35.4 C
Hubli
ಏಪ್ರಿಲ್ 28, 2024
eNews Land
ದೇಶ ವಿದೇಶ ಸುದ್ದಿ

ಕುವೈತ್’ನಲ್ಲಿ ಡಾಕ್ಟರ್ ವೃತ್ತಿಗಾಗಿ 468 ಹುದ್ದೆಗಳಿಗೆ ನೇರ ಸಂದರ್ಶನ

ಇಎನ್ಎಲ್ ಧಾರವಾಡ: ಕುವೈತ್‍ದೇಶದಲ್ಲಿ ವೈದ್ಯರಿಗಾಗಿ ಭಾರಿ ಬೇಡಿಕೆ ಇದ್ದು 468 ಹುದ್ದೆಗಳಿಗೆ ಅಂತರಾಷ್ಟ್ರೀಯ ವಲಸೆ ಕೇಂದ್ರದಿಂದ ನೇರ ನೇಮಕಾತಿ ನಡೆಯಲಿದ್ದು, ಜನೇವರಿ ತಿಂಗಳ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ಕುವೈತ್‍ನ ಉದ್ಯೋಗದಾತರಿಂದ ಸಂದರ್ಶನ ನಡೆಯಲಿದೆ.

ಆಸಕ್ತಿ ಇರುವವರು ಜಿಲ್ಲಾ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿನ ಅಂತರಾಷ್ಟ್ರೀಯ ವಲಸೆ ಕೇಂದ್ರಕ್ಕೆ ಭೇಟಿ ನೀಡಬೇಕು. ಮತ್ತು 6 ವರ್ಷ ಮೇಲ್ಪಟ್ಟು ಅನುಭವ ಹೊಂದಿರುವ ಅರವಳಿಕೆ ತಜ್ಞರು, ಸಾಮಾನ್ಯ ಶಸ್ತ್ರಚಿಕಿತ್ಸಕರು, ಆಂತರಿಕ ಔಷಧಿ ತಜ್ಞರು, ಪ್ರಸೂತಿ ಶಸ್ತ್ರಜ್ಞರು, ಸ್ತ್ರೀರೋಗ ತಜ್ಞರು, ಹೃದ್ರೋಗ ತಜ್ಞರು, ಮೂಳೆ ಚಿಕಿತ್ಸಕರು, ಮಕ್ಕಳ ತಜ್ಞರು, ತುರ್ತು ವಿಭಾಗ ತಜ್ಞರು, ಕುಟುಂಬ ವೈದ್ಯರು, ತೀವ್ರನಿಗಾ ಘಟಕ ತಜ್ಞರು, ವಿಕಿರಣ ಶಸ್ತ್ರಜ್ಞರು, ಮತ್ತು ಇಎನ್‍ಟಿ ತಜ್ಞರು ವಿವರಗಳಿಗಾಗಿ ಜನೇವರಿ 15, 2023 ರೊಳಗೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, 1ನೇ ಮಹಡಿ, ರಾಯಾಪೂರ, ಧಾರವಾಡ, ಕಛೇರಿಗೆ ಭೇಟಿ ನೀಡಬಹುದು.

ಹೆಚ್ಚಿನ ಮಾಹಿತಿಗಾಗಿ 0836-2972388, 9945927305, 9113505020ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಸುಚಿರಾಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಪೂರ್ವಾ

eNEWS LAND Team

ಪ್ಲೈ ಓವರ್ ನಿರ್ಮಾಣದ ಅಗತ್ಯತೆ ಒಪ್ಪಿದ ತಜ್ಞರ ಸಮಿತಿ

eNEWS LAND Team

ವಾಲ್ಮೀಕಿ ಪುತ್ಥಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಾಲಾರ್ಪಣೆ

eNEWS LAND Team