28 C
Hubli
ಸೆಪ್ಟೆಂಬರ್ 21, 2023
eNews Land
ಅಪರಾಧ

ಧಾರವಾಡ: ಖೋಟಾನೋಟು ಎಣಿಸ್ತಿದ್ದೊರು ಈಗ 1,2,3 ಎಂದು ಕಂಬಿ ಲೆಕ್ಕ ಮಾಡ್ತಿದಾರೆ!

ಸ್ಕ್ಯಾನರ್ ಕಮ್ ಝರಾಕ್ಸ್ ಮಷಿನ್ ಬಳಸಿ ಖೋಟಾನೋಟು ಪ್ರಿಂಟ್ ಮಾಡ್ತಿದ್ರಾ ಖದೀಮರು?

ಇಎನ್ಎಲ್ ಧಾರವಾಡ

ಖೋಟಾನೋಟು ಚಲಾಯಿಸಲು ಪ್ರಯತ್ನ ಮಾಡಿದ್ದ ನಾಲ್ವರನ್ನು ಬಂಧಿಸಿರುವ ಧಾರವಾಡ ಉಪನಗರ ಪೊಲೀಸರು 17,500 ರು. ನಕಲಿ ನೋಟನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಮೂವರ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕೆಲಗೇರಿ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸುವ ಮೂಲಕ 500 ರು. ಮುಖಬೆಲೆಯ ಒಟ್ಟು 35 ಖೋಟಾನೋಟುಗಳನ್ನು ಹಾಗೂ ಒಂದು ಮೋಟರ್‌ಸೈಕಲ್‌ನ್ನು ವಶಕ್ಕೆ ಪಡೆದರು.

ಅಲ್ಲದೇ ದಾಳಿ‌ ವೇಳೆ ಇನ್ನೊಬ್ಬ ಕೂಡ ಪತ್ತೆಯಾಗಿದ್ದು ಎಲ್ಲಾ ನಾಲ್ವರನ್ನು ಬಂಧಿಸಿ ಅವರಿಂದ ಕೃತ್ಯಕ್ಕೆ ಬಳಸಿದ ಎಪ್ಸಾನ್ ಕಂಪನಿಯ ಸ್ಕ್ಯಾನರ್ ಕಮ್ ಝರಾಕ್ಸ ಮಷೀನ್ ವಶಪಡಿಸಿಕೊಂಡಿದ್ದಾರೆ.

ನ್ಯಾಯಾಲಯಕ್ಕೆ ಹಾಜರಪಡಿಸಿ ಹೆಚ್ಚಿನ ತನಿಖೆಗಾಗಿ ನ್ಯಾಯಾಲಯದ ಅನುಮತಿ ಮೇರೆಗೆ ನಾಲ್ಕು ಜನ ಆರೋಪಿತರನ್ನು ಪೊಲೀಸ್ ಕಸ್ಟಡಿಗೆ ಪಡೆದು ತನಿಖೆ ಮುಂದುವರಿಸಿದ್ದಾರೆ.

ಧಾರವಾಡ ಉಪನಗರ ಪೊಲೀಸ ಠಾಣೆ ಪೊಲೀಸ ಇನ್ಸಪೆಕ್ಟರ್ ರಮೇಶ ಹೂಗಾರ ಹಾಗೂ ಸಿಬ್ಬಂದಿ ಕಾರ್ಯವೈಖರಿಗೆ ಮಹಾನಗರ ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.

Related posts

ರೈಲ್ವೆಯಲ್ಲಿ ಮೊಬೈಲ್, ಲ್ಯಾಪ್‌ಟಾಪ್ ಕದಿಯುತ್ತಿದ್ದ ಗೋವಾ ಆಸಾಮಿ ಅರೆಸ್ಟ್

eNEWS LAND Team

ಹುಬ್ಬಳ್ಳಿ: ಖತರ್ನಾಕ ಕಿಲ್ಲರ್: ಭಿಕ್ಷುಕರೇ ಟಾರ್ಗೆಟ್!!

eNEWS LAND Team

ಬ್ಯಾಹಟ್ಟಿ ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ಬಾಲಕರ ಸಾವು

eNEWS LAND Team