ಇಎನ್ಎಲ್ ಧಾರವಾಡ: ನಾಲ್ಕು ವರ್ಷಗಳ ಹಿಂದೆ ಹೃದಯಾಘಾತದಿಂದ ನಿಧನಳಾದ ಪ್ರೀತಿಯ ಪತ್ನಿ ನೆನಪಿನಲ್ಲಿ ಸಾರಾಯಿ ಕುಡಿಯುತ್ತಿದ್ದ ಯಾದವಾಡದ ಮಂಜುನಾಥ ಯಲ್ಲಪ್ಪ ಕೇಶಗೊಂಡ (45) ನಶೆಯಲ್ಲಿ ಕ್ರಿಮಿನಾಶಕ ಎಣ್ಣೆ ಸೇವಿಸಿ ಮೃತಪಟ್ಟಿದ್ದಾನೆ.
ಹೆಂಡತಿಯನ್ನು ಅತೀವವಾಗಿ ಪ್ರೀತಿಸುತಿದ್ದ ಮಂಜುನಾಥ ಆಕೆ ಅಗಲಿಕೆ ಸಹಿಸಿಕೊಂಡಿರಲಿಲ್ಲ. ಅದೇ ನೆನಪಿನಲ್ಲಿ ಮದಿರೆಯ ಚಟಕ್ಕೆ ದಾಸನಾಗಿದ್ದ. ಮಾ.26 ರಂದು ನಶೆಯಲ್ಲಿ ಕ್ರಿಮಿನಾಶಕ ಎಣ್ಣೆ ಸೇವಿಸಿದ್ದ.
ಅವರನ್ನು ಉಪಚಾರಕ್ಕೆ ಎಂದು ಜಿಲ್ಲಾ ಆಸ್ಪತ್ರೆ ಧಾರವಾಡಕ್ಕೆ ಕರೆದುಕೊಂಡು ಹೋಗಿ ಅಲ್ಲಿಂದಾ ಹೆಚ್ಚಿನ ಉಪಚಾರಕ್ಕೆಂದು ಕಿಮ್ಸ್ ಹುಬ್ಬಳ್ಳಿಗೆ ದಾಖಲು ಮಾಡಿದಾಗ ಉಪಚಾರ ಫಲಿಸದೆ ಮಾ. 29 ರಂದು ರಾತ್ರಿ 09:20 ಗಂಟೆಗೆ ಮೃತಪಟ್ಟಿದ್ದಾನೆ.
ಇದನ್ನು ಓದಿ ಬ್ರಾಹ್ಮಣ ವಧು ವರರ ಸಮಾವೇಶ!! ಎಲ್ಲಿ? ಯಾವಾಗ?ಇಲ್ಲಿದೆ ಡಿಟೈಲ್ಸ್
ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.