ಇಎನ್‌ಎಲ್ ಅಣ್ಣಿಗೇರಿ: ಕನ್ನಡ ಭಾಷೆ, ನೆಲ, ಜಲ, ಸಾಹಿತ್ಯ, ಪರಂಪರೆ, ಸಂಗೀತ, ನಾಟ್ಯ, ಸಂಸ್ಕೃತಿ, ಜನಪದ, ಶಿಲ್ಪಕಲೆ, ಚಿತ್ರಕಲೆ, ಲಲಿತ ಕಲೆಗಳ ನೆಲವಿಡು ನಮ್ಮ ಕನ್ನಡ ನಾಡು. ಕವಿಗಳು, ಜ್ಞಾನಪೀಠ ಪುರಸ್ಕೃತರು, ಸೃಷ್ಠಿ ಸೌಂದರ‍್ಯದ ಗಂಧದ ಸಿರಿನಾಡು, ಪಂಪ. ರನ್ನ. ಜನ್ನ. ಆದಿ ಕವಿಗಳ ತವರೂರು ನಮ್ಮ ಕನ್ನಡನಾಡು. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ, ಕೃಷಿ, ಕೈಗಾರಿಕೆ, ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಹಂತದಲ್ಲಿರುವ ನಾಡು ಕನ್ನಡ ನಾಡು. ಇಂದಿನ ವೈಜ್ಞಾನಿಕ ತಂತ್ರಜ್ಞಾನದಲ್ಲಿ ಅಭಿವೃದ್ಧಿ ಪಥದತ್ತ ದಾಪುಗಾಲು ಹಾಕುತ್ತಿರುವ ಕನ್ನಡ ನಾಡು ವೈಶಿಷ್ಟö್ಯತೆಗೆ ಹೆಸರಾಗಿದೆ. ಚಾಳುಕ್ಯರು, ರಾಷ್ಟçಕೂಟರು, ಗಂಗರು, ಕದಂಬರು, ವಿಜಯನಗರದ ಅರಸರು,ಕಲ್ಯಾಣದ ಚಾಲುಕ್ಯರು, ಹೆಸರಾಂತ ರಾಜ್ಯವಂಶ್ಥರು ಆಳಿದ ನಾಡು ಕನ್ನಡ ನಾಡು. ಕರುನಾಡಿನಲ್ಲಿ ಅನ್ನದಾತರು ಬೆಳೆಯುವ ಬೆಳೆ, ನಾಡಿನ ದಿಗ್ಗಜ ವಿಜ್ಞಾನಿಗಳು, ವಿದ್ವಾಂಸರು, ಸತ್ಪುರಷರು, ಮಹಾತ್ಮರು, ಯೋಗಿಗಳು ನೀಡಿದ ಕೊಡುಗೆ ಕುರಿತು ಉಪನ್ಯಾಸಕಿ ಡಾ.ಕವಿತಾ ಪ್ರಕಾಶ ಮೇಟಿ ಕನ್ನಡ ಸಂಸ್ಕೃತಿ ನಮ್ಮ ಹೆಮ್ಮೆ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.
ಅಣ್ಣಿಗೇರಿ ತಾಲೂಕ ಕಸಾಪ ಘಟಕ ಜಂಗಮ ಶ್ರೇಯೋಭಿವೃದ್ಧಿ ಸಂಘದ ಕಾರ್ಯಲಯದಲ್ಲಿ ದತ್ತಿ ಉಪನ್ಯಾಸ ಹಾಗೂ ಕವಿಗೋಷ್ಠಿ ಸುವರ್ಣ ಕರ್ನಾಟಕ ೫೦ ರ ಸಂಭ್ರಮದ ನಿಮಿತ್ಯ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದರು.
ಧಾ.ಜಿ.ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಮಾತನಾಡಿ, ಕನ್ನಡವೇ ನಮ್ಮ ಉಸಿರು, ಹಸಿರು, ಪ್ರಪಂಚ, ಕನ್ನಡ ನಾಡಿನ ಉಜ್ವಲಭವಿಷ್ಯ ರೂಪಿಸುವ ಹಿನ್ನಲೆಯಲ್ಲಿ ಭಾಷಾಭಿಮಾನ, ಸಂಸ್ಕೃತಿ ಪರಂಪರೆ ಉಳಿಸಿ ಬೆಳಿಸಿ, ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ಕನ್ನಡಮ್ಮನ ಸೇವೆಗೆ ಕಂಕಣಬದ್ಧರಾಗಿ ಸೇವೆಗೈಯುವ ಮನಸ್ಸುಗಳನ್ನು ಒಗ್ಗೂಡಿಸಿ, ಬಲಿಷ್ಟವಾಗಿ ರಕ್ಷಣೆ ಮಾಡುವ ದಿಸೆಯಲ್ಲಿ ತೊಡಗಬೇಕೆಂದು ಹೇಳಿದರು.
ದತ್ತಿ ದಾನಿಗಳಾದ ಸಿ.ಎಂ ವೇರ್ಣೆಕರ ಮಾತನಾಡಿ, ನಮ್ಮ ಹಿರಿಯರ ಹಾಕಿ ಕೊಟ್ಟ ಸನ್ಮಾರ್ಗದಲ್ಲಿ ಆದರ್ಶದ ಮೌಲ್ಯಗಳನ್ನು ಅಳವಡಿಸಿಕೊಂಡು ಸಾಧನೆ ಪಥದಲ್ಲಿ ಸಾಗಬೇಕಾದರೇ ಅವರ ಸ್ಮರಣೆ ಮೆಲಕು ಹಾಕಲು ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮ ಆಯೋಜಿಸುತ್ತಿರೋದು ಶ್ಲಾಘನೀಯ.ಯಾವುದೇ ಸತ್ಕಾರ್ಯಗಳು ಸಮಾಜದಲ್ಲಿ ನಡೆದರೂ ನಾನೇ ಮನಪೂರ್ವಕವಾಗಿ ದಾನ ಮಾಡೋದನ್ನು ರೂಢಿಸಿಕೊಂಡು ಬಂದಿರುವೆ. ಆ ಹಿನ್ನಲೆಯಲ್ಲಿ ಮನೆಗೆದ್ದು ಸಮಾಜಗೆದ್ದ ಹಿರಿಯರ ಆದರ್ಶ ಸ್ಮರಿಸುವ ಸುದೀನವಾಗಿ ಕಸಾಪ ಕಾರ್ಯಚಟುವಟಿಕೆ ಮಾಡುತಿದೆ. ಕನ್ನಡ ಪ್ರೇಮ ನಾಡು ನುಡಿ ಸಮಾಜಕ್ಕೆ ಸೇವೆ ಸಲ್ಲಿಸಿದ್ದನ್ನು ಪರಿಗಣಿಸಿ ಹಿರಿಯರ ಹೆಸರಲ್ಲಿ ದತ್ತಿ ದಾನಿಗಳು ನೀಡಿದ ಸಾಹಿತ್ಯ ಪರಿಷತ್‌ಗೆ ೨೫ ಸಾವಿರ ಹಣದ ಬಡ್ಡಿ ಹಣದಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ದತ್ತಿ ಉಪನ್ಯಾಸ ಕವಿಗೋಷ್ಟಿ ಕಾರ್ಯಕ್ರಮ ನಡೆಸುತ್ತಿರೋದು ಸಂತಸ ತಂದಿದೆ ಎಂದರು.
ದತ್ತಿದಾನಿಗಳಾದ ಲಿಂ ಚನ್ನಬಸಪ್ಪ ದಾ.ಹೂಗಾರ ಲಿಂ. ಮಹಾಂತವ್ವ ಚ.ಹೂಗಾರ, ದಿ.ಪಾರ್ವತಿದೇವಿ ಮಾಳಶೇಠ ವೆರ್ಣೆಕರ,ಲಿಂ ಹನಮಂತಗೌಡ ಬಸನಗೌಡ ಪಾಟೀಲ ಮುನೇನಕೊಪ್ಪ ಸಂಸ್ಕರಣ ದತ್ತಿ ನೀಡಿದ ಕುಟುಂಬಸ್ಥರಾದ ಸಿ.ಎಂ ವೇರ್ಣೆಕರ, ಪ್ರಭಾವತಿ ಶಂಕರ ಪಾಟೀಲ ಮುನೇನಕೊಪ್ಪ, ಅರುಣಕುಮಾರ ಚ.ಹೂಗಾರ, ಅವರನ್ನು ಕಸಾಪದಿಂದ ಸನ್ಮಾನಿಸಲಾಯಿತು.
ಹುಬ್ಬಳ್ಳಿ ಮಹಾವೀರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್.ಕೆ ಆದಪ್ಪನವರು ಮಾತನಾಡಿ ಅಣ್ಣಿಗೇರಿ ತಾಲೂಕ ಕಸಾಪ ಘಟಕಕ್ಕೆ ಕಾರ್ಯಲಯ ಅವಶ್ಯಕತೆಯಿದ್ದು, ದಾನಿಗಳಿಂದ ನಿವೇಶನ ಸಹಕಾರ ಪಡೆದು ಕಟ್ಟಡ ನಿರ್ಮಾಣಕ್ಕೆ ಕಾರ್ಯೋನ್ಮುಖರಾಗಬೇಕು. ನ್ಯಾವಳ್ಳಿ ದಾನಿಗಳು ನಿವೇಶನ ನೀಡುವ ಭರವಸೆ ಕೊಟ್ಟಿದ್ದಾರೆ. ತಾವೂ ದಾನಿಗಳನ್ನು ಸಂಪರ್ಕಿಸಿ ಸಹಕಾರ ಪಡೆಯಬೇಕೆಂದರು.
ಧಾ.ಜಿ.ಕಸಾಪ ಕಾರ್ಯದರ್ಶಿ ಪ್ರೊ ಕೆ.ಎಸ್.ಕೌಜಲಗಿ ಮಾತನಾಡಿ ಕನ್ನಡ ಭಾಷೆ ಉಳಿಸಿ ಬೆಳೆಸುವಲ್ಲಿ ಅಗತ್ಯ ಕ್ರಮಗಳನ್ನು ಬಳಿಸಿಕೊಂಡು ಪ್ರತಿ ತಿಂಗಳು ಶಾಲೆ ಕಾಲೇಜುಗಳಲ್ಲಿ ಕಸಾಪ ಕಾರ್ಯಕ್ರಮ ಆಯೋಜಿಸಿ, ಕನ್ನಡ ಭಾಷೆ ಬಗ್ಗೆ ಮನಸ್ಸು ಕಟ್ಟುವ ಕೆಲಸ ಮಾಡಬೇಕೆಂದರು.
ಅಣ್ಣಿಗೇರಿ ತಾಲೂಕಿನ ಕಸಾಪ ಅಧ್ಯಕ್ಷೆ ಡಾ.ಲಲಿತಾ ಎನ್.ಸಾಲಿಮಠ ಅಧ್ಯಕ್ಷತೆವಹಿಸಿದ್ದರು. ಕವಿಗೋಷ್ಠಿಯಲ್ಲಿ ೨೦ ಕವಿಗಳು ಕವನ ವಾಚಿಸಿದರು. ಕಸಾಪದಿಂದ ಪ್ರಮಾಣ ಪತ್ರ ನೀಡಿ ಕವಿಗಳನ್ನು ಗೌರವಿಸಲಾಯಿತು. ಎನ್.ಎಸ್.ಮೇಲ್ಮುರಿ ಪ್ರಾಸ್ತವಿಕವಾಗಿ ಮಾತನಾಡಿದರು. ಕಸಾಪ ಹೋಬಳಿ ಘಟಕದ ಅಧ್ಯಕ್ಷ ವಿ.ಡಿ.ಅಂದಾನಗೌಡ್ರ ಸ್ವಾಗತಕೋರಿದರು.ಭದ್ರಪೂರ ಗಣೆಶ ಮಾಸ್ಟರ, ಸುಭಾಷ್‌ಚಂದ್ರ ಹೊಸಮನಿ, ಪ್ರಶಾಂತ ಹಂದಿಗೋಳ, ಮಲ್ಲೇಶಪ್ಪ ಪೂಜಾರ ಸಂಗೀತದೊAದಿಗೆ ಪ್ರಾರ್ಥಿಸಿದರು. ಶ್ರೀದೇವಿ ಎಮ್.ಪಾಟೀಲ ನಿರೂಪಿಸಿದರು. ಎ.ವಿ.ಶೆಟ್ಟರ ವಂದಿಸಿದರು.
ಈ ಸಂದರ್ಭದಲ್ಲಿ ಅಣ್ಣಿಗೇರಿ ತಾಲೂಕ ಕಸಾಪ ನಿಕಟಪೂರ್ವ ಅಧ್ಯಕ್ಷ ರವಿರಾಜ ವೆರ್ಣೆಕರ, ಎನ್.ಎಸ್.ದೊಡ್ಡಮನಿ, ಅರ್ಜುನ ಎನ್.ಕಲಾಲ, ವಿ.ಎ.ಸಗರದ,ಜಿ.ಕೆ ಅಣ್ಣಿಗೇರಿ, ಯಲ್ಲಪ್ಪ ದುಂದೂರ, ಶಶಿಕಲಾ ಯಮನೂರ, ಶಶಿಕಲಾ ಅಂತಣ್ಣವರ, ಶಾಂತಮ್ಮ ಹೊಂಬಾಳಿಮಠ, ಶಕುಂತಲಾ ಬೆಂಡಿಗೇರಿ, ಪ್ರಭಾವತಿ ಯಳವತ್ತಿ, ಕವಿತಾ ಬಿರಸಲ್, ಚೆನ್ನಮ್ಮ ನವಲಗುಂದ, ಹಾಗೂ ಬೆಳವಡಿ ಮಲ್ಲಮ್ಮ ಮಹಿಳಾ ಮಂಡದ ಅಧ್ಯಕ್ಷರು ಸರ್ವ ಸದಸ್ಯರು, ಕಸಾಪ ಪದಾಧಿಕಾರಿಗಳು, ಸದಸ್ಯರು, ಉಪಸ್ಥಿತರಿದ್ದರು.