ಇಎನ್ಎಲ್ ಹುಬ್ಬಳ್ಳಿ: NH-48 ರಸ್ತೆ ಬೆಳಗಲಿ-ನೂಲ್ವಿ ಕ್ರಾಸ್ ಬಳಿ ಲಾರಿ ಬೈಕಿಗೆ ಗುದ್ದಿದ ಪರಿಣಾಮ ಸ್ಥಳದಲ್ಲಿಯೇ ಸವಾರ ಮೃತಪಟ್ಟ ಘಟನೆ ನಡೆದಿದೆ. ಅದರಗುಂಚಿಯ ಕಾಸೀಮಸಾಬ ಹಜರೇಸಾಬ ನದಾಫ (39) ಮೃತ ದುರ್ದೈವಿ.
ಸವದತ್ತಿಯ ಹಡಗಲಿ ಮೂಲದ ಲಾರಿ ಸವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾವೇರಿ ಕಡೆಯಿಂದ ವೇಗವಾಗಿ ಬರುವಾಗ ನೂಲ್ವಿ ಕ್ರಾಸ್ ಕಡೆಗೆ ರಸ್ತೆ ದಾಟುತ್ತಿದ್ದ ಬೈಕಿಗೆ ಡಿಕ್ಕಿ ಮಾಡಿದ್ದಾನೆ. ಪರಿಣಾಮ ತೀವ್ರ ಗಾಯಗೊಂಡ ಕಾಸೀಮಸಾಬ ಸ್ಥಳದಲ್ಲಿಯೇ ಕೊನೆಯುಸಿರೆಳೆದರು. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.