ಇಎನ್ಎಲ್ ಗದಗ: ನಗರದ ಲಯನ್ಸ್ ಸ್ಕೂಲ್ ಸಮೀಪದ ಆಟದ ಮೈದಾನ ಒಂದರಲ್ಲಿ ಹುಡ್ಕೊ ಬಡಾವಣೆಯ ನಿವಾಸಿ ಅಪೂರ್ವಾ ಪುರಾಣಿಕ್ ಇವರು ದ್ವಿಚಕ್ರ ವಾಹನ ಕಲಿಯಲು ತೊಡಗಿದ್ದ ವೇಳೆ ಅವರ ಮೇಲೆ ಇಜಾಜ್ ಶಿರೂರ್ ಎಂಬಾತ ಮಚ್ಚಿನಿಂದ ಬರೋಬ್ಬರಿ 23 ಬಾರಿ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಪೂರ್ವಾ ಹಾಗೂ ಇಜಾಜ್ ಇಬ್ಬರು ಪತಿ ಪತ್ನಿಯರಾಗಿದ್ದಾರೆ, ಅಪೂರ್ವ ಎಂಬಿಎ ಪದವೀಧರೆ. ಕಾಲೇಜು ಓದುವಾಗ ಇಜಾಜ್ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿ, ನಾಲ್ಕು ವರ್ಷದ ಹಿಂದೆ ವಿಜಯಪುರದ ದರ್ಗಾ ಒಂದರಲ್ಲಿ ವಿವಾಹವಾಗಿದ್ದರು.
ಇಜಾಜ್ ವೃತ್ತಿಯಿಂದ ಆಟೋ ಚಾಲಕನಾಗಿದ್ದಾನೆ ಮದುವೆಯ ನಂತರ ಅಪೂರ್ವಾನ ಹೆಸರನ್ನು ಅರ್ಫಾಬಾನು ಎಂದು ಬದಲಿಸಿಕೊಂಡಿದ್ದರು. ಮೊದ ಮೊದಲು ಇಬ್ಬರು ಅನ್ಯೋನ್ಯ ರಾಗಿದ್ದರು, ಅವರಿಗೆ ಮುದ್ದಾದ ಮಗು ಇದ್ದು ಇವರು ಹುಬ್ಬಳ್ಳಿಯ ಕೌಲಪೇಟನಲ್ಲಿ ವಾಸವಾಗಿದ್ದರು.
ಇಜಾಜ್ ಆರಂಭದಲ್ಲಿ ಗದಗ ನಗರದಲ್ಲಿ ಆಟೋ ಓಡಿಸಿಕೊಂಡಿದ್ದ ನಂತರ ಹುಬ್ಬಳ್ಳಿಗೆ ಹೋಗಿ ಸಣ್ಣದೊಂದು ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದ. ಅಪೂರ್ವಾಳಿಗೆ ತನ್ನ ಗಂಡನಿಗೆ ಈ ಮೊದಲು ಮದುವೆಯಾಗಿದೆ ಎಂದು ಗೊತ್ತಾದ ನಂತರ ಗಂಡನ ಮೋಸದ ಬಗ್ಗೆ ಅರಿತ ಅಪೂರ್ವಾ ವಿವಾಹ ವಿಚ್ಚೇದನಕ್ಕೆ ನಿರ್ಧರಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾಳೆ ಎಂಬ ಮಾಹಿತಿ ಇದೆ.
ಬಳಿಕ ತನ್ನ ತವರು ಮನೆಯಾದ ಗದಗ ನಗರದ ಹುಡ್ಕೋ ಕಾಲೋನಿಯಲ್ಲಿ ನಾಲ್ಕೈದು ತಿಂಗಳಿನಿಂದ ವಾಸವಿದ್ದಳು, ವಿಚ್ಚೆಧನಕ್ಕೆ ಅರ್ಜಿಸಲ್ಲಿಸಿದ್ದನ್ನು ತಿಳಿದ ಇಜಾಜ್ ಅವಳು ನನ್ನನ್ನು ಬಿಟ್ಟು ಹೋಗುತ್ತಾಳೆ ಹಾಗಾಗಿ ಅವಳನ್ನ ಏನಾದರು ಮಾಡಿ ಕೊಲೆ ಮಾಡುವ ಸಂಚಿನಿಂದ ಮಾ.10ರಂದು ಏಕಾಏಕಿಯಾಗಿ ಬಂದು ತನ್ನ ಪತ್ನಿಯ ಮೇಲೆ ಅಮಾನುಷವಾಗಿ ಮಚ್ಚಿನಿಂದ ಹಲ್ಲೆಗೈದು ಪರಾರಿಯಾಗಿದ್ದ. ಕೈ, ಹೊಟ್ಟೆಗೆ 23 ಬಾರಿ ಮಚ್ಚಿನಿಂದ ಹೊಡೆದಿದ್ದ.
ಇದನ್ನೂ ಓದಿ
ರೌಡಿಶೀಟರ್ ಅಕ್ಬರ್ ಅಲ್ಲಾಭಕ್ಷ ಮುಲ್ಲಾ ಕೊಲೆ!!
ಹಲ್ಲೆಗೆ ಒಳಗಾದ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆಯನ್ನು ನೀಡುತ್ತಿದ್ದಾರೆ.
ಹಲ್ಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಗದಗ ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಹಿಂದೂ ಯುವಜನತೆ ಈ ಘಟನೆಯಿಂದ ಎಚ್ಚೆತ್ತುಕೊಳ್ಳಬೇಕಾಗಿದೆ.