34 C
Hubli
ಫೆಬ್ರವರಿ 28, 2024
eNews Land
ಆಧ್ಯಾತ್ಮಿಕ ಸುದ್ದಿ

ಅರಿದೊಡೆ ಶರಣ : ಮರೆದೊಡೆ ಮಾನವ

ಇಎನ್‌ಎಲ್ ಅಣ್ಣಿಗೇರಿ: ಬಸವಾದಿ ಪ್ರಮಥರೆಲ್ಲರೂ ಆತ್ಮಾನುಭೂತಿಯನ್ನು ಹೊಂದಿದವರು. ಯಾವುದೇ ಧರ್ಮ ಹುಟ್ಟು ಹಾಕಲಿಲ್ಲ. ಅವರೆಲ್ಲ ಹುಟ್ಟುಹಾಕಿದ ಧರ್ಮವೇ ಆತ್ಮಧರ್ಮ. ಅದುವೇ ಶರಣ ಧರ್ಮ ಆತ್ಮದ ಅರಿವಿನಿಂದ ಅತ್ಮವನ್ನು ಕಂಡುಕೊoಡುವನೇ ಶರಣ. ತನ್ನ ಆತ್ಮದ ಸ್ವರೂಪವನ್ನು ಮರೆತವನೇ ಮಾನವ. ಅರಿದೊಡೆ ಶರಣ ಮರೆದೊಡೆ ಮಾನವ ಎನ್ನುತ್ತಾರೆ ಶರಣರು ಎಂದು ಚಿತ್ರದುರ್ಗ ಮುರಘರಾಜೇಂದ್ರ ಬೃಹನ್ಮಠದ ಡಾ.ಶಿವಮೂರ್ತಿ ಮುರಘಾ ಶರಣರು ಆರ್ಶಿವಚನದಲ್ಲಿ ನುಡಿದರು.

ಇದನ್ನೂ ಓದಿ: ಸರಿಯಾದ ಮಾರ್ಗದಲ್ಲಿ ನಡೆಯೋದು ಯೋಗ: ವಚನಾನಂದಶ್ರೀ 

ತಾಲೂಕಿನ ಮಣಕವಾಡ ಗ್ರಾಮದಲ್ಲಿ ಜರುಗಿದ ಅಜ್ಜನ ಸಂಭ್ರಮ ಆರನೇ ದಿನದ ಶಿವಾನುಭವ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಶರಣ ಎಂದರೆ ಶರೀರವಲ್ಲ, ಅವಿನಾಶಿಯಾದ ಆತ್ಮನಿದ್ದೇನೆ ಎಂದರಿತವನು, ಆತ್ಮಸ್ವರೂಪದಲ್ಲಿ ನಿಂದವರು ಎಂದರ್ಥ. ಜಗತ್ತಿನ ಪ್ರತಿಯೊಬ್ಬ ಮಾನವರು ಪ್ರಯತ್ನಿಸಿದರೇ ಶರಣರಾಗಬಹುದು. ಶರಣನು ಯಾವುದೇ ಒಂದು ಧರ್ಮ, ಮತ, ಪಂಥ, ಪಂಗಡಕ್ಕೆ ಸೇರಿದವನಲ್ಲ. ತನ್ನದೇಯಾದ ಧರ್ಮಕ್ಕೆ ಒಳಪಟ್ಟವನೆ ಶರಣ. ಯಾವುದೇ ಮನುಷ್ಯ ಯಾವುದೋ ಧರ್ಮಕ್ಕೆ ಹುಟ್ಟಿದವನಲ್ಲ. ಪ್ರತಿಯೊಬ್ಬರಿಗೂ ಒಂದು ಧರ್ಮವಿದೆ. ಅದು ತನ್ನಾತ್ಮ ಧರ್ಮ. ಆ ಆತ್ಮಧರ್ಮವೆ ಶರಣಧರ್ಮ. ಆತ್ಮಾನುಭಾವದ ಅರಿವನ್ನು ಹೊಂದಿದವನೇ ಶರಣ ಎನ್ನುತ್ತಾರೆ ಪ್ರಭುದೇವರು. ಅಜ್ಜನ ಸಂಭ್ರದಲ್ಲಿ ಪಾಲ್ಗೊಂಡ ಭಕ್ತಸಮೂಹದ ಶರಣರು. ಗ್ರಾಮೀಣ ಪ್ರದೇಶದಲ್ಲಿ ಮಣಕವಾಡ ಅನ್ನದಾನೇಶ್ವರ ಮಠದ ಶ್ರೀ ನೇತ್ರತ್ವದಲ್ಲಿ ಶಿವಾನುಭಗೋಷ್ಠಿ, ಧಾರ್ಮಿಕ ಕಾರ್ಯಕ್ರಮಗಳು, ಅರಿದ ಅಚರಿಸುವ ಮೂಲಕ ಗ್ರಾಮೀಣಾಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಮುನ್ನಡೆಯುತ್ತಿರೋದು ಶ್ಲಾಘನೀಯವೆಂದು ಹೇಳಿದರು.

ಇದನ್ನೂ ಓದಿ:ಮಾಡುವಂತಿರಬೇಕು ಮಾಡದಂತಿರಬೇಕು, ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು.

ಮುನವಳ್ಳಿ ಸೋಮಶೇಖರ ಮಠದ ಮುರಘೇಂದ್ರ ಶ್ರೀಗಳು ಆರ್ಶೀವಚನದಲ್ಲಿ ಬದುಕಿನಲ್ಲಿ ಕೆಲಸ ಮಾಡಬೇಕಾದರೆ ಕೈಗಳು ಕೆಟ್ಟ ಕೆಲಸ ಮಾಡುತ್ತವೆ. ಕಿವಿಗಳು ಕೆಟ್ಟಿದ್ದನ್ನು ಕೇಳುತ್ತವೆ. ಕಣ್ಣುಗಳು ನೋಡುತ್ತವೆ. ಮನಸ್ಸು ಕೊಳೆಯಾಗುತ್ತದೆ. ಆಗ ನೀನು ಅದನ್ನು ನೀರಲ್ಲಿ ತೊಳೆ.

ಇದನ್ನೂ ಓದಿ:ಅಂತರoಗದ ಪೂಜೆ, ಬಹಿರಂಗದ ವ್ಯವಹಾರದಲ್ಲಿ ವ್ಯಕ್ತವಾಗಬೇಕು.

ಎಂಥ ನೀರು? ಸ್ವಚ್ಚವಾದ ನೀರು. ಮಹಾನುಭಾವರ ಮಾತುಗಳು ಸ್ವಚ್ಛವಾದ ನೀರು. ಸತ್ಸಂಗ ನೀರು, ದಾಸರ, ಶರಣರ ನುಡಿಗಳು ನೀರು ಅಂಥ ನೀರಿನಲ್ಲಿ ಬದುಕಿನ ಬಟ್ಟೆಯನ್ನು ಸ್ವಚ್ಛ ಮಾಡಿಕೊಳ್ಳಬೇಕು. ಕಾಂಬ ಕಣ್ಗಳೆರಡು, ಬಾಯಿ ಒಂದೇ ಎಕೆ? ಕೇಳ್ವ ಕಿವಿಗಳೆರಡು ನಾಲಗೆ ಒಂದೇ ಎಕೆ? ಕೈಗಳೆರಡು ಮುಖ ಒಂದೇ ಎಕೆ? ಎಕೆಂದರೆ ಇಮ್ಮಡಿ ನೋಡೋದು, ಒಮ್ಮಡಿ ಮಾತನಾಡೋದು. ಇಮ್ಮಡಿ ಕೇಳೋದು ಒಮ್ಮಡಿ ನಾಲಗೆ ಮೇಲೆ ಇಡೋದು. ಇಮ್ಮಡಿ ದುಡಿಯೋದು, ಒಮ್ಮಡಿ ಉಣ್ಣೋದು. ಈ ರೀತಿ ಸತ್ಸಂಗ ಲಿಂ.ಮೃತ್ಯುಂಜಯ ಶ್ರೀಗಳ ಅಜ್ಜನ ಸಂಭ್ರಮದ ಶಿವಾನುಭವದಲ್ಲಿ ಬೆಳೆದರೆ ಬದುಕು ಶ್ರೀಮಂತವಾಗುತ್ತ ಸಾರ್ಥಕವಾಗುತ್ತದೆ ಎಂದು ನುಡಿದರು.

ಇದನ್ನೂ ಓದಿ:ಶರಣ ಧರ್ಮದ-ಲಿಂಗಾಯತ ಧರ್ಮದ ತಿರುಳು: ವ್ಯಕ್ತಿಯ ನೈತಿಕ ಬದುಕಿನ ಹುರುಳು

ಸೀತಾಗಿರಿ ಕ್ಷೇತ್ರದ ಸ.ಸ.ಡಾ.ಎ.ಸಿ.ವಾಲಿ ಆರ್ಶೀವಚನದಲ್ಲಿ ಭಗವಂತನನ್ನು ಕಾಣಲು ಮಂದಿರ, ಗುಡ್ಡಬೆಟ್ಟ, ದೇಗುಲ, ತೀರ್ಥಕ್ಷೇತ್ರದ ತಾಣಕ್ಕೆ ಹೋಗಬೇಕಿಲ್ಲ ಹೋಗಬಾರದೆಂದೂ ಅಲ್ಲ. ದೇವರ ಕಾಣುವುದಕ್ಕೆ ಅದಕ್ಕೂ ಸಂಬoಧ ಅಷ್ಟಕ್ಕಷ್ಟೇ. ಹೃದಯದಲ್ಲಿ ಮಧುರಸ ತುಂಬಿಕೊoಡು ಎಲ್ಲಿ ಹೋದರೂ ಸರಿ, ಎನು ದೃಷ್ಟಿಸಿದರೂ ಸರಿ, ಅಲ್ಲಿ ಭಗವದ್ಧರ್ಶನ ಸೌಂದರ್ಯ ಆನಂದ ರೂಪದಲ್ಲಿ ಪ್ರಾಪ್ತವಾಗುತ್ತದೆ. ಸೌಂದರ್ಯ ಕೇವಲ ರೂಪದಲ್ಲಲ್ಲ ಶಬ್ದ, ಸ್ಪರ್ಶ, ರಸ ಗಂಧಗಳಲ್ಲೂ ಇದೆ. ಐದಿಂದ್ರಿಯ ಬಳಸುವಾಗ ಕಂಡುದೆಲ್ಲ ಸವಿ! ಸವಿಯಾದುದೆಲ್ಲ ದೇವನೇ!ಮೋಹ, ಮದ, ದ್ವೇಷ, ಅಸೂಹೆ, ಅಹಂಗಳಿಗಾಗ ಅವಕಾಶವೇ ಇಲ್ಲ. ಅವುಗಳ ಅಭಾವವೇ ಮನಸ್ಸಿನ ಮಧುರತೆ! ಮಧುರತೆಯನ್ನು ದೇಹ ವಚನ ಮನಸ್ಸಿನ ಮೂಲಕ ಹೊರಹೊಮ್ಮಿಸುವುದೇ ಭಗವಚ್ಚಿಂತನ!! ಎಂದು ನುಡಿದರು.

ಇದನ್ನೂ ಓದಿ:ಧರ್ಮದ  ಮಾನವೀಯ ಮೌಲ್ಯಗಳೇ ಸಮಾಜಕ್ಕೆ ಪೂರಕ: ಬಸವಲಿಂಗ ಶ್ರೀಗಳು
ಸಾನಿಧ್ಯವಹಿಸಿದ್ದ ಅಭಿನವ ಮೃತ್ಯುಂಜಯ ಶ್ರೀಗ ಶಿವನಗಿಂತ ಮೊದಲು ಗುರುವನ್ನು ತಿಳಿಯಬೇಕು. ದು:ಖ, ನೋವು, ಆತಂಕ, ಅಜ್ಞಾನಗಳಿಂದ ನಮ್ಮನ್ನು ಕಾಪಾಡಿ ಸುಖ, ಸಂತೋಷ, ಅಭಯ, ಸುಜ್ಞಾನದೆಡೆಗೆ ದಾರಿತೋರಿಸುವ ಗುರು. ಸುಜ್ಞಾನಸಾಗರ, ಕರುಣೆಯ ಕಡಲು, ಭಕ್ತಿ ಜ್ಞಾನಗಳ ಸಂಗಮ, ಎಲ್ಲದಕ್ಕೂ ಪ್ರಥಮನಾದ ಗುರು. ದೇವರನ್ನು ಕಾಣುವ ಮೊದಲು ಕಣ್ಣಿಗೆ ಕಾಣುವ ಅರಿವನ್ನು ಪಡೆದ ಗುರುವನ್ನು ಕಂಡು ಸತ್ಯದ ಮಾರ್ಗವನ್ನು ಕಂಡುಕೊಳ್ಳಿ ಎನ್ನುತ್ತಾರೆ ಅಲ್ಲಮಪ್ರಭುದೇವರು “ ಶಿವಪಥನರಿವೊಡೆ ಗುರುಪಥವ ಮೊದಲು” ಶಿವನದರ್ಶನಕ್ಕೆ ಮೊದಲು ಗುರುದರ್ಶನ ಪಡೆದುಕೊಳ್ಳಿ ಎಂದು ಆರ್ಶೀವಚನದಲ್ಲಿ ನುಡಿದರು.
ಈ ಸಂದರ್ಭದಲ್ಲಿ ಮಹೇಂದ್ರ ಸಿಂಘಿ, ಸಿ.ಜಿ.ಪಾಟೀಲ, ವೀರನಗೌಡ ಮರಿಗೌಡ್ರ, ರಾಜಶೇಖರ ಕಟ್ಟೆಗೌಡ್ರ, ಅರುಣ ಅಣ್ಣಿಗೇರಿ, ಉಪಸ್ಥಿತರಿದ್ದರು. ಸಾಮರಸ್ಯ ಕಲಾತಂಡ ಛಬ್ಬಿ ಕಲಾರಾಧ ಕಲಾತಂಡ ಕಲಘಟಗಿ, ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ತಾಲೂಕಿನ ಸುತ್ತಮುತ್ತಲಿನ ಸದ್ಭಕ್ತರು ಭಾಗವಹಿಸಿದ್ದರು ವಿರೇಶ ಕುಬಸದ ನಿರೂಪಿಸಿದರು.

Related posts

ಹುಬ್ಬಳ್ಳಿ ವಾ.ಕ.ರ.ಸಾ.ಸಂಸ್ಥೆಯಲ್ಲಿ : ವಾಲ್ಮೀಕಿ ಜಯಂತಿ

eNEWS LAND Team

ಕಲಘಟಗಿ:ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಗಳ ಭೇಟಿ

eNewsLand Team

ಮಿನಿ ಉದ್ಯೋಗ ಮೇಳ: ನವನಗರ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ

eNEWS LAND Team