22.3 C
Hubli
ಜೂನ್ 13, 2024
eNews Land
ಸಣ್ಣ ಸುದ್ದಿ

ಅಣ್ಣಿಗೇರಿ: ಅಲ್ಲಮಪ್ರಭು ಜೀವನ ಚರಿತ್ರೆ ಪುರಾಣ ಪ್ರವಚನ

ಇಎನ್‌ಎಲ್ ಅಣ್ಣಿಗೇರಿ: ಶೂನ್ಯ ಸಂಪಾದನೆ ಅಂದರೆ ಬಯಲು ಗಳಿಕೆ, ತನ್ನ ಅನುಭವದ ನಿಲುವಿನಲ್ಲಿಯೇ ಬಯಲು ಗಳಿಸುವ ಕಲೆಯನ್ನು ಶರಣ ಸಂದೋಹಕ್ಕೆ ಕಲಿಸಲು ಹೊರಟವರು ಅಲ್ಲಮಪ್ರಭು. ವ್ಯಕ್ತಿಗತವಾದ ಬಯಲು (ಆತ್ಮ) ವಿಶ್ವಗತವಾದ ಬಯಲು (ಆತ್ಮ) ಅಂದರೆ ಜೀವಾತ್ಮ ಮತ್ತು ಪರಮಾತ್ಮ ಇವೆರಡು ಬೇರೆ ಬೇರೆಯಲ್ಲ. ಎರಡು ಒಂದೇ. ಶೂನ್ಯ ಸಂಪಾದನೆ ಅನುಭವಿಗಳ ಅಂತರoಗದಲ್ಲಿ ಸ್ಪುರಿಸಿದ ವಿವಿಧ ಮುಖ  ಅನುಭವಗಳ ಅಭಿವ್ಯಕ್ತಿಯನ್ನೋಳಗೊಂಡ ಅನುಭವ ಗ್ರಂಥ. ಅಲ್ಲಿ ಚರ್ಚಿತವಾಗುತ್ತಿದ್ದ ವಿಷಯಗಳ ಸ್ವರೂಪ ಮತ್ತು ವ್ಯಾಪಕತೆ ಪ್ರಧಾನವಾಗಿ ತತ್ವ ಸಿದ್ದಾಂತವನ್ನು ಕುರಿತದ್ದಲ್ಲ. ಅನುಭಾವದ ಕುರಿತದ್ದು. ಆದಿ ಮಧ್ಯ ಮುಕ್ತಾಯ ಎಲ್ಲೆಡೆಯಲ್ಲಿ ಪ್ರಭುದೇವರ ಉಪಸ್ಥಿತಿ ಕಂಡುಬರುತಿದೆ. ಬಯಲು ಬಯಲನೆ ಬಿತ್ತಿ ಬಯಲನೆ ಬೆಳೆದು ಬಯಲು ಬಯಲಾಗಿ ಬಯಲಾಯಿತ್ತಯ್ಯಾ ಬಯಲು ಜೀವನ ಬಯಲು ಭಾವನೆ ಬಯಲು ಬಯಲಾಗಿ ಬಯಲಾಯಿತಯ್ಯಾ ನಿಮ್ಮ ಪೂಜಿಸಿದವರು ಮುನ್ನವೇ ಬಯಲಾದರು ನಾ ನಿಮ್ಮ ನಂಬಿ ಬಯಾಲಾದೆ ಗುಹೇಶ್ವರಾ ಎಂದು ಅಲ್ಲಮಪ್ರಭುದೇವರ ನುಡಿಯ ತಾತ್ರ‍್ಯ ಸಂದೇಶದ ಕುರಿತು ಸೀತಾಗೇರಿ ಮಠದ ಸ.ಸ.ಡಾ.ಎ.ಸಿ.ವಾಲಿ ಮಹಾರಾಜರು ಪ್ರವಚನದಲ್ಲಿ ಹೇಳಿದರು.

ಪಟ್ಟಣದ ಪರಧೀರೇಶ್ವರ ದೇವಸ್ಥಾನ ಟ್ರಸ್ಟ್ ಮಂಡಳಿ ಕಾರ್ತಿಕ ಮಾಸದ 13ನೇ ವರ್ಷದ ಅಧ್ಯಾತ್ಮಿಕ ಪ್ರವಚನದ ನಿಮಿತ್ಯ ಹಮ್ಮಿಕೊಂಡ ಶ್ರೀ ಅಲ್ಲಮಪ್ರಭು ಜೀವನ ಚರಿತ್ರೆ ಪುರಾಣ ಮಂಗಲೋತ್ಸವ ಕಾರ್ಯಕ್ರಮದ ಪ್ರವಚನದಲ್ಲಿ ಮಾತನಾಡಿದರು.
ಸಾನಿಧ್ಯವಹಿಸಿದ ಮಣಕವಾಡದ ಅನ್ನದಾನೇಶ್ವರ ಮಠದ ಅಭಿನವ ಮೃತ್ಯುಂಜಯ ಶ್ರೀಗಳು ಮಾತನಾಡಿ ಇಂದಿನ ಉಚಿತ ಗ್ಯಾರಂಟಿಗಳಿoದ ಜನಸಾಮಾನ್ಯ ನಿತ್ಯ ಬಳಸುವ ದಿನಸಿ ಸಾಮಾಗ್ರಿಗಳು, ಇನ್ನಿತರ ವಸ್ತುಗಳು ಗಗನಕ್ಕೇರಿವೆ. ಆದರೆ ಕಡ್ಡಿಪಟ್ಟಣದ ಬೆಲೆ ಮಾತ್ರ ಎರಿಕೆಯಾಗಿಲ್ಲ. ಒಂದು ರೂಪಾಯಿ ಕಡ್ಡಿಪಟ್ಟಣದ ಒಂದು ಕಡ್ಡಿ  ಬೆಂಕಿ ಹಚ್ಚುತಿದೆ. ಬೆಂಕಿ ಹಚ್ಚುವ ಕೆಲಸ ಕಾರ್ಯಗಳಿಗೆ ಬೆಲೆ ಕಡಿಮೆಯಿದೆ. ಇನ್ನುಳಿದಂತೆ ಬೆಲೆ ಜನಸಾಮಾನ್ಯರ ಬದುಕಿಗೆ ಹೊರೆಯಾಗಿವೆ. ಸತ್ಕಾರ್ಯಕ್ಕೆ ಜ್ಯೋತಿ ಬೆಳಗಿಸಿ ಸದ್ಭಕ್ತರ ಬದುಕು ಬೆಳಕು ಚೆಲ್ಲುವ ಕಾರ್ಯಕ್ಕೆ ಕಾರ್ತಿಕ ಮಾಸದ ದೀಪೋತ್ಸವದಲ್ಲಿ ಜರುಗುತ್ತಿರುವ ಆಧ್ಯಾತ್ಮಪ್ರವಚನ ಜ್ಞಾನ, ಅನ್ನ, ಭಕ್ತಿ ದಾಸೋಹ ಮೂಲಕ ಸನ್ಮಾರ್ಗದಲ್ಲಿ ಸ್ವಸ್ತ ಸಮಾಜ ನಿರ್ಮಾಣಕ್ಕೆ ನಾಂದಿಯಾಗುತಿದೆ. ಗೋರಕ್ಷನಾಥನ ಅಹಂಕಾರ ತೊಡೆದು ಅಲ್ಲಮಪ್ರಭುಗಳು ವ್ಯೋಮಕಾಯದಿಂದ ನಿಜವಾದ ಅರಿವು ಮೂಡಿಸಿದರು. ಆಧ್ಯಾತ್ಮದ ಹೊಸ ಲೋಕವನ್ನು ಪರಿಚಯಸಿಕೊಟ್ಟರು. ಗುಣಾತ್ಮಕ ಕಾರ್ಯಕ್ರಮಗಳನ್ನು ನಡೆಸಿಕೊಡುವುದರಲ್ಲಿ ವರ್ಷದಿಂದ ವರ್ಷಕ್ಕೆ ಪುರಧೀರೇಶ್ವರ ದೇವಸ್ಥಾನ ಟ್ರಸ್ಟ್ ಮಂಡಳಿ ಆಯೋಜಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು. 

ಸನ್ಮಾನ ಸ್ವೀಕರಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತರಾದ ಕೃಷಿಕ್ಷೇತ್ರ ಸಾಧಕ ಡಿ.ಬಿ.ಪಾಟೀಲ ಮಾತನಾಡಿ ಪಾಳುಬಿದ್ದ ಗೋಮಾಳ ಕಲ್ಲುಭೂಮಿ ಹಸನಗೊಳಿಸಿ, ಅಡಿಕೆ, ತೆಂಗು, ಗೊಡಂಬಿ, ಬದಾಮಿ, ವಾಣಿಜ್ಯ ಬೆಳೆ ಬೆಳೆದು ಮಲೆನಾಡಿನ ಪ್ರದೇಶಕ್ಕಿಂತಲು ಹೆಚ್ಚು ಇಳುವರಿ ಬೆಳೆ ಬೆಳೆಯುತ್ತಿದ್ದನ್ನು ಪರಿಗಣಿಸಿ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಮುಂದಿನ ದಿನಮಾನಗಳಲ್ಲಿ ದೇಶದ ಜನರಿಗೆ ಅನ್ನ ನೀಡುವ ಅನ್ನದಾತರಿಗೆ ತುಂಬಾ ಬೆಲೆ ಬರುತ್ತದೆ ಎಂದರು.
ಅಣ್ಣಿಗೇರಿ ತಾಲೂಕಿನಲ್ಲಿ 20 ವರ್ಷ ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದನ್ನು ಪರಿಗಣಿಸಿ ಸರ್ಕಾರ ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಿದ ಪುರಸ್ಕೃತ ಬಸನಗೌಡ್ರ ಕುರಹಟ್ಟಿ, ರಾಜ್ಯೋತ್ಸವ ಪುರಸ್ಕೃತ ಕುಸ್ತಿಪಟು ಅಶೋಕ ಏಣಗಿ, ಹಿಂದುಸ್ತಾನಿ ಸಂಗೀತಗಾರರಾದ ನೀಲಾ ಎಂ.ಕೊಡ್ಲಿ, ರಂಗಭೂಮಿ ಕಲಾವಿದ ಹೆಚ್.ಬಿ.ಸರೋಜಮ್ಮ ಅತಿಥಿಗಳಾದ ನಾಗರಾಜ ಯಲಿಗಾರ, ವಿಜಯ ಗುಡ್ಡದ, ವಿರೇಶ ಕುಬಸದ, ರೇಣುಕಾ ಕೊಗ್ಗಿ, ಪುರಸಭೆ ಅಧ್ಯಕ್ಷೆ ಮೆಹಬೂಬಿ ನವಲಗುಂದ, ಉಪಾಧ್ಯಕ್ಷೆ ಜಯಲಕ್ಷ್ಮೀ ಜಕರಡ್ಡಿ, ಸ್ಥಾಯಿ ಸಮಿತಿ ಚೇರಮನ್ ಅಮೃತ ಮೀಸಿ,  ದೇವರಾಜ ದಾಡಿಬಾವಿ, ಈಶ್ವರಪ್ಪ ಉಳ್ಳಾಗಡ್ಡಿ, ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರ ಶಾಲಾ ಕಾಲೇಜಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಕ್ರೀಡೆ, ಸಾಹಿತ್ಯ, ಕ್ಷೇತ್ರದಲ್ಲಿರುವ ಸಾಧಕರನ್ನು ಟ್ರಸ್ಟ್ ಮಂಡಳಿ ಸನ್ಮಾನಿಸಿ ಗೌರವಿಸಿದರು. ಶ್ರೀ ನಿಮಿಷಾಂಭ ಜ್ಯೋತಿಶ್ರೀ ನಾಟ್ಯ ಅಕಾಡೆಮಿ ಗದಗ/ಅಣ್ಣಿಗೇರಿ  ತಂಡದವರಿoದ ಸಾಂಸ್ಕೃತಿ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಪುರಧೀರೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಶಿವಯೋಗಿ ಸುರಕೋಡ ಅಧ್ಯಕ್ಷತೆವಹಿಸಿದ್ದರು.
ಈ ಸಂದರ್ಭದಲ್ಲಿ ಟ್ರಸ್ಟ್ ಕಮಿಟಿ ಉಪಾಧ್ಯಕ್ಷ ಈಶ್ವರಪ್ಪ ಉಳ್ಳಾಗಡ್ಡಿ, ಈರಣ್ಣ ಅಳವಂಡಿ, ಶೇಖಪ್ಪ ಸೊಟಕನಾಳ, ಚಂದ್ರಣ್ಣ ಕೊಟ್ಟೂರ, ನಿಜಲಿಂಗಪ್ಪ ಅಕ್ಕಿ, ವೀರೇಶ ಕುಬಸದ,  ಸುರೇಶ ಜಿ.ಹಿರೇಮಠ, ಪುರದರ ಮುಂಡಾಸದ, ಗುರುಬಸಪ್ಪ ಕಲ್ಲೂರ, ಶಿವರಾಜ ಮುಂಡರಗಿ, ರಾಘವೆಂದ್ರ ಮುಂಡರಗಿ, ಪ್ರವೀಣ ಹಾಳದೋಟರ,  ಪುರದಪ್ಪ ಕೊಪ್ಪದ, ಮಾನಪ್ಪ ಪತ್ತಾರ, ರಾಜು ಹಳ್ಳಿಕೇರಿ, ಪರಮೇಶ್ವರಪ್ಪ ಹಳ್ಳಿ, ಸದ್ಭಕ್ತರು ಸುತ್ತಮುತ್ತಲಿನ ಗ್ರಾಮದ ಸದ್ಭಕ್ತರು, ಮಹಿಳೆಯರು, ಉಪಸ್ಥಿತರಿದ್ದರು.ವಿ.ಎಮ್.ಹಿರೇಮಠ ಸ್ವಾಗತಕೋರಿದರು. ಎಮ್.ವಿ.ಮುತ್ತಲಗೇರಿ ನಿರೂಪಿಸಿದರು. ಗಣೇಶ ಮಾಸ್ಟರ ತಂಡದಿoದ ಸಂಗೀತ ಕಾರ್ಯಕ್ರಮ ಜರುಗಿತು.

Related posts

ಅಣ್ಣಿಗೇರಿಯಲ್ಲಿ ಕಸಾಪ ಚುನಾವಣೆ ಪ್ರಚಾರ

eNEWS LAND Team

ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ; ಅರ್ಜಿ ಆಹ್ವಾನ

eNEWS LAND Team

ಶೇ.60 ಕ್ಕಿಂತ ಹೆಚ್ಚು ಅಂಕ ಪಡೆದ ಪ.ಜಾ ಮತ್ತು ಪ.ಪಂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ

eNEWS LAND Team