28 C
Hubli
ಫೆಬ್ರವರಿ 3, 2023
eNews Land
ಜಿಲ್ಲೆ

ಅಪಘಾತ: ಅಯ್ಯಪ್ಪನ ದರ್ಶನಕ್ಕೆ ತೆರಳಿದ್ದ ಧಾರವಾಡ ಬಾಲಕ ಧಾರುಣ ಸಾವು

Listen to this article

ಇಎನ್ಎಲ್ ಧಾರವಾಡ

ಅಯ್ಯಪ್ಪಸ್ವಾಮಿ ದರ್ಶನಕ್ಕೆ ತೆರಳಿ ಮರಳಿ ಬರುವ ಸಂದರ್ಭದಲ್ಲಿ ಕೇರಳದ  ಮಣಪ್ಪುರಂ ಜಿಲ್ಲೆಯ ಎಡಪ್ಪಾಲ ಬಳಿ ಅಪಘಾತದಲ್ಲಿ ಧಾರವಾಡದ ಸೈದಾಪುರದ ಅಯ್ಯಪ್ಪ‌ಸ್ವಾಮಿ ಭಕ್ತ 10ವರ್ಷದ ಮಗು ಸುಮಿತ ಪಾಂಡೆ ಮೃತಪಟ್ಟಿದ್ದಾನೆ.
ಅಪಘಾತದಲ್ಲಿ  ಸೂರಜ ಪಾಂಡೆ ನಿಖಿಲ‌ಪಾಂಡೆ ಸುಶಾಂತ ಪಾಂಡೆ ಎಸ ಪಾಂಡೆ ಅವರಿಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಿಷಯ ತಿಳಿದ ಮಹಾಪೌರರು ಈರೇಶ ಅಂಚಟಗೇರಿ ಅವರು ಕೇಂದ್ರ ಕಲ್ಲಿದ್ದಲು ಹಾಗು ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಕೇಂದ್ರ ವಿದೇಶಾಂಗ ಸಚಿವ ವಿ. ಮುರಳಿಧರನ್ ಅವರನ್ನು ಸಂಪರ್ಕಿಸಿ ಕೇರಳದಲ್ಲಿ ಆರೋಗ್ಯ ಇಲಾಖೆ ಹಾಗು ಜಿಲ್ಲಾಧಿಕಾರಿಗಳ ಜತೆ ಮಾಹಿತಿ ವಿನಿಮಯ ಮಾಡಿ ಆ ಕುಟುಂಬಕ್ಕೆ ಆಸ್ಪತ್ರೆಯಲ್ಲಿ ಅನುಕೂಲ ಮಾಡಿಕೊಟ್ಟು ನಿಧನರಾದ ಸುಮಿತ ಪಾಂಡೆ‌ ಪಾರ್ಥಿವ ಶರೀರ ಧಾರವಾಡಕ್ಕೆ‌ ತರಲು ಸಕಲ‌ ವ್ಯವಸ್ಥೆ ಕಲ್ಪಿಸಿದ್ದಾರೆ.

Related posts

ಅಕ್ಟೋಬರ್ 21 ರಂದು ಹುಬ್ಬಳ್ಳಿಯಲ್ಲಿ ಗ್ರಾಹಕ ಸಂಪರ್ಕ ಕಾರ್ಯಕ್ರಮ

eNEWS LAND Team

ಬೆಲೆ ಏರಿಕೆ; ಬೈಕಿಗೆ ಹಾರ ಹಾಕಿ ಶ್ರದ್ಧಾಂಜಲಿ ಕೋರಿದ ಕಾಂಗ್ರೆಸ್ಸಿಗರು!!

eNewsLand Team

ಪಶ್ಚಿಮ ಶಿಕ್ಷಕರ ಕ್ಷೇತ್ರ ಮತದಾರರ ನೋಂದಣಿ ನವೆಂಬರ್ 6 ರವರೆಗೆ ಅವಕಾಶ

eNEWS LAND Team