ಇಎನ್‌ಎಲ್ ಅಣ್ಣಿಗೇರಿ: ಕನ್ನಡ ನೆಲ, ಜಲ, ಕನ್ನಡಭಾಷೆ, ಸಾಹಿತ್ಯ, ಸಂಸ್ಕçತಿ, ಪರಂಪರೆ, ಕುರಿತು ವಿದ್ಯಾರ್ಥಿಗಳು ಕನ್ನಡಾಭಿಮಾನ ಮೈಗೂಡಿಸಿಕೊಂಡು ಉಳಿಸಿ ಬೆಳೆಸುವಲ್ಲಿ ತೊಡಗಬೇಕೆಂದು ಪ್ರಾಂಶುಪಾಲರಾದ ಡಾ.ಬಿ.ಎಚ್.ಬುಳ್ಳನ್ನವರ ಹೇಳಿದರು.
ಪಟ್ಟಣದ ಎಂ.ಬಿ.ಹಳ್ಳಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೫೦ನೇ ಕರ್ನಾಟಕ ರಾಜ್ಯೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ವಿದ್ಯಾರ್ಥಿನಿ ಅಕ್ಷತಾ ಮಾತನಾಡಿ, ಕನ್ನಡ ಭಾವುಟ ಹಳದಿ ಕೆಂಪು ಬಣ್ಣದಾಗಿದೆ.ಅರಷಿಣ ಹಳದಿ ಬಣ್ಣವಾದರೇ ಕೆಂಪು ಕುಂಕುಮ ಬಣ್ಣ, ಕನ್ನಡ ಹೋರಾಟಗಾರ ಎಂ.ರಾಮಮೂರ್ತಿ ಹಳದಿ ಮತ್ತು ಕೆಂಪು ಬಣ್ಣದ ಭಾವುಟವನ್ನು ಸಿದ್ದಪಡಿಸಿದ್ದರು. ಹಳದಿ ಬಣ್ಣ ಶಾಂತಿ ಸೌಹಾರ್ಧತೆ ಸೂಚಿಸುತ್ತದೆ. ಕೆಂಪು ಬಣ್ಣ ಕ್ರಾಂತಿಯ ಸಂಕೇತವಾಗಿದೆ. ಇದು ಕನ್ನಡಾಂಭೆ ಭುವನೇಶ್ವರಿಯ ಅರಿಷಿನ ಕುಂಕುಮದ ಸಂಕೇತವಾಗಿದೆ ಎಂದರು.
ಕಾಲೇಜಿನ ಪ್ರಥಮ ದರ್ಜೆ ಸಹಾಯಕ ತಿಪ್ಪೇಶ ನಾಯಕ ಜೋಗದಸಿರಿ ಬೆಳಕಿನಲ್ಲಿ ಎಂಬ ಗೀತೆಯನ್ನು ಹಾಡುವ ಮೂಲಕ ಕನ್ನಡ ನಾಡಿನ ಹಿರಿಮೆ ಪಸರಿಸುವಂತೆ ಮಾಡಿದರು.
ದೈಹಿಕ ಶಿಕ್ಷಣ ನಿರ್ದೆಶಕ ಗೋರಖನಾಥ ಟಿಲೇ ಕನ್ನಡ ನಾಡಿನ ೫ ಗೀತೆಗಳನ್ನು ವಿದ್ಯಾರ್ಥಿ ಸಮೂಹದೊಂದಿಗೆ ಹಾಡಿ ಸಂಭ್ರಮಿಸಿದರು.ಅಧ್ಯಾಪಕರಾದ ಭಾರತಿ ಎಚ್. ಮಣ್ಣೂರ ನಿರೂಪಿಸಿದರು.
ಈ ಸಂದರ್ಭದಲ್ಲಿ ಅಧ್ಯಾಪಕರಾದ ವಿದ್ಯಾ ಹಡಗಲಿ, ಅಣ್ಣಪ್ಪ ರೊಟ್ಟಗವಾಡ, ಎಪ್.ಎ.ಅನಿ, ಶೋಭಾ ಕೀರ್ತಿಕಳ್ಳಿರ, ಉಪನ್ಯಾಸಕರು ವೃಂದ, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.