23.4 C
Hubli
ಮಾರ್ಚ್ 24, 2023
eNews Land
ಸಣ್ಣ ಸುದ್ದಿ

ಕಿತ್ತೂರ ರಾಣಿ ಚೆನ್ನಮ್ಮನ ಆದರ್ಶ ಪ್ರಸಕ್ತ ಸಮಾಜಕ್ಕೆ ಮಾದರಿ

Listen to this article

ಅಣ್ಣಿಗೇರಿ : ಪಟ್ಟಣದ ಪಂಪ ಸ್ಮಾರಕ ಭವನದಲ್ಲಿ ತಾಲೂಕ ಆಡಳಿತದಿಂದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ನಿಮಿತ್ಯ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಚೆನ್ನಮ್ಮನ ಭಾವಚಿತ್ರಕ್ಕೆ ಪೂಜೆಸಲ್ಲಿಸಿದ ಬಳಿಕ ಚಂಬಣ್ಣ ಆಲೂರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

            ಕನ್ನಡ ನಾಡು, ನುಡಿ,ಭಾಷೆ,ಸಂಪ್ರದಾಯ, ಸಂಸ್ಕೃತಿ, ಪರಂಪರೆ,ಉಳಿಸುವ ಹಿನ್ನಲೆಯಲ್ಲಿ ರಾಜ್ಯಾಡಳಿತ, ರಾಷ್ಟ್ರದ ಸ್ವಾತಂತ್ರಕ್ಕೆ ಕೆಚ್ಚದೆ ಪರಕೀಯರ ವಿರುದ್ಧ ಹೋರಾಡಿ, ಬದುಕನ್ನೇ ಸಮರ್ಪಿಸಿದ ಮಾತೆ ಕಿತ್ತೂರ ಚೆನ್ನಮ್ಮಳ ಜೀವನ ಆದರ್ಶಗಳು ಪ್ರಸಕ್ತ ಸಮಾಜಕ್ಕೆ ಮಾದರಿಯಾಗಿದೆ ಎಂದು ಮಾಜಿ ಕ್ರೇಡಿಲ್ ಅಧ್ಯಕ್ಷ ಷಣ್ಮುಖ ಗುರಿಕಾರ ಹೇಳಿದರು.

           ಕೋವಿಡ್-19 ಮಹಾಮಾರಿ ರೋಗ ರಾಷ್ಟ್ರವ್ಯಾಪಿ ಸಾಕಷ್ಟು ಸಾವುನೋವು ಬಲಿಪಡೆದ ಸಂದರ್ಭದಲ್ಲಿ ವೈದ್ಯರು, ಆರೋಗ್ಯ ಇಲಾಖೆಯ ತಜ್ಞರು, ಸಿಬ್ಬಂದಿಗಳು, ಸೈನಿಕರು, ಆಶಾಕಾರ್ಯಕರ್ತೆರು, ಸಾಧಕಿಯರು, ಪೌರಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು, ಹಗಲಿರುಳೆನ್ನದೇ ತಮ್ಮ ಪ್ರಾಣ ಲೆಕ್ಕಿಸದೇ ಸೇವೆ ಸಲ್ಲಿಸಿದ್ದನ್ನು ಪರಿಗಣಿಸಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರು ಪುಸ್ತಕಗಳನ್ನು ನೀಡುವುದರ ಮೂಲಕ ಸನ್ಮಾನಿಸಲಾಯಿತು.ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

            ಈ ಸಂದರ್ಭದಲ್ಲಿ ಚಂಬಣ್ಣ ಆಲೂರು, ತಹಶೀಲ್ದಾರ ಮಂಜುನಾಥ ಅಮಾಸಿ, ಪುರಸಭೆ ಮುಖ್ಯಾಧಿಕಾರಿ ಕೆ.ಎಫ್. ಕಟಗಿ, ಶಿವಯೋಗಿ ಸುರಕೋಡ,ಬಸವರಾಜ ಯಳವತ್ತಿ, ಶಿವಾನಂದ ಹೊಸಳ್ಳಿ, ಮಹೇಶ ದೇಸಾಯಿ, ಶಿವಕುಮಾರ ಬಳಿಗಾರ, ಜಗದೀಶ ಅಬ್ಬಿಗೇರಿಮಠ, ಎ.ಪಿ.ಗುರಿಕಾರ, ರಾಘವೇಂದ್ರ ರಾಮಗಿರಿ, ಶಶಿಕಲಾ ಯಮನೂರು, ಪ್ರಭಾವತಿ ಯಳವತ್ತಿ, ಶಕುಂತಲಾ ಬೆಂಡಿಗೇರಿ, ಈಶಪ್ಪ ಹೊಂಬಳ, ಮಾರುತಿ ಮರಡ್ಡಿ, ಸಮಾಜದ ಮುಖಂಡರು, ಮಹಿಳೆಯರು, ಯುವಕರು ಹಾಗೂ ಉಪಸ್ಥಿತರಿದ್ದರು.

 

Related posts

ಅಭಿವೃದ್ಧಿಗೆ ಮತ ನೀಡಿ : ಸಿಎಂ ಬೊಮ್ಮಾಯಿ

eNEWS LAND Team

ಐ.ಟಿ.ಐ: ಅಪ್ರೆಂಟಿಷಿಪ್ ತರಬೇತಿಗೆ ಅರ್ಜಿ

eNEWS LAND Team

ದುಷ್ಟವ್ಯಸನ  ತ್ಯಜಿಸಿ ನೈತಿಕಮೌಲ್ಯ ಬೆಳಿಸಿಕೊಳ್ಳಲು ಕರೆ:ಜ್ಯೂಲಿಕಟ್ಟಿ

eNEWS LAND Team