25.4 C
Hubli
ಏಪ್ರಿಲ್ 26, 2024
eNews Land
ಅಪರಾಧ ಆರ್ಥಿಕತೆ

ಷೇರ್ ಮಾರ್ಕೆಟ್ ಹೆಸರಲ್ಲಿ ಲಕ್ಷ ಲಕ್ಷ ಪಂಗನಾಮ: ಕಣ್ಣೀರಲ್ಲಿ ಕೈ ತೊಳೆಯೊ ಸ್ಥಿತಿ!!

ಇಎನ್ಎಲ್ ಧಾರವಾಡ

ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟಾಗುತ್ತದೆ ಎಂದು ಗೋಪನಕೊಪ್ಪದ ಸ್ಮೀತಾ ಜಮಾದಾರ ಅವರಿಗೆ ನಂಬಿಸಿದ ಮೂವರು, ₹21 ಲಕ್ಷ ವಂಚನೆ ಮಾಡಿದ್ದಾರೆ.

ಪತಿಯ ಪಿಂಚಣಿ ಹಣದಿಂದ ಜೀವನ ನಡೆಸುತ್ತಿದ್ದ ಸುಮಿತಾ ಅವರಿಗೆ ಪರಿಚಯಯವಿದ್ದ ಅಕ್ಕಮ್ಮ ರೆಡ್ಡಿಯಿಂದ ಬೆಳಗಾವಿಯ ಶಿವಪುತ್ರಯ್ಯ ಹಿರೇಮಠ ಪರಿಚಯವಾಗಿದ್ದಾನೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಬರುತ್ತದೆ ಎಂದು ನಂಬಿಸಿ, ₹3ಲಕ್ಷ ಚೆಕ್‌ ಮೂಲಕ ಪಡೆದಿದ್ದನು. ನಂತರ ಅಕ್ಕಮ್ಮರೆಡ್ಡಿ ಜೊತೆ ಜಾಹೀದಾ ಬೇಗಂ ಎಂಬವಳು ಸೇರಿಕೊಂಡು ಮತ್ತೆ ಹಣ ಹೂಡಿಕೆ ಮಾಡಲು ₹18 ಲಕ್ಷವನ್ನು ಫೋನ್‌ ಪೇ ಮೂಲಕ ವರ್ಗಾಯಿಸಿಕೊಂಡಿದ್ದಾರೆ. ಷೇರು ಮಾರುಕಟ್ಟೆಗೆ ಹಣವೂ ಹಾಕದೆ, ಮರಳಿಯೂ ನೀಡದೆ ವಂಚಿಸಿದ್ದಾರೆ ಎಂದು ವೃದ್ಧೆ ಸ್ಮೀತಾ ಮೂವರ ವಿರುದ್ಧ ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Related posts

Metro Brands IPO Details

eNEWS LAND Team

Market Opening Bell

eNEWS LAND Team

ಬಸವರಾಜ ಹೊರಟ್ಟಿ ಮೇಲೆ ಎಫ್ಐಆರ್ ದಾಖಲಿಸಿದ ಪೊಲೀಸ್ ಸಸ್ಪೆಂಡ್

eNEWS LAND Team