ಇಎನ್ಎಲ್ ಅಣ್ಣಿಗೇರಿ: ಯುವಕರು ಕಷ್ಟಪಟ್ಟು ದುಡಿದು ಹೊಟ್ಟೆ ತುಂಬಾ ಉಂಡು ದೇಶ ಕಟ್ಟುವ ಕೆಲಸದಲ್ಲಿ ತೊಡಗಬೇಕೆಂದು ಸೀತಾಗಿರಿ ಸ.ಸ. ಡಾ.ಎ.ಸಿ.ವಾಲಿ ಮಹಾರಾಜರು ಹೇಳಿದರು.
ಪಟ್ಟಣದ ಬಸ್ ನಿಲ್ದಾಣ ಹತ್ತಿರ ಅನುಘಾ ಫುಡ್ಸ್ ಸೂಪರ್ ಮಾರ್ಕೆಟ್ ಹಾಗೂ ಬಿಗ್ ಮಿಶ್ರಾ ಪೇಡಾ ಶಾಖೆ ಉದ್ಘಾಟನೆ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.
ಶಾಸಕ ಎನ್.ಎಚ್.ಕೋನರಡ್ಡಿ ಮಾತನಾಡಿ ಅನಘಾ ಫುಡ್ಸ್ ಸೂಪರ್ ಮಾರ್ಕೆಟ್ ಹಾಗೂ ಬಿಗ್ ಮಿಶ್ರಾ ಪೇಢಾ ಶಾಖೆ ಆರಂಭಗೊoಡು ತಾಲೂಕಿನಲ್ಲಿ ಜನತೆಗೆ ಲಭ್ಯವಾಗುತ್ತಿರೋದು ಸಂತಸ ತಂದಿದೆ. ಅಣ್ಣಿಗೇರಿ ತಾಲೂಕ ಹಂತ ಹಂತವಾಗಿ ಬೆಳವಣಿಗೆಯತ್ತ ದಾಪುಗಾಲು ಹಾಕುತಿದೆ. ತಾಲೂಕಿನ ಎಲ್ಲಾ ಸರ್ಕಾರಿ ಕಛೇರಿಗಳು ಇನ್ನೇರಡು ವರ್ಷದಲ್ಲಿ ಪ್ರಾರಂಭಗೊಳ್ಳಲಿವೆ.ಉದ್ಯಮದಾರ ಮಹಾಬಳೇಶ್ವರ ಹೆಬಸೂರ ತಾಲೂಕಿನ ಜನತೆಗೆ ಸಂಭ್ರಮ ಹಂಚಿಕೊಳ್ಳಲು ಸಿಹಿ ತಿನ್ನಿಸಿ ಸಿಹಿ ಜೀವನ ಕಲ್ಪಿಸುತ್ತಿರೋದು ಶ್ಲಾಘನೀಯವೆಂದು ಹೇಳಿದರು.
ಮಾಜಿ ಸಿಎಂ ಜಗದೀಶ ಶೆಟ್ಟರ್ ಉದ್ಘಾಟಿಸಿ ಮಾತನಾಡಿ ನನ್ನ ಆಡಳಿತದಲ್ಲಿ ಅಣ್ಣಿಗೇರಿ ಅಳ್ನಾವರ ತಾಲೂಕ ಪಟ್ಟಿಯಿಂದ ಕೈಬಿಟ್ಟಿತ್ತು, ಬೇರೆ ಜಿಲ್ಲೆಯಲ್ಲಿರುವ ತಾಲೂಕುಗಳನ್ನು ಘೋಷಿಸಿರುವ ನಾನು ನನ್ನ ಜಿಲ್ಲೆಯ ತಾಲೂಕಗಳನ್ನು ಘೋಷಿಸದಿದ್ದರೇ ತಪ್ಪಾಗುತ್ತದೆಂದು ತಾಲೂಕಿನ ಜನರ ಹೋರಾಟಕ್ಕೆ ಮಾನ್ಯತೆ ನೀಡಬೇಕಾದ ಸಂದರ್ಭದಲ್ಲಿ ವಿಶೇಷ ಪಟ್ಟಿಯಲ್ಲಿ ಅಣ್ಣಿಗೇರಿ, ತಾಲೂಕ ಘೋಷಣೆ ಮಾಡಲಾಯಿತು. ಇನ್ನುಳಿದಂತೆ ಹಂತ ಹಂತವಾಗಿ ಎಲ್ಲಾ ಸರ್ಕಾರಿ ಕಛೇರಿಗಳು ಪ್ರಾರಂಭಗೊಳ್ಳುತ್ತೇವೆoದು ಹೇಳಿದರು.ದೇಶ ಪರದೇಶಗಳಲ್ಲಿ ಗುಣಮಟ್ಟದ ಸಿಹಿ ತಿಂಡಿಗಳನ್ನು ಗ್ರಾಹಕರಿಗೆ ಕಲ್ಪಿಸುತ್ತಿರುವ ಶಾಖೆಗಳನ್ನು ಹೊಂದಿರುವ ಭಿಗ್ ಮಿಶ್ರಾ ಪೇಡಾ 193 ನೇ ಶಾಖೆ ಅಣ್ಣಿಗೇರಿಯಲ್ಲಿ ಪ್ರಾರಂಭಗೊoಡಿದ್ದು ಸಂತಸ ತಂದಿದೆ ಎoದರು.
ಸಾನಿಧ್ಯ ವಹಿಸಿದ ದಾಸೋಹ ಮಠದ ಶಿವಕುಮಾರ ಶ್ರೀಗಳು ಮಾತನಾಡಿ ಸಮಾಜ ಧಾರ್ಮಿಕ ಸೇವೆಗಳಲ್ಲಿ ತೊಡಗಿರುವ ಉದ್ಯಮಿ ಮಹಾಬಳೇಶ್ವರ ಇಂದಿನ ತಂತ್ರಜ್ಞಾನ ಯುಗದಲ್ಲಿ ಜನತೆ ಅಭಿರುಚಿಗೆ ತಕ್ಕಂತೆ ಅನಘಾ ಫೂಡ್ಸ್ ಸೂಪರ್ ಮಾರ್ಕೆಟ್,ಭಿಗ್ ಮಿಶ್ರಾ ಪೇಡಾ ಶಾಖೆ ತೆರೆದಿದ್ದು ತಾಲೂಕಿನ ಜನರಿಗೆ ಸಹಕಾರಿಯಾಗಲಿದೆ..ಅಮೃತ ಅತಿಯಾದರೇ ವಿಷವೆಂಬoತೆ ಸಿಹಿ ಕೂಡಾ ಅತಿಯಾದರೇ ತಿನ್ನಲು ಸಾಧ್ಯವಿಲ್ಲ. ಆದರೂ ನಿತ್ಯ ಸಿಹಿ ತಿನ್ನುವ ಬಾಳು ನಿಮ್ಮದಾಗಲೆಂದು ಹಾರೈಸಿದರು.
ಶಾರದಾ ಪಬ್ಲಿಕ್ ಶಾಲೆಯ ಶೈಕ್ಷಣಿಕ ನಿರ್ದೇಶಕ ಗ್ರೇಸ್ ನೊರೊನ್ಹಾ ಹಾಗೂ ಯುನಿಯನ್ ಬ್ಯಾಂಕ್ ಅಪ್ ಇಂಡಿಯಾ ಎ.ಜಿ.ಎಮ್. ತೇಜಸ್ವಿನಿ, ಬಿಗ್ ಮಿಶ್ರಾ ಪೇಢಾ ಪ್ರತಿನಿಧಿ ಶ್ರೀಧರ ಪಾಟೀಲ, ಮಾತನಾಡಿದರು. ಅನಘಾ ಫುಡ್ಸ್ ಮತ್ತು ಭಿಗ್ ಮಿಶ್ರಾ ಪೇಢಾ ಶಾಖೆಯ ಮಾಲಿಕರಾದ ಮಹಾಬಳೇಶ್ವರ ಹೆಬಸೂರ ದಂಪತಿಗಳು ಉಭಯ ಶ್ರೀಗಳನ್ನು ಹಾಗೂ ಅತಿಥಿ ಗಣ್ಯಮಾನ್ಯರನ್ನು ಸನ್ಮಾನಿಸಿ ಗೌರವಿಸಿದರು.ರವಿರಾಜ ವೇರ್ಣೆಕರ ಸ್ವಾಗತಿಸಿ ನಿರೂಪಿಸಿದರು.
next post