿಸುತ್ತದೆ.

ವಕೀಲರ ಆರ್ಥಿಕ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಂಘದ ಕಾರ್ಯ ಶ್ಲಾಘನೀಯ -ನ್ಯಾಯಮೂರ್ತಿ ರವಿ ವಿ. ಹೊಸಮನಿ

ಕೆಲಸದ ಒತ್ತಡ ಮತ್ತು ದೈನಂದಿನ ಚಟುವಟಿಕೆಗಳಲ್ಲಿ ಮನುಷ್ಯ ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸಾಂಸ್ಕøತಿಕ ಸ್ಪರ್ಧೆಗಳು ವ್ಯಕ್ತಿತ್ವ ವಿಕಸನಕ್ಕೆ ಮತ್ತು ಆರೋಗ್ಯ ಹೆಚ್ಚಳಕ್ಕೆ ಸಹಾಯವಾಗುತ್ತವೆ. ಪ್ರತಿಯೊಬ್ಬ ನೌಕರನು ತನ್ನಲ್ಲಿರುವ ಕಲೆಯನ್ನು ಇಂತಹ ವೇದಿಕೆಗಳಲ್ಲಿ ಅಭಿವ್ಯಕ್ತಗೊಳಿಸಬೇಕೆಂದು ಡಾ.ಲಿಂಗರಾಜ ಅಂಗಡಿ ಹೇಳಿದರು.

ಸರ್ಕಾರಿ ನೌಕರರ ಜಿಲ್ಲಾ ಕ್ರೀಡಾಕೂಟ ವಿವಿಧ ಸ್ಪರ್ಧೆಗಳ ಫಲಿತಾಂಶ ಪ್ರಕಟ

ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರು ಮಾತನಾಡಿ, ಕಲೆ, ಸಾಹಿತ್ಯ ಮತ್ತು ಜಾನಪದ ನೆಲೆಗಟ್ಟಿನ ನಾಡಾಗಿರುವ ಧಾರವಾಡ ಸದಾಕಾಲ ಸಾಂಸ್ಕøತಿಕ ಲೋಕದಲ್ಲಿ ಉನ್ನತ ಸ್ಥಾನದಲ್ಲಿದೆ. ಇಲ್ಲಿಯ ನೌಕರರು ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಪ್ರತಿವರ್ಷ ಬಹುಮಾನ ಗಳಿಸುವ ಮೂಲಕ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಮತ್ತು ಹೆಮ್ಮೆ ಮೂಡಿಸಿದ್ದಾರೆ.

ಯಾವ ದೇಶಕ್ಕೆ ಸಂಸ್ಕೃತಿ ಇದೆಯೋ ಆ ದೇಶಕ್ಕೆ ಭವಿಷ್ಯ ಇದೆ: ಮುಖ್ಯಮಂತ್ರಿ ಬೊಮ್ಮಾಯಿ‌

ಸರ್ಕಾರಿ ನೌಕರರ ವ್ಯಕ್ತಿತ್ವ ವಿಕಾಸಕ್ಕೆ ವಿವಿಧ ಪ್ರಕಾರದ ಸಾಂಸ್ಕøತಿಕ ಕಾರ್ಯಕ್ರಮಗಳು ಮುಖ್ಯವಾಗಿವೆ. ಧಾರವಾಡ ಜಿಲ್ಲೆಗೆ ಬಂದಿದ್ದ ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ರಾಜ್ಯಮಟ್ಟದ ಕ್ರೀಡಾಕೂಟ ಮತ್ತು ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಈಗ ರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯ ಶಕ್ತಿ, ಸಾಮಥ್ರ್ಯ, ಶಿಸ್ತು ಮತ್ತು ಸಾಹಿತ್ಯ, ಸಾಂಸ್ಕøತಿಕ ಸಿರಿಯನ್ನು ಹೆಚ್ಚಿಸಲು ರಾಷ್ಟ್ರೀಯ ಯುವಜನೋತ್ಸವ ಜಿಲ್ಲೆಗೆ ಬಂದಿದೆ. ಕಳೆದ ಎರಡು ದಿನಗಳಿಂದ ಕ್ರೀಡೆ ಮತ್ತು ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ನೌಕರ ಬಂಧುಗಳು ರಾಷ್ಟ್ರೀಯ ಯುವಜನೋತ್ಸವದಲ್ಲೂ ತಮ್ಮನ್ನು ಮನಪೂರ್ವಕ ತೊಡಗಿಸಿಕೊಳ್ಳುವ ಮೂಲಕ ಯಶಸ್ವಿಗೊಳಿಸಬೇಕೆಂದು ಅಪರ ಜಿಲ್ಲಾಧಿಕಾರಿ ನೌಕರರಲ್ಲಿ ಮನವಿ ಮಾಡಿದರು.

ಇಎನ್ಎಲ್ ದಿನ ಪಂಚಾಂಗ

ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಪಾಟೀಲ ಶಶಿ ಅವರು ಮಾತನಾಡಿ, ಮನುಷ್ಯನ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯದ ಮಧ್ಯೆ ಆಂತರಿಕ ಸಂಬಂಧವಿದೆ. ಎರಡೂ ಪರಸ್ಪರ ಪೂರಕ ಚಟುವಟಿಕೆಯಾಗಿರುವುದರಿಂದ ನೌಕರರ ಕೆಲಸದ ಮೇಲೆ ಒತ್ತಡ ಕಡಿಮೆ ಮಾಡಿ ಉಲ್ಲಾಸದಿಂದ ತೊಡಗುವಂತೆ ಮಾಡುತ್ತವೆ.

ಅಪಘಾತ: ಅಯ್ಯಪ್ಪನ ದರ್ಶನಕ್ಕೆ ತೆರಳಿದ್ದ ಧಾರವಾಡ ಬಾಲಕ ಧಾರುಣ ಸಾವು

ಪ್ರತಿಯೊಬ್ಬ ಸರ್ಕಾರಿ ನೌಕರನು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಸರ್ಕಾರದಿಂದ ಘೋಷಣೆಯಾಗಿರುವ ಆರೋಗ್ಯ ಸಂಜೀವಿನಿ ಯೋಜನೆಯಡಿ ಉತ್ತಮ ಆರೋಗ್ಯ ತಪಾಸಣೆ ಮತ್ತು ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಆರೋಗ್ಯ ಇಲಾಖೆಯು ಸರ್ಕಾರಿ ನೌಕರರ ಯೋಗಕ್ಷೇಮದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದೆ. ಪ್ರತಿ ವರ್ಷ ವಿವಿಧ ದಿನಾಚರಣೆಗಳ ಸಂದರ್ಭದಲ್ಲಿ ಉಚಿತವಾಗಿ ವಿವಿಧ ಖಾಯಿಲೆಗಳಿಗೆ ತಪಾಸಣೆ, ಚಿಕಿತ್ಸೆ ಮತ್ತು ಉಚಿತವಾಗಿ ಔಷಧಿಗಳನ್ನು ವಿತರಿಸುತ್ತಿದೆ. ಇದನ್ನು ನೌಕರರು ಮತ್ತು ಕುಟುಂಬ ಸದಸ್ಯರು, ಅವಲಂಬಿತರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಅವರು ಹೇಳಿದರು.

ಅಂಧರ ಬಾಳಿಗೆ ಬೆಳಕಾದ ಲೂಯಿಸ್ ಬ್ರೈಲ್

ಶಾಲಾ ಶಿಕ್ಷಣ ಮತ್ತು ಸುಧಾರಣೆ ಇಲಾಖೆ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ ಅವರು ಮಾತನಾಡಿ, ನೌಕರರು ಒತ್ತಡದ ನಡುವೆ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಅವರ ಕೆಲಸದ ಮೇಲೆ ಉತ್ತಮ ಪರಿಣಾಮ ಬೀರುತ್ತವೆ, ಸಂಗೀತ, ವಾದ್ಯ ನುಡಿಸುವ ಕಲಾವಿದರು ನಮ್ಮ ಶಿಕ್ಷಕರಾಗಿದ್ದಾರೆ ಎಂದು ಹೆಮ್ಮೆಯಿಂದ ಹೇಳಿದರು.

ಸಿದ್ದರಾಮಯ್ಯ ನೀಡಿದ್ದು ದೌರ್ಭಾಗ್ಯ : ಸಿಎಂ ಬೊಮ್ಮಾಯಿ

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಅಧ್ಯಕ್ಷ ಎಸ್.ಎಫ್. ಸಿದ್ಧನಗೌಡರ ಅವರು ಮಾತನಾಡಿ, ಸಾಂಸ್ಕøತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ಧಾರವಾಡ ಜಿಲ್ಲೆಯ ನೌಕರರು ಹೆಚ್ಚು ಆಸಕ್ತಿ ಮತ್ತು ಉತ್ತಮ ಸಾಧನೆಯನ್ನು ತೋರುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಸ್ಪರ್ಧೆಗಳಿಗಾಗಿ ನೌಕರರ ನೋಂದಣಿ ಹೆಚ್ಚಳವಾಗುತ್ತಿದೆ. ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಸಾಂಸ್ಕøತಿಕ ಮತ್ತು ಕ್ರೀಡಾ ಸ್ಪರ್ಧಾಳುಗಳಿಗೆ ಅನುಭವಸ್ಥ ಕಲಾಕಾರರು ಮತ್ತು ಕ್ರೀಡಾ ತರಬೇತುದಾರರಿಂದ ಉತ್ತಮವಾದ ತರಬೇತಿಯನ್ನು ನೀಡಲು ನೌಕರ ಸಂಘದಿಂದ ಪ್ರಯತ್ನಿಸುವುದಾಗಿ ಅವರು ಹೇಳಿದರು.

ಫೆಬ್ರವರಿ ತಿಂಗಳಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕøತಿ ಸ್ಪರ್ಧೆಗಳು ತುಮಕೂರು ಅಥವಾ ಬೆಂಗಳೂರಿನಲ್ಲಿ ನಡೆಯಲಿವೆ. ಕಳೆದ ಸಾಲಿನ ರಾಜ್ಯ ಸ್ಪರ್ಧೆಗಳಲ್ಲಿ ನಮ್ಮ ಜಿಲ್ಲೆಯ 20 ಜನ ನೌಕರರು ಪ್ರಶಸ್ತಿ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು. ಈ ವರ್ಷ 50 ಕ್ಕಿಂತಲೂ ಹೆಚ್ಚು ಜನ ನೌಕರರು ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸುವ ವಿಶ್ವಾಸವಿದೆ ಎಂದು ಅವರು ಹೇಳಿದರು.

ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಸಂಘದ ಪದಾಧಿಕಾರಿಗಳಾದ ದೇವಿದಾಸ್ ಶಾಂತಿಕರ್, ಆರ್.ಬಿ. ಲಿಂಗದಾಳ, ಮಲ್ಲಿಕಾರ್ಜುನ ಸೊಲಗಿ, ಮಂಜುನಾಥ ಯಡಳ್ಳಿ, ರಾಜಶೇಖರ್ ಬಾಣದ, ಗಿರೀಶ ಚೌಡಕಿ, ಸಾಂಸ್ಕøತಿಕ ಕಾರ್ಯದರ್ಶಿಗಳಾದ ಪಿ.ಬಿ. ಕುರುಬೆಟ್ಟ, ಬಿ.ಹೆಚ್. ಕುರಿಯವರ, ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಸುಬ್ಬಾಪೂರಮಠ, ಹಾಸ್ಯಕಲಾವಿದ ಮಹಾದೇವ ಸತ್ತಿಗೇರಿ, ರಾಜಶೇಖರ ಹೊನ್ನಪ್ಪನವರ, ರಾಜಶೇಖರ ಕೋನರೆಡ್ಡಿ ಹಾಗೂ ಇತರರು ಇದ್ದರು.

ಕಳೆದ ಸಾಲಿನಲ್ಲಿ ಬೆಂಗಳೂರಿನಲ್ಲಿ ಜರುಗಿದ ರಾಜ್ಯ ಮಟ್ಟದ ರಾಜ್ಯ ಸರ್ಕಾರಿ ನೌಕರರ ಸಾಂಸ್ಕøತಿಕ ಸ್ಪರ್ಧೆಯಲ್ಲಿ ಧಾರವಾಡ ಜಿಲ್ಲೆಯ ಪ್ರತಿನಿಧಿಸಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗರಾಜ ಗಿಣಿವಾಲ ರಾಷ್ಟ್ರಮಟ್ಟದ ಪಾಶ್ಚಿಮಾತ್ಯ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯಸ್ಥಾನ ಗಳಿಸಿ ವಿಜೇತರಾದ ನಿಮಿತ್ಯ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

Related posts

ಅರಿದೊಡೆ ಶರಣ : ಮರೆದೊಡೆ ಮಾನವ

eNEWS LAND Team

ರೈಲು ಸೇವೆಯ ರದ್ದತಿ / ಭಾಗಶಃ ರದ್ದತಿ ಹಾಗೂ ನಿಯಂತ್ರಣ

eNEWS LAND Team

ನಾಡೋಜ ಡಾ.ಚೆನ್ನವೀರ ಕಣವಿ ಆರೋಗ್ಯ ಚೇತರಿಕೆ ಸಿಎಂ ಭರವಸೆ

eNEWS LAND Team