26.4 C
Hubli
ಏಪ್ರಿಲ್ 18, 2024
eNews Land
ಸುದ್ದಿ

ರೈಲು ಸೇವೆಯ ರದ್ದತಿ / ಭಾಗಶಃ ರದ್ದತಿ ಹಾಗೂ ನಿಯಂತ್ರಣ

ಇಎನ್ಎಲ್ ಮಾಹಿತಿ ಡೆಸ್ಕ್: 
ಕರಜಗಿ ಮತ್ತು ಸವನೂರು ರೈಲ್ವೆ ನಿಲ್ದಾಣಗಳಲ್ಲಿ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಕೈಗೊಂಡಿರುವ ನಿಮಿತ್ತ, ದಿನಾಂಕ 24.12.2021 ಹಾಗೂ 27.17.2021ರಂದು, ರೈಲು ಸಂಖ್ಯೆ 07347 ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ- ಚಿತ್ರದುರ್ಗ ವಿಶೇಷ ಎಕ್ಸ್ಪ್ರೆಸ್ ಮತ್ತು ರೈಲು ಸಂಖ್ಯೆ 07348 ಚಿತ್ರದುರ್ಗ- ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ವಿಶೇಷ ಎಕ್ಸ್ಪ್ರೆಸ್ ಈ ರೈಲು ಸೇವೆಗಳು ರದ್ದಾಗಿರುತ್ತವೆ.

ದಿನಾಂಕ 24.12.2021 ಹಾಗೂ 27.12.2021 ರಂದು ರೈಲು ಸಂಖ್ಯೆ 07367 ಅರಸೀಕೆರೆ- ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಪ್ಯಾಸೆಂಜರ್ ಹಾವೇರಿ ವರೆಗೆ ಮಾತ್ರ ಚಲಿಸುತ್ತದೆ (ಹಾವೇರಿ ಮತ್ತು ಹುಬ್ಬಳ್ಳಿ ನಡುವೆ ರದ್ದಾಗಿರುತ್ತದೆ) ಹಾಗೂ ರೈಲು ಸಂಖ್ಯೆ 07368 ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ – ಅರಸೀಕೆರೆ ಪ್ಯಾಸೆಂಜರ್ ಹಾವೇರಿಯಿಂದ ಚಲಿಸುತ್ತದೆ (ಹುಬ್ಬಳ್ಳಿ ಮತ್ತು ಹಾವೇರಿಯ ನಡುವೆ ಭಾಗಶಃ ರದ್ದಾಗಿರುತ್ತದೆ)

ದಿನಾಂಕ 24.12.2021ರಂದು ರೈಲು ಸಂಖ್ಯೆ 17325 ಬೆಳಗಾವಿ – ಮೈಸೂರು ಎಕ್ಸ್ಪ್ರೆಸ್ ಮಾರ್ಗ ಮಧ್ಯದಲ್ಲಿ 50 ನಿಮಿಷ ಹಾಗೂ ದಿ. 27.12.21 ರಂದು ಮಾರ್ಗ ಮಧ್ಯದಲ್ಲಿ 80 ನಿಮಿಷ ನಿಯಂತ್ರಿತಗೊಳಿಸಲಾಗುವುದು ಎಂದು ಹುಬ್ಬಳ್ಳಿ ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ ಹೆಗಡೆ ತಿಳಿಸಿದ್ದಾರೆ.

Related posts

ಅಣ್ಣಿಗೇರಿ: ಭಾರತ ಗ್ಯಾಸ ವಿತರಕರ ಪ್ರಗತಿ ಪರಿಶೀಲನಾ ಸಭೆ

eNEWS LAND Team

ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಮಾಹಿತಿ ಕೊಡುತ್ತೇನೆ: ಎಸ್.ವಿಜಯಕುಮಾರ

eNEWS LAND Team

ದಿವಾಳಿ ಆಗಿಲ್ಲ: ಕಲಘಟಗಿ ಅರ್ಬನ್ ಬ್ಯಾಂಕ್ ಸ್ಪಷ್ಟಣೆ

eNEWS LAND Team