22 C
Hubli
ಸೆಪ್ಟೆಂಬರ್ 11, 2024
eNews Land
ಸಣ್ಣ ಸುದ್ದಿ

ಹೊಳಲಾಪೂರ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಭೂಮಿ ಪೂಜೆ

ಇಎನ್‌ಎಲ್ ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೊಳಲಾಪೂರ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ವೃತ್ತಕ್ಕೆ ಭೂಮಿ ಪೂಜೆ ನೆರವೇರಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ ಹಾಗೂ ಡಿ.ಕೆ ಹೊನ್ನಪ್ಪನವರ. 

ದೇಶಪ್ರೇಮ, ದೇಶಭಕ್ತಿ, ನಿಷ್ಠೆ, ಪ್ರಾಮಾಣಿಕತೆ, ಹೋರಾಟದ ಕಿಚ್ಚು ಹಚ್ಚಿ, ರಾಷ್ಟ್ರದ ಸ್ವಾತಂತ್ರ್ಯಕ್ಕೆ ಬ್ರೀಟಿಷರ ವಿರುದ್ಧ ಹೋರಾಡಿ ತನ್ನ ಬದುಕನ್ನೆ ಸಮರ್ಪಣೆ ಮಾಡಿದ ತ್ಯಾಗಮೂರ್ತಿ ಸಂಗೊಳ್ಳಿ ರಾಯಣ್ಣ ಇತಿಹಾಸ ದೇಶದ ಚರಿತ್ರೆಯಲ್ಲಿ ಅಚ್ಚಳಿಯದೇ ಉಳಿದಿದೆ. ಕಿತ್ತೂರ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣನವರದು  ತಾಯಿ ಮಗನ ಸಂಬoದವಿತ್ತು. ದೇಶದ ಸ್ವಾತಂತ್ರ್ಯಕ್ಕೆ ಹಗಲಿರಳು ಶ್ರಮಿಸಿದರು. ಹೊಳಲಾಪೂರ ಗ್ರಾಮದಲ್ಲಿ ಹಾಲಮತದ ಜನಾಂಗದವರೇ ಹೆಚ್ಚಿದ್ದು, ಇತಿಹಾಸ ಪುರುಷ ಸಂಗೊಳ್ಳಿ ರಾಯಣ್ಣನ ಸ್ಮಾರಕ ಮಾಡಿಸಿದ್ದು ಹೆಚ್ಚು ಸಂತಸ ತಂದಿದೆ ಎಂದು ಸುಜಾತಾ ದೊಡ್ಡಮನಿ ಹೇಳಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಬ್ರೀಟಿಷರ ವಿರುದ್ಧ ದಂಗೆ ಎದ್ದು, ನಾಡಿನಲ್ಲಿ ಸ್ವಾತಂತ್ರ್ಯದ ಕಹಳೆ ಕಿಚ್ಚು ಪಸರಿಸಿ,ಸ್ವಾಭಿಮಾನ ಸ್ವಾತಂತ್ರ್ಯ ಹೋರಾಟಗಾರರು ಸನ್ನದ್ಧರಾಗುವ ಪಡೆಯನ್ನೇ ಸೃಷ್ಟಿಸಿ ಧೀರ, ಶೂರನಂತೆ ಬ್ರಿಟಿಷರ ನೋವುಗಳಿಗೆ ಅಂಜದೇ ಅಳಕದೇ ಹೋರಾಡಿ ನಾಡು, ದೇಶಕ್ಕೆ ಪ್ರಾಣವನ್ನೇ ಬಲಿಕೊಟ್ಟ ಸಂಗೊಳ್ಳಿ ರಾಯಣ್ಣನ ದೇಶಭಕ್ತಿ, ದೇಶಪ್ರೇಮ, ಆದರ್ಶ ಮೌಲ್ಯಗಳನ್ನು  ಅರಿತು ನಾವೆಲ್ಲರೂ ಬದುಕಿನಲ್ಲಿ ಅಳವಡಿಸಿಕೊಂಡು ಸಾಗಬೇಕಿದೆ ಎಂದು ವಕೀಲ ಡಿ.ಕೆ.ಹೊನ್ನಪ್ಪನವರ ಹೇಳಿದರು.
ರಾಯಣ್ಣ ಸ್ಮಾರಕ ವೃತ್ತದ ಭೂಮಿ ಪೂಜೆಗೆ ಕಾಂಗ್ರೆಸ ಪಕ್ಷದ ಯುವ ನಾಯಕ ಸಂಸ್ಕೃತ ಶಿಕ್ಷಕ ಬಸಪ್ಪ ಡೊಂಕಬಳ್ಳಿ, ಹಾಗೂ ರಾಕೇಶ ಡೊಂಕಬಳ್ಳಿ ನೇತೃತ್ವವಹಿಸಿದ್ದರು.

ಈ ಸಂದರ್ಭದಲ್ಲಿ ರಾಘವೇಂದ್ರ ದೊಡ್ಡಮನಿ, ಚನ್ನಪ್ಪ ಕಂಬಳಿ, ಉಡಚಪ್ಪ ಕುಂಡಿ, ಮುತ್ತಪ್ಪ ಡೊಂಕಬಳ್ಳಿ, ದ್ಯಾಮಣ್ಣ ಜಲ್ಲಿಗೇರಿ, ನೀಲಪ್ಪ ಬಂಡಿ, ಫಕ್ಕಿರೇಶ ನಡುವಿನಕೇರಿ, ಬಸವರಾಜ ಮತ್ತೂರ, ನೀಲನಗೌಡ ಪಾಟೀಲ, ದೇವಮ್ಮ ಪಾಟೀಲ, ಬಸಮ್ಮ ತಿರಗಣಿ, ಹನಮಮ್ಮ ಡೊಂಕಳ್ಳಿ, ರಮೇಶ ಜೊಗೆರ, ಪರುಶರಾಮ ಈಳಗೇರ, ರಮೇಶ ಕರೆಟ್ಟನವರ, ಮುತ್ತನಗೌಡ ಪಾಟೀಲ, ಮೈಲಾರಪ್ಪ ನಾಯ್ಕರ, ಹನಮಪ್ಪ ಹುಚ್ಚಣ್ಣವರ, ಯಲ್ಲನಗೌಡ ಪಾಟೀಲ, ಈರನಗೌಡ ಪಾಟೀಲ, ಉಡಚಪ್ಪ ಕರಡಿ, ನಿಂಗಪ್ಪ ಹುಚ್ಚಣ್ಣವರ, ಮಲ್ಲಪ್ಪ ರಾಮಗೇರಿ, ಈಶ್ವರ ಕರಡಿ, ರಮೇಶ ಡೊಂಕಬಳ್ಳಿ, ಹನಮಪ್ಪ ಬುಳ್ಳಣ್ಣವರ, ಸಂತೋಷ ಗುಂಜಾಳ, ಶಿವಪ್ಪ ಕುದರಿ, ಫ್ರಭು ಡೊಳ್ಳಿನ, ಬಸವರಾಜ ನಾಯ್ಕರ, ಅಜಯಕುಮಾರ ಬಗರಿ, ರಮೇಶ ಹೊನಕೇರಿ, ಸಂಜೀವ ಜಾಲಮ್ಮನವರ, ಬಸವಗೌಡ ಪಾಟೀಲ, ಯಲ್ಲಪ್ಪ ಗುಡಗೇರಿ, ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ಮಳೆ ಹಾನಿ ಅಧ್ಯಯನ ತಂಡದ ಎದುರು ರೈತರು ಗರಂ!

eNEWS LAND Team

ಗುರುವಂದನಾ ಕಾರ್ಯಕ್ರಮ

eNEWS LAND Team

ಹುಬ್ಬಳ್ಳಿ: ಎಪಿಎಮ್’ಸಿಯಲ್ಲಿ ವ್ಯಾಪಾರಸ್ಥರ ಸಂಘದ ಕಟ್ಟಡದಲ್ಲಿ 77 ನೇ ಸ್ವಾತಂತ್ರ್ಯೋತ್ಸವ ಆಚರಣೆ

eNEWS LAND Team