ಇಎನ್ಎಲ್ ಹುಬ್ಬಳ್ಳಿ: ಪತ್ನಿಯನ್ನು ರಸ್ತೆ ಪಕ್ಕ ಬಿದ್ದಿದ್ದ ಇಟ್ಟಿಗೆಯಿಂದ ಪತಿರಾಯ ಹೊಡೆದು ಕೊಂದಿದ್ದಾನೆ. ನಗರದ ಲ್ಯಾಮಿಂಗ್ಟನ್ ರಸ್ತೆ ಕೃಷ್ಣ ಭವನದ ಎದುರು ದಾವಣಗೆರೆ ಮೂಲದ ಸುಮಾ (28) ಕೊಲೆ ಆಗಿದ್ದಾರೆ.
ಇದನ್ನೂ ಓದಿ: ಅನ್ಯಜಾತೀಯ ಹುಡುಗರನ್ನು ಪ್ರೀತಿಸಿ ಮದುವೆಯಾಗುವ ಹುಡುಗಿಯರೇ ಹುಷಾರ್!!!
ಈಕೆ ಬಳ್ಳಾರಿ ಮೂಲದ ವ್ಯಕ್ತಿಯನ್ನು ಮದುವೆಯಾಗಿ ಒಂದು ವರ್ಷದ ಹಿಂದೆ ನಗರದಲ್ಲಿ ಚಿಂದಿ ಆಯುತ್ತಾ ಬದುಕು ನಡೆಸುತ್ತಿದ್ದರು. ಶುಕ್ರವಾರ ರಾತ್ರಿ ಇವರಿಬ್ಬರೂ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿತ್ತು ಎನ್ನಲಾಗಿದೆ. ಶನಿವಾರ ಬೆಳಗ್ಗೆ ಸುಮಾಳ ತಲೆಗೆ ರಸ್ತೆ ಬದಿ ಬಿದ್ದಿದ್ದ ಇಟ್ಟಿಗೆಯಿಂದ ಹೊಡೆದಿದ್ದಾನೆ.
ಇದನ್ನೂ ಓದಿ: ಸುಚಿರಾಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಪೂರ್ವಾ
ಗಂಭೀರವಾಗಿ ಗಾಯಗೊಂಡು ಬಿದ್ದ ಸುಮಾಳನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿ ವರ್ಗದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.