30 C
Hubli
ಡಿಸೆಂಬರ್ 1, 2022
eNews Land
ಅಪರಾಧ

ಬಸವರಾಜ ಹೊರಟ್ಟಿ ಮೇಲೆ ಎಫ್ಐಆರ್ ದಾಖಲಿಸಿದ ಪೊಲೀಸ್ ಸಸ್ಪೆಂಡ್

Listen to this article

ಸುದ್ದಿಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ಕ್ಲಿಕ್ ಮಾಡಿ: https://chat.whatsapp.com/L6QNizBzjPkF0Hza83Tyt8

ಇಎನ್ಎಲ್ ಧಾರವಾಡ: ಸರ್ವೋದಯ ಶಿಕ್ಷಣ ಸಂಸ್ಥೆಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸಿದ್ದ ಗ್ರಾಮೀಣ ಠಾಣೆ ಇನ್‌ಸ್ಪೆಕ್ಟರ್ ಶ್ರೀಧರ ಸುತಾರೆ ಅವರನ್ನು ಅಮಾನತು ಮಾಡಿ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶಿಸಿದ್ದಾರೆ.

ಇದನ್ನೂ ಓದಿ: ಅನ್ಯಜಾತೀಯ ಹುಡುಗರನ್ನು ಪ್ರೀತಿಸಿ ಮದುವೆಯಾಗುವ ಹುಡುಗಿಯರೇ ಹುಷಾರ್!!!

ತಾಲ್ಲೂಕಿನ ಮುಗದ ಗ್ರಾಮದಲ್ಲಿರುವ ಸರ್ವೋದಯ ಶಿಕ್ಷಣ ಟ್ರಸ್ಟ್ ವಿಷಯವಾಗಿ ಶಾಲೆ ಸಿಬ್ಬಂದಿ ಹಾಗೂ ವಾಲ್ಮೀಕಿ ಸಮಾಜದ ಮುಖಂಡರ ನಡುವೆ ಜ. 25ರಂದು ಗಲಾಟೆ ನಡೆದಿತ್ತು. ವಾಲ್ಮೀಕಿ ಸಮಾಜದ ಮೋಹನ ಗುಡಸಲಮನಿ ಎಂಬುವವರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದರಲ್ಲಿ ಹೊರಟ್ಟಿ ಅವರನ್ನು 5ನೇ ಆರೋಪಿಯಾಗಿ ಎಫ್‌ಐಆರ್ ದಾಖಲಿಸಲಾಗಿತ್ತು.

ಇದನ್ನೂ ಓದಿ:ಸುಚಿರಾಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಪೂರ್ವಾ

ಅಂದು ಬೆಂಗಳೂರಿನಲ್ಲಿದ್ದ ಹೊರಟ್ಟಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ವಿಧಾನ ಪರಿಷತ್ತಿನಲ್ಲೂ ಈ ಕುರಿತು ಗಂಭೀರ ಚರ್ಚೆ ನಡೆದಿತ್ತು. ಶೀಘ್ರದಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿದ್ದರು.

ಇದನ್ನೂ ಓದಿ:ಮತ್ತೆ ರಕ್ತದ ಕಲೆ ಕಂಡ ಚೋಟಾ ಮುಂಬೈ ಹುಬ್ಬಳ್ಳಿ

ಈ ಹಿನ್ನೆಲೆಯಲ್ಲಿ ಪ್ರವೀಣ್ ಸೂದ್ ಅವರು ಆದೇಶಿಸಿ, ‘ದೂರಿನಲ್ಲಿ ಹೊರಟ್ಟಿ ಅವರ ಹೆಸರು ಇಲ್ಲದಿದ್ದರೂ, ಅವರ ಹೆಸರನ್ನು ಪ್ರಥಮ ಮಾಹಿತಿ ವರದಿಯಲ್ಲಿ ದಾಖಲಿಸಿರುವುದು ಕರ್ತವ್ಯ ನಿರ್ಲಕ್ಷತನ ಹಾಗೂ ಬೇಜವಾಬ್ದಾರಿತನದ ವರ್ತನೆಯಾಗಿದೆ. ಈ ಕುರಿತು ಇಲಾಖಾ ತನಿಖೆ ಬಾಕಿ ಇರಿಸಿಕೊಂಡು ಇನ್‌ಸ್ಪೆಕ್ಟರ್ ಶ್ರೀಧರ ಅವರನ್ನು ಅಮಾನತು ಮಾಡಲಾಗಿದೆ’ ಎಂದಿದ್ದಾರೆ.

ಇದನ್ನೂ ಓದಿ:ರೌಡಿಶೀಟರ್ ಅಕ್ಬರ್ ಅಲ್ಲಾಭಕ್ಷ ಮುಲ್ಲಾ ಕೊಲೆ!!

ಈ ಆದೇಶಕ್ಕೂ ಒಂದು ದಿನ ಮೊದಲು ಇನ್‌ಸ್ಟೆಕ್ಟರ್‌ ಅವರನ್ನು ಗುಪ್ತಚರ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು.

ಇದನ್ನೂ ಓದಿ:ಕಾರು ಬೈಕ್ ಅಪಘಾತ ತಂದೆ ಮಗಳು ಸಾವು

Related posts

 ‘ಆ’ ಚಿತ್ರಕ್ಕೆ ನಿಮ್ಮ ಫೋಟೊ..! ಲೋನ್ ಆ್ಯಪ್ ಡೌನ್ಲೋಡ್ ಮಾಡೋ ಮೊದ್ಲು ಎಚ್ಚರ! ಧಾರವಾಡ ಮಹಿಳೆಗೆ ಆಗಿದ್ದೇನು??

eNewsLand Team

ಹುಬ್ಬಳ್ಳಿ ಅಂಚೆ ಕಚೇರಿಗ ಕನ್ನಾ ಹೊಡದಾರ!!

eNEWS LAND Team

ಅವನೂ ಗೆದ್ದಿಲ್ಲ, ಇವನೂ ಸೋತಿಲ್ಲ!! ಬೆಟ್ಟಿಂಗ್ ಮಾಡ್ತಿದ್ದೋರು ಮಾವನ ಮನೆಗೆ!!

eNewsLand Team