23.4 C
Hubli
ಮಾರ್ಚ್ 24, 2023
eNews Land
ಅಪರಾಧ

ಸುಮಾ ಕೊಂದಿದ್ದು ಪತಿ ಅಲ್ವೆ? ರಾಮಣ್ಣ ಸಾಚಾ ಆದ್ರೆ ಕೊಲೆಗಡುಕ ಯಾರು?

Listen to this article

ಈ ಸುದ್ದಿ ಮತ್ತೊಂದು ತಿರುವು ಪಡೆದಂತಾಗಿದೆ

ಮತ್ತೆ ರಕ್ತದ ಕಲೆ ಕಂಡ ಚೋಟಾ ಮುಂಬೈ ಹುಬ್ಬಳ್ಳಿ

ಇಎನ್ಎಲ್ ಹುಬ್ಬಳ್ಳಿ: ನಗರದ ಲ್ಯಾಮಿಂಗ್ಟನ್ ರಸ್ತೆ ಕೃಷ್ಣ ಭವನದ ಎದುರು ಕೊಲೆಯಾದ ದಾವಣಗೆರೆ ಮೂಲದ ಸುಮಾ (28) ಹತ್ಯೆ ಮಾಡಿದ್ದು ಯಾರು? ಹೀಗೊಂದು ಪ್ರಶ್ನೆ ನಗರದ ಕ್ರೈಂ ಲೋಕದಲ್ಲಿ ಮೂಡಿದೆ.

ಹೌದು. ಸುಮಾ ಕೊಂದಿದ್ದು ಪತಿ ರಾಮಣ್ಣನೇ ಎಂಬ ಗಾಳಿಸುದ್ದಿ ಶನಿವಾರ ದಟ್ಟವಾಗಿ ಹರಡಿತ್ತು. ಆದರೆ ಪೊಲೀಸ್ ಮೂಲಗಳು ಆತ ಕೊಲೆ ಮಾಡಿದ ಬಗ್ಗೆ ಏನೂ ಹೇಳುತ್ತಿಲ್ಲ. ಈ ನಡುವೆ ಆತನ ಕೈಗೂ ಗಾಯವಾಗಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಅನ್ಯಜಾತೀಯ ಹುಡುಗರನ್ನು ಪ್ರೀತಿಸಿ ಮದುವೆಯಾಗುವ ಹುಡುಗಿಯರೇ ಹುಷಾರ್!!!

ಬಳ್ಳಾರಿ ಮೂಲದ ರಾಮಣ್ಣನನ್ನು ಮದುವೆಯಾಗಿ ಒಂದು ವರ್ಷದ ಹಿಂದೆ ನಗರದಲ್ಲಿ ಚಿಂದಿ ಆಯುತ್ತಾ ಬದುಕು ನಡೆಸುತ್ತಿದ್ದರು. ಇಂಥವರ ಬದುಕಿನಲ್ಲಿಯೂ ವಿಧಿ ಕ್ರೂರ ಆಟವಾಡಿದೆ.

ಇದನ್ನೂ ಓದಿ: ಸುಚಿರಾಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಪೂರ್ವಾ

ಶುಕ್ರವಾರ ತಡರಾತ್ರಿ 1.30 ರಿಂದ ಶನಿವಾರ ಬೆಳಗ್ಗೆ 7 ಗಂಟೆವರೆಗೆ ಈ ಕೊಲೆ ನಡೆದಿದೆ ಎನ್ನಲಾಗಿದೆ. ಕೊಲೆ ಮಾಡಿದಾತ ಶವವನ್ನು ರಸ್ತೆ ಮಧ್ಯೆ ಎಳೆದು ಹಾಕಿ ವಿಕೃತಿ ಮೆರೆದಿದ್ದನಾ ಎಂಬ ಗುಮಾನಿಯೂ ಮೂಡಿದೆ. ಪೊಲೀಸರು ಸುತ್ತಮುತ್ತಲಿನ ಸಿಸಿ ಕ್ಯಾಮರಾಗಳ ಫೂಟೇಜ್ ಪಡೆದು ತನಿಖೆ ಮುಂದುವರೆಸಿದ್ದಾರೆ.

ಆದರೆ ಪೊಲೀಸ್ ವಿಚಾರಣೆ ವೇಳೆ ರಾಮಣ್ಣ ತಾನು ಮದ್ಯ ಸೇವಿಸಿದ್ದೆ. ನನಗೇನೂ ಗೊತ್ತಿಲ್ಲ ಎನ್ನುತ್ತಿದ್ದಾನಂತೆ.

ಒಟ್ಟಾರೆ, ರಾಮಣ್ಣ ಕೊಲೆ ಮಾಡಿಲ್ಲ, ಆತ ಸಾಚಾ ಎಂದಾದರೆ ದುಷ್ಕರ್ಮಿ ಯಾರು ಎಂಬ ಪ್ರಶ್ನೆ ಮೂಡಿದೆ.

Related posts

ಹುಬ್ಬಳ್ಳಿ; ವಿಮಲ್ ಗುಟ್ಕಾ ವಿಚಾರಕ್ಕೆ ಕಳಸ್’ಗೆ ಚೂರಿ ಚುಚ್ಚಿ ಕೊಲೆ ಮಾಡಿದ ಗೌಸ್!!

eNewsLand Team

ಹುಬ್ಬಳ್ಳಿಗೆ ಮಂಕಿ ಕ್ಯಾಪ್ ಹಾಕೊಂಡು ರಾಬರಿಗೆ ಬಂದವ್ ಅಂದರ್!!! ಪಿನ್ ಟು ಪಿನ್ ಡಿಟೈಲ್ ಇಲ್ಲಿದೆ

eNewsLand Team

ಹೆಬಸೂರು: ಚಿನ್ನಾಭರಣ, ನಗದು ಕದ್ದು ಪರಾರಿ

eNewsLand Team