ಇಎನ್‌ಎಲ್ ಅಣ್ಣಿಗೇರಿ: ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಇಂದು ಅ.10 ಅಣ್ಣಿಗೇರಿ ತಾಲೂಕ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಂದು ಅಣ್ಣಿಗೇರಿ ನವಲಗುಂದ ತಾಲೂಕಿನ ಸರ್ಕಾರಿ ಇಲಾಖೆಗಳ ಎಲ್ಲಾ ಅಧಿಕಾರಿಗಳು ಮುಖ್ಯಸ್ಥರು, ಭಾಗವಹಿಸುವರು. ಸಾರ್ವಜನಿಕರು ತಮ್ಮ ಕುಂದು ಕೊರೆತಗಳ ಬಗ್ಗೆ ತಹಶೀಲ್ದಾರ ಕಾರ್ಯಲಯಕ್ಕೆ ಬಂದು ಅರ್ಜಿ ಸಲ್ಲಿಸಬಹುದು. ಜಿಲ್ಲೆಯ 8 ತಾಲೂಕುಗಳಲ್ಲಿ ಜಿಲ್ಲಾಧಿಕಾರಿಯವರು ಪ್ರತಿ 15 ದಿನಕ್ಕೊಮ್ಮೆ ಜಿಲ್ಲೆಯ ತಾಲೂಕುಗಳಲ್ಲಿ ಜನತಾದರ್ಶನ ನಡೆಸುವರು. ಪ್ರಥಮವಾಗಿ ನಮ್ಮ ಅಣ್ಣಿಗೇರಿ ತಾಲೂಕಿನಲ್ಲಿ ಅ.೨೦ ರಂದು ಪಂಪಸ್ಮಾರಕ ಭವನದಲ್ಲಿ ಆಯೋಜಿಸಲಾಗಿದೆ. ತಾಲೂಕಿನ ೨೧ ಗ್ರಾಮಗಳ ಮಗ್ರಾಮಸ್ಥರು ತಮ್ಮ ಕುಂದು ಕೊರತೆಗಳ ಬಗ್ಗೆ ಮನವಿ ಸಲ್ಲಿಸಲು ಜನತಾ ದರ್ಶನಕ್ಕೆ ಬರಲು ಗ್ರಾಮೀಣ ಪ್ರದೇಶದಲ್ಲಿ ಡಂಗುರಾ ಮೂಲಕ ಪ್ರಚಾರ ಪಡಿಸಿದ್ದೇವೆ. ಬೆಳಿಗ್ಗೆ ೧೦-೦೦ ಗಂಟೆಯಿAದ ಜನತಾ ದರ್ಶನ ಕಾರ್ಯಕ್ರಮ ಜರುಗಲಿದೆ ಎಂದು ತಹಶೀಲ್ದಾರ ಶಿವಾನಂದ ಹೆಬ್ಬಳ್ಳಿ ಹೇಳಿದರು.
ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ತಾಲೂಕ ಆಡಳಿತ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ತಾಲೂಕ ಮಟ್ಟದಲ್ಲಿ ಸಾರ್ವಜನಿಕ ಕುಂದುಕೊರತೆ ಕೋಶಗಳನ್ನು ತೆರೆಯುವುದು, ಸದರಿ ಕೋಶಕ್ಕೆ ಗಣಕಯಂತ್ರ, ತಂತ್ರಾAಶದ ಜ್ಞಾನವಿರುವ ಅನುಭವಿಕ ಸಿಬ್ಬಂದಿಗಳನ್ನು ನೇಮಕ ಮಾಡುವುದು. ಸ್ವೀಕೃತವಾಗುವ ಅರ್ಜಿಗಳ ಬಗ್ಗೆ ನಿಗದಿತ ನಮೂನೆಯಲ್ಲಿ ಮಾಹಿತಿ ನೀಡುವುದು. ಹಾಗೂ ಅಂತಿಮವಾಗಿ ಸ್ವೀಕೃತವಾಗುವ ಯಾವತ್ತು ದೂರಗಳ ಮಾಹಿತಿ ಪತ್ರಿಕೆ ತಯಾರಿಸಿ ಸಲ್ಲಿಸುವುದು. ಸ್ವೀಕೃತವಾದ ಮನವಿಗಳನ್ನು ಸಾರ್ವಜನಿಕ ಕುಂದುಕೊರತೆ ನಿವಾರಣೆ ವ್ಯವಸ್ಥೆ( ಐ.ಪಿ.ಜಿ.ಆರ್.ಎಸ್. ) ತಂತ್ರಾAಶದಲ್ಲಿ ದಾಖಲಿಸುವುದು. ಸ್ವೀಕೃತವಾದ ಮನವಿಗಳನ್ನು ಸ್ವೀಕರಿಸಿದ ದಾಖಲಿಸಿದ ಬಗ್ಗೆ ಸಂಬAದಿಸಿದವರಿಗೆ ಸ್ವೀಕೃತಿ ಪತ್ರ ನೀಡುವುದು, ಸ್ವೀಕೃತವಾದ ಮನವಿಗಳು ಕಂದಾಯ ಇಲಾಖೆಗೆ ಸಂಬAಧಿಸಿದ್ದಾಗಿದ್ದಲ್ಲಿ ತಕ್ಷಣವೇ ಕ್ರಮ ಕೈಕೊಳ್ಳುವಂತಹದ್ದಾಗಿದ್ದಲ್ಲಿ, ನಿಯಮನುಸಾರ ಕ್ರಮಕೈಗೊಂಡು ವರದಿ ಸಲ್ಲಿಸುವುದು. ಬೇರೆ ಇಲಾಖೆಗಳಿಗೆ ಸಂಬAದಿಸಿದ್ದವುಗಳಾಗಿದ್ದಲ್ಲಿ ಅಂತಹವುಗಳನ್ನು ಸಂಬAದಿಸಿದ ಇಲಾಖೆಗೆ ಕಳುಹಿಸಿ ಕ್ರಮ ಕೈಗೊಂಡಿದ್ದಲ್ಲಿ ಅವುಗಳ ವಿವರಗಳ್ನು ಸಹ ನಡೆದುಕೊಂಡು ವರದಿ ಸಲ್ಲಿಸುವುದು. ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ವಾಯ್.ಜಿ.ಗದ್ದಿಗೌಡರ, ವಿಶೇಷ ತಹಶೀಲ್ದಾರ ಮಂಜುನಾಥ ದಾಸಪ್ಪನವರ, ತಾಲೂಕ ಅಡಳಿತ ಸಿಬ್ಬಂದಿವರ್ಗದ ಆರ್.ಬಿ.ಸಾರಂಗಿ, ಎಮ್.ಎಚ್. ಪಾಟೀಲ ಉಪಸ್ಥಿತರಿದ್ದರು.