28 C
Hubli
ಸೆಪ್ಟೆಂಬರ್ 21, 2023
eNews Land
ಅಪರಾಧ

ಹುಬ್ಬಳ್ಳಿಲಿ ಚಾಕು ಇರಿತ; ಗಾಯಾಳು ಕಿಮ್ಸನಲ್ಲಿ

ಇಎನ್ಎಲ್ ಧಾರವಾಡ: ಇಬ್ಬರು ಸ್ನೇಹಿತರು ಪರಿಚಿತ ವ್ಯಕ್ತಿಗೆ ಚಾಕು ಇರಿದ ಪ್ರಕರಣ ಶುಕ್ರವಾರ ಹೆಗ್ಗೇರಿಯಲ್ಲಿ ನಡೆದಿದೆ.

ಹಳೇಹುಬ್ಬಳ್ಳಿ ನಿವಾಸಿ ಆಸೀಫ್ ಗಂಭೀರ ಗಾಯಗೊಂಡಿದ್ದು, ಕಿಮ್ಸ್’ಗೆ ದಾಖಲಿಸಲಾಗಿದೆ. ಮಾರುತಿ ನಗರದ ನಿವಾಸಿಯಾದ ರೆಹಮತ್ ಮತ್ತು ಗೌಸ್ ಚಾಕು ಇರಿದ ಆರೋಪಿಗಳು.

ಮೂವರು ಸ್ನೇಹಿತರು ಜೊತೆಯಲ್ಲಿದ್ದಾಗ ಅವರಲ್ಲಿ ಯಾವುದೋ ವಿಷಯಕ್ಕೆ ಜಗಳವಾಗಿದೆ. ಆಗ, ಇಬ್ಬರು ಸೇರಿ ಆಸೀಫ್‌ ಅವರ ಎದೆ, ಹೊಟ್ಟೆ ಭಾಗಕ್ಕೆ ಚಾಕು ಇರಿದಿದ್ದಾರೆ. ಆ ಸಂದರ್ಭ ಅವರು ಗಾಂಜಾ ಸೇವನೆ ಮಾಡಿದ್ದರು ಎನ್ನುವ ಮಾಹಿತಿಯಿದೆ. ಆರೋಪಿಗಳ ಬಂಧಿನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Sexual violence against girl: Andhra Swamiji arrested; Called to press foot at night and sexually assaulted

eNEWS LAND Team

ಹುಬ್ಬಳ್ಳಿಲಿ ಧಗಧಗನೆ ಉರಿದ ಕಾರು! ಪ್ರಯಾಣಿಕರ ಕತೆ?

eNewsLand Team

ನಗರವಾಸದ ಗೀಳು; ಸುಂದರ ಸಂಸಾರ ಈಗ ಸಾವಿನ ಮನೆ

eNEWS LAND Team