23 C
Hubli
ನವೆಂಬರ್ 27, 2022
eNews Land
ಅಪರಾಧ

ಹುಬ್ಬಳ್ಳಿ; ಜವರಾಯ ಅಟ್ಟಹಾಸ, ಅಪಘಾತ ಎಂಟಕ್ಕೇರಿದ ಸಾವು

Listen to this article

ಇಎನ್ಎಲ್ ಹುಬ್ಬಳ್ಳಿ:

ಹುಬ್ಬಳ್ಳಿ ಹೊರವಲಯದಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ತಾರಿಹಾಳ ಬೈಪಾಸ್’ನ ಧಾರಾವತಿ ದೇವಸ್ಥಾನದ ಬಳಿ ಸೋಮವಾರ ರಾತ್ರಿ 1.30ರ ವೇಳೆ ಸರಣಿ ಅಪಘಾತ ನಡೆದಿದ್ದು, ಸ್ಥಳಗಳಲ್ಲಿ  ಮೂವರು ಸೇರಿ ಎಂಟು ಮಂದಿ ಮೃತಪಟ್ಟಿದ್ದಾರೆ. ಎಂಟು ಮಂದಿ ಗಂಭೀರ ಗಾಯಗೊಂಡಿದ್ದು, ಹಲವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.

ಧಾರವಾಡದ ಬಾಡ ಕ್ರಾಸ್’ನಲ್ಲಿ ನಡೆದ ಅಪಘಾತ ಪ್ರಕರಣ ಮಾಸುವ ಮುನ್ನವೇ ಇದೀಗ ಮತ್ತೊಂದು ಅವಘಡ ಸಂಭವಿಸಿದೆ.

ಈಗಿನ ಮಾಹಿತಿ ಪ್ರಕಾರ, ಮುಂದೆ ಚಲಿಸುತ್ತಿದ್ದ ಟ್ರ್ಯಾಕ್ಟರ್’ಗೆ ಹಿಂಬದಿಯಿಂದ ಟೂರಿಸ್ಟ್ ಬಸ್ ಡಿಕ್ಕಿ ಹೊಡೆದಿದೆ. ಅದರ ಹಿಂದೆ ಬಂದ ಲಾರಿ ಬಸ್’ಗೆ ಡಿಕ್ಕಿ ಹೊಡೆದಿದೆ.

ಸರಣಿ ಅಪಘಾತದಲ್ಲಿ ಟೂರಿಸ್ಟ್ ಬಸ್’ನಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಕಿಮ್ಸ್’ಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಉತ್ತರ ಸಂಚಾರ ಠಾಣೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಮೃತರ ಹಾಗೂ ಗಾಯಾಳುಗಳ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ಹೆಚ್ಚಿನ ಮಾಹಿತಿ ಈವರೆಗೆ ಲಭ್ಯವಾಗಿಲ್ಲ.

Related posts

ಅಕ್ಕ ತಂಗ್ಯಾರ ಅಪರಿಚಿತ ಗಂಡಸ್ರ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡೋಕು ಮೊದ್ಲು ಹುಬ್ಬಳ್ಯಾಗ ಏನಾಗೈತಿ ನೋಡ್ರಿ

eNewsLand Team

ಸುಚಿರಾಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಪೂರ್ವಾ

eNEWS LAND Team

ಹುಬ್ಬಳ್ಳಿ ಮಹಿಳೆ ಮಹಾರಾಷ್ಟ್ರದಲ್ಲಿ ಕಿಡ್ನಾಪ್: ಹೆಂಡ್ತಿ ಸುರಕ್ಷತೆಗೆ ಓದಲೇಬೇಕಾದ ಸುದ್ದಿ

eNEWS LAND Team