ಇಎನ್ಎಲ್ ಡೆಸ್ಕ್: ಇದು ಭಾರತೀಯ ಪತ್ರಿಕೆಗಳಿಗೆ ಅದರಲ್ಲೂ ಕನ್ನಡ ದಿನಪತ್ರಿಕೆಗಳಿಗೆ ಪಾಠ, ಈಗಲೂ ಎಚ್ಚೆತ್ತುಕೊಂಡು ತಪ್ಪು ಸರಿಪಡಿಸಿಕೊಳ್ಳಲು ಮುಂದಾಗದಿದ್ದರೆ ಆಪತ್ತು ಎದುರಾಗುವುದು ನಿಶ್ಚಿತ!!
ಇದನ್ನೂ ಓದಿ:ಬಾಲಗೌರವ ಪ್ರಶಸ್ತಿ ಹಾಗೂ ಮಕ್ಕಳ ಪುಸ್ತಕ ಚಂದಿರ ಪ್ರಶಸ್ತಿಗೆ ಅರ್ಜಿ ಆಹ್ವಾನ
ಒಂದು ದೇಶದ ಆರ್ಥಿಕ ಸ್ಥಿತಿ ಹದಗೆಟ್ಟರೆ ಏನೆಲ್ಲಾ ಆಗಬಹುದೊ ಅದನ್ನೆಲ್ಲವನ್ನೂ ಶ್ರೀಲಂಕಾ ಅನುಭವಿಸುತ್ತಿದೆ.
ಮಾರ್ಚ್ 26, 2022 ರಿಂದ ಮುಂದಿನ ಸೂಚನೆಯವರೆಗೆ ಮುದ್ರಣ ಆವೃತ್ತಿಯನ್ನು ರದ್ದುಗೊಳಿಸಲಾಗುವುದು ಎಂದು ಓದುಗರಿಗೆ ತಿಳಿಸುವ ಸೂಚನೆಯನ್ನು “ದಿ ಐಲ್ಯಾಂಡ್” ಪ್ರಕಟ ಮಾಡಿದೆ. ಡಿಜಿಟಲ್ ಯುಗದಲ್ಲಿ ಮುದ್ರಣ ಮಾಧ್ಯಮದ ಸ್ಥಿತಿ ಡೋಲಾಯಮಾನ ಆಗಿರುವ ಈ ಸಂದರ್ಭದಲ್ಲಿ ಪ್ರತಿಷ್ಠಿತ ಪತ್ರಿಕೆಯೊಂದು ಹೀಗೆ ಘೋಷಣೆ ಮಾಡಿರುವುದು ಅದರ ದಿವಾಳಿತನದ ದ್ಯೋತಕ ಅಷ್ಟೇ.
ಸಾಕಷ್ಟು ನ್ಯೂಸ್‌ಪ್ರಿಂಟ್ ಇಲ್ಲದೆ, ಐಲ್ಯಾಂಡ್ ಮುದ್ರಣ ಆವೃತ್ತಿಯನ್ನು ರದ್ದುಗೊಳಿಸಿದೆ.
ದೇಶವು ಎದುರಿಸುತ್ತಿರುವ ತೀವ್ರ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ನ್ಯೂಸ್‌ಪ್ರಿಂಟ್‌ನ ಕೊರತೆಯಿಂದಾಗಿ ಈಗ ತನ್ನ ಮುದ್ರಣ ಆವೃತ್ತಿಯನ್ನು ಸ್ಥಗಿತಗೊಳಿಸಿದೆ.
“ಚಾಲ್ತಿಯಲ್ಲಿರುವ ನ್ಯೂಸ್‌ಪ್ರಿಂಟ್ ಕೊರತೆ ಮುದ್ರಣ ಸಾಧ್ಯ ಆಗುತ್ತಿಲ್ಲ” “ನಮ್ಮ ನಿಯಂತ್ರಣಕ್ಕೆ ಮೀರಿದ ಪರಿಸ್ಥಿತಿ ಗಳಿಂದಾಗಿ” ಇಂತಹ ಕ್ರಮವನ್ನು ತೆಗೆದುಕೊಂಡಿದ್ದಕ್ಕಾಗಿ ಪತ್ರಿಕೆಯು ತನ್ನ ಓದುಗರಲ್ಲಿ ಕ್ಷಮೆಯಾಚಿಸಿದೆ.
ಈ ಪತ್ರಿಕೆ ಮಾತ್ರವಲ್ಲ, ಇತ್ತೀಚೆಗೆ ಶ್ರೀಲಂಕಾದ ಅನೇಕ ಪತ್ರಿಕೆಗಳು ಕಳೆದು ಹೋಗುತ್ತಿವೆ. ನ್ಯೂಸ್‌ಪ್ರಿಂಟ್ ಮಾತ್ರವಲ್ಲ, ಪ್ಲೇಟ್‌ಗಳು ಮತ್ತು ಶಾಯಿ ಎಲ್ಲವೂ ಕೊರತೆಯಿದೆ ಎಂದು ಅಲ್ಲಿನ ಪತ್ರಕರ್ತರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ದೇಶದ್ರೋಹಿ ಶಕ್ತಿಗಳನ್ನು ಸಹಿಸಲಾಗುವುದಿಲ್ಲ: ಸಿಎಂ ಬೊಮ್ಮಾಯಿ
ಶ್ರೀಲಂಕಾದ ಹೆಚ್ಚಿನ ಪತ್ರಿಕೆಗಳು ತಮ್ಮ ಪುಟಗಳನ್ನು ಮುದ್ರಿಸಲು ನಾರ್ವೆ, ಆಸ್ಟ್ರೇಲಿಯಾ, ಇಂಡೋನೇಷ್ಯಾ ಮತ್ತು ರಷ್ಯಾದಿಂದ ನ್ಯೂಸ್‌ಪ್ರಿಂಟ್ ಅನ್ನು ಬಳಸುತ್ತವೆ. ಡಾಲರ್ ಪಾವತಿಯಲ್ಲಿನ ಅನಿಶ್ಚಿತತೆಯಿಂದಾಗಿ ದೇಶದ ಡಾಲರ್ ಕುಸಿತವು ಅಗತ್ಯ ವಸ್ತುಗಳ ಆಮದು ವಿಳಂಬ ಮತ್ತು ಸ್ಥಗಿತಗೊಳ್ಳಲು ಕಾರಣವಾಗಿದೆ. ಏತನ್ಮಧ್ಯೆ ಶ್ರೀಲಂಕಾದ ರೂಪಾಯಿ ಯುಎಸ್ ಡಾಲರ್ ವಿರುದ್ಧ ಸುಮಾರು 285 (ಅಧಿಕೃತ ಖರೀದಿ ದರ) ಗೆ ಕುಸಿದಿದೆ.
“ನಾವು ಸುಮಾರು ಮೂರು ತಿಂಗಳ ಹಿಂದೆ ನ್ಯೂಸ್‌ಪ್ರಿಂಟ್‌ಗಾಗಿ ಆರ್ಡರ್ ಮಾಡಿದಾಗ, ಅದು ಟನ್‌ಗೆ $ 750 ಆಗಿತ್ತು ಮತ್ತು ಈಗ ಅದು ಪ್ರತಿ ಟನ್‌ಗೆ $ 1070 ಕ್ಕೆ ಏರಿದೆ. ನಮ್ಮ ಉತ್ಪಾದನಾ ವೆಚ್ಚದಲ್ಲಿ ಸುಮಾರು 70% ಸುದ್ದಿ ಮುದ್ರಣಕ್ಕಾಗಿ. ಕಳಪೆ ಗುಣಮಟ್ಟದ ಹೊರತಾಗಿಯೂ ನಾವು ಈಗ ಭಾರತದಿಂದ ನ್ಯೂಸ್‌ಪ್ರಿಂಟ್ ಅನ್ನು ಆಮದು ಮಾಡಿಕೊಳ್ಳಲು ಒತ್ತಾಯಿಸಲ್ಪಟ್ಟಿದ್ದೇವೆ, ”ಎಂದು ತಮಿಳು ದೈನಿಕ ವೀರಕೇಸರಿಯನ್ನು ಪ್ರಕಟಿಸುವ ಎಕ್ಸ್‌ಪ್ರೆಸ್ ನ್ಯೂಸ್‌ಪೇಪರ್ಸ್ (ಸಿಲೋನ್) ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ನಡೇಸನ್ ಆಂಗ್ಲಮಾಧ್ಯಮ ಪತ್ರಿಕೆಗೆ ಹೇಳಿದ್ದಾರೆ.
ಇದನ್ನೂ ಓದಿ:ಕುಂದಗೋಳ: ಪ್ರಸಿದ್ಧ ಸಂಗೀತ ಕಲಾವಿದರ ಪುಣ್ಯಭೂಮಿ: ಡಾ.ಬಂಡು ಕುಲಕರ್ಣಿ
ಇದು ಭಾರತೀಯ ದಿನಪತ್ರಿಕೆಗಳಿಗೆ ದೊಡ್ಡ ಪಾಠವಾಗಿದೆ. ಯಾಕೆ ಗೊತ್ತಾ? ಎಬಿಸಿ ( ಆಡಿಟ್ ಬ್ಯೂರೋ ಆಫ್ ಸರ್ಕ್ಯೂಲೇಶನ್) ಕಾರಣಕ್ಕಾಗಿ ಹಲವಾರು ಪತ್ರಿಕಾ ಸಂಸ್ಥೆಗಳು ಸುಮ್ಮನೆ ಕೋಟ್ಯಂತರ ಪತ್ರಿಕೆಗಳನ್ನು ಮುದ್ರಿಸುತ್ತವೆ. ಇದರಿಂದಾಗಿ ತಾವು ನಂ.1 ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ ನಿವ್ಸ್ ಪ್ರಿಂಟ್ ವ್ಯರ್ಥವಾಗಿ ಖರ್ಚಾಗುತ್ತದೆ. ಭಾರತಕ್ಕೆನೂ ಚೀನಾ ಸಹವಾಸ ಮಾಡಿ ದಿವಾಳಿ ಆದ ಶ್ರೀಲಂಕಾ ಸ್ಥಿತಿ ಬರಲ್ಲ. ಆದಾಗ್ಯೂ ಯಾವುದೇ ಕಾರಣಕ್ಕಾಗಿ ನಿವ್ಸ್ ಪ್ರಿಂಟ್ ಖಾಲಿ ಆಗಿ ಕೊರತೆ ಉಂಟಾದರೆ ಅದನ್ನು ಎದುರಿಸಲು ಸಾಧ್ಯ ಆಗುತ್ತದೆಯೆ ಎಂಬ ಪ್ರಶ್ನೆಗೆ ಸಧ್ಯಕ್ಕೆ ಉತ್ತರ ಇಲ್ಲ. ಹೀಗಾಗಿ ನಿವ್ಸ್ ಪ್ರಿಂಟ್ ಇತಿಮಿತಿಗಳನ್ನು ಅರಿತುಕೊಂಡು ಬಳಸಬೇಕಾಗುತ್ತದೆ. ಇಲ್ಲದಿದ್ದರೆ ಬೇಕಾಬಿಟ್ಟಿ ಸಪ್ಲಿಮೆಂಟ್ ಬಳಸಿದರೆ ಅಪಾಯ ಕಟ್ಟಿಟ್ಟ ಬುತ್ತಿ.