ಇಎನ್ಎಲ್ ಅಣ್ಣಿಗೇರಿ: ಗದಗ-ಹುಬ್ಬಳ್ಳಿ ರಾಷ್ಟ್ರಿಯ ಹೆದ್ದಾರಿ ಅಣ್ಣಿಗೇರಿ ಸಮೀಪ ಹುಬ್ಬಳ್ಳಿಯವರ ಹತ್ತಿ ಜಿನ್ನಿಂಗ್ ಮಿಲ್ ಹತ್ತಿರ ರಸ್ತೆಯಲ್ಲಿ ಕಾರು ಚಾಲಕ ಮಹೇಂದ್ರ ಮಲ್ಲಪ್ಪ ಕುರ್ತಕೋಟಿ ಸಾ.ಧಾರವಾಡ ಅತೀ ವೇಗವಾಗಿ ಅಲಕ್ಷತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವಹಾಗೆ ಚಾಲನೆ ಮಾಡಿಕೊಂಡು ರಸ್ತೆ ಬಲಕ್ಕೆ ಬಂದು ತನ್ನ ಎಡಸೈಡಿನಲ್ಲಿ ಬರುತ್ತಿದ್ದ ಸೈಕಲ್ ಮೋಟರ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ ಸವಾರ ಇಬ್ರಾಹಿಂ ಸಾಬ ಬಾಬಾಸಾಬ ಬುವಾಜಿ(30) ಸಾ.ಮಲ್ಲಸಮುದ್ರ ಜಿ.ಗದಗ ಮತ್ತು ಮಗಳಾದ ಇಸ್ಮತಭಾನು(4) ಇವರಿಗೆ ಮಾರಾಣಾಂತಿಕ ಗಾಯ ಪಡಿಸಿದ್ದರಿಂದ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗುವ ಮಾರ್ಗದಲ್ಲಿಯೇ ತಂದೆ-ಮಗಳು ಸಾವನ್ನಪ್ಪಿದ್ದಾರೆ. ಪತ್ನಿ ನಸ್ರಿನಭಾನು(27) ನೌಮಾನ(2) ಇಬ್ಬರೂ ಗಂಭೀರ ಗಾಯಗೊಂಡಿದ್ದು ಚಿಕಿತ್ಸೆಗೆ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪಿಎಸ್’ಆಯ್ ಎಲ್.ಕೆ. ಜ್ಯೂಲಿಕಟ್ಟಿ ತನಿಖೆ ಕೈಗೊಂಡಿದ್ದಾರೆ.
ಇದನ್ನು ಓದಿ
http://ರೌಡಿಶೀಟರ್ ಅಕ್ಬರ್ ಅಲ್ಲಾಭಕ್ಷ ಮುಲ್ಲಾ ಕೊಲೆ!! – https://enewsland.com/crime/murder-in-hubli/9226/