30 C
Hubli
ಮಾರ್ಚ್ 21, 2023
eNews Land
ಅಪರಾಧ

ಹುಬ್ಬಳ್ಳಿಯಲ್ಲಿ ಬಯೋ ಡಿಸೇಲ್ ಮಾಫಿಯಾ

Listen to this article

ಇಎನ್ಎಲ್  ಹುಬ್ಬಳ್ಳಿ: ಪೂನಾ ಬೆಂಗಳೂರು ರಸ್ತೆಯಲ್ಲಿನ ಭಾರತ ಸರ್ವೀಸ್ ಸೆಂಟರ್ ನಲ್ಲಿ ನಡೆಯುತ್ತಿದ್ದ ಬಯೋ ಡಿಸೇಲ್ ಮಾಫಿಯಾದ ಮೇಲೆ ಹುಬ್ಬಳ್ಳಿ-ಧಾರವಾಡ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ಸಾವಿರಾರೂ ಲೀಟರ್ ಬಯೋ ಡಿಸೇಲ್ ವಶಕ್ಕೆ ಪಡೆದಿದ್ದಾರೆ.

ಹನೀಫ ಅಹ್ಮದ ಹೊನ್ಯಾಳ ಮಾಲಿಕತ್ವದಲ್ಲಿ ನಡೆಯುತ್ತಿದ್ದ ದಂಧೆಯ ಖಚಿತ ಮಾಹಿತಿ ಆಧರಿಸಿ ಸಿಸಿಬಿ ಇನ್ಸಪೆಕ್ಟರ್ ಅಲ್ತಾಫ ಮುಲ್ಲಾ ನೇತೃತ್ವದ ತಂಡ ದಾಳಿ ಮಾಡಿದೆ.

ದಾಳಿಯ ವೇಳೆಯಲ್ಲಿ ಸುಮಾರು 1500 ಲೀಟರ್ ಬಯೋ ಡಿಸೇಲ್ ದೊರಕಿದ್ದು, ಬ್ಯಾರೆಲಗಳಲ್ಲಿ ಅದನ್ನ ತುಂಬಿಟ್ಟು ಮಾರಾಟ ಮಾಡಲಾಗುತ್ತಿತ್ತು. ಅವಳಿನಗರದ ಇತಿಹಾಸದಲ್ಲಿ ಮೊದಲ ಬಾರಿಗೆ ಬಯೋ ಡಿಸೇಲ್ ದಂಧೆ ಪತ್ತೆಯಾಗಿದ್ದು, ಪೊಲೀಸರು ಮತ್ತಷ್ಟು ಆಳ ಅಗಲವನ್ನ ಪತ್ತೆ ಹಚ್ಚಲಿದ್ದಾರೆ.

Related posts

ಸಾಲ ಪಡೆಯಬೇಕಾದರೆ ಹುಷಾರ್! ಕಿಡ್ನಾಪ್ ಆಗ್ತೀರಾ!!

eNEWS LAND Team

ನವಲಗುಂದ: ಸಾಲಬಾಧೆಗೆ ಕೆರೆಗೆ ಹಾರಿ ರೈತ ಆತ್ಮಹತ್ಯೆ

eNewsLand Team

ನವಲಗುಂದ-ಅಣ್ಣಿಗೇರಿ ಮಧ್ಯದಲ್ಲಿ ಬಸ್ ಪಲ್ಟಿ

eNEWS LAND Team