24 C
Hubli
ಸೆಪ್ಟೆಂಬರ್ 27, 2023
eNews Land
ಜನಪದ ಸುದ್ದಿ

ಬಾಲಗೌರವ ಪ್ರಶಸ್ತಿ ಹಾಗೂ ಮಕ್ಕಳ ಪುಸ್ತಕ ಚಂದಿರ ಪ್ರಶಸ್ತಿಗೆ ಅರ್ಜಿ ಆಹ್ವಾನ

ಇಎನ್ಎಲ್ ಹಾವೇರಿ: ಕರ್ನಾಟಕ ಬಾಲವಿಕಾಸ ಅಕಾಡೆಮಿಯಿಂದ “ಬಾಲಗೌರವ ಪ್ರಶಸ್ತಿ”ಗೆ  ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಿಶೇಷ ಸಾಧನೆಗೈದ 18 ವರ್ಷದೊಳಗಿನ ಮಕ್ಕಳಿಂದ ಹಾಗೂ ಮಕ್ಕಳ ಕುರಿತಾಗಿ ರಚಿಸಲ್ಪಟ್ಟ ಪುಸ್ತಕಗಳಿಗೆ “ ಮಕ್ಕಳ ಪುಸ್ತಕ ಚಂದಿರ” ಪ್ರಶಸ್ತಿಗಾಗಿ ಲೇಖರಿಂದ ಪುಸ್ತಕಗಳನ್ನು ಆಹ್ವಾನಿಸಲಾಗಿದೆ.

ಅಣ್ಣಿಗೇರಿ ಜನಪ್ರತಿನಿಧಿಗಳಿಲ್ಲದೇ ಉಳಿತಾಯ ಬಜೆಟ್ ಮಂಡಸಿದ: ಪುರಸಭೆ

  ಕ್ರೀಡಾ, ನೃತ್ಯ, ಸಂಗೀತ, ಸಾಹಿತ್ಯ, ಕರಕುಶಲ, ಚಿತ್ರಕಲೆ ಕ್ಷೇತ್ರ, ಬಹುಮುಖ ಪ್ರತಿಭೆ, ನಾಟಕ ಹೀಗೆ  ಎಂಟು ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆಯನ್ನು  ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ವಿಶೇಷ ಸಾಧನೆಗೈದ ಪ್ರಶಸ್ತಿ  ಪುರಸ್ಕೃತ  18 ವರ್ಷದೊಳಗಿನ ಮಕ್ಕಳು “ಬಾಲಗೌರವ ಪ್ರಶಸ್ತಿ”ಗೆ ಅರ್ಜಿ ಸಲ್ಲಿಸಬಹುದು.
  2019, 2020 ಹಾಗೂ 2021ನೇ ಸಾಲಿನಲ್ಲಿ ಮಕ್ಕಳ ಕ್ಷೇತ್ರದಲ್ಲಿ ರಚಿಸಲ್ಪಟ್ಟ ಆಯ್ದ ಉತ್ತಮ ಪುಸ್ತಕಗಳಿಗೆ “ಮಕ್ಕಳ ಪುಸ್ತಕ ಚಂದಿರ ಪ್ರಶಸ್ತಿ” ಪ್ರದಾನ ಮಾಡಲು  ಆಯಾ ಸಾಲಿನ ಅವಧಿಯಲ್ಲಿ ಜನವರಿಯಿಂದ ಡಿಸೆಂಬರ್ ಅಂತ್ಯದ ಅವಧಿಯಲ್ಲಿ ಪ್ರಕಟಗೊಂಡ ಸ್ವರಚಿತ ಕವನ ಸಂಕಲನ, ಕಥಾ ಸಂಕಲನ, ನಾಟಕ(ಪಠ್ಯಾಧಾರಿತ ಬಿಟ್ಟು) ಮಕ್ಕಳ ಕಾದಂಬರಿ, ವೈಜ್ಞಾನಿಕ ಲೇಖನಗಳ ಸಂಕಲನ, ಅನುವಾದಿತ ಕೃತಿ (ಯಾವುದೇ ಪ್ರಕಾರದ ಮಕ್ಕಳ ಸಾಹಿತ್ಯ) ಮಕ್ಕಳ ಸಾಹಿತ್ಯ ವಿಮರ್ಶಾ ಕೃತಿ ಹೀಗೆ ಏಳು ಪ್ರಕಾರದ ಮಕ್ಕಳ ಸಾಹಿತ್ಯದ ಕೃತಿಗಳನ್ನು ಪ್ರಶಸ್ತಿಗಾಗಿ ಆಹ್ವಾನಿಸಲಾಗಿದೆ.

ಕುಂದಗೋಳ: ಪ್ರಸಿದ್ಧ ಸಂಗೀತ ಕಲಾವಿದರ ಪುಣ್ಯಭೂಮಿ: ಡಾ.ಬಂಡು ಕುಲಕರ್ಣಿ
  ಪುಸ್ತಕಗಳನ್ನು ಪ್ರಶಸ್ತಿಗಾಗಿ ಪರಿಗಣಿಸಲು ಮೌಲ್ಯಮಾಪನಗೊಳಿಸಲು ಪ್ರತಿಯೊಂದಿಗೆ ಕೃತಿ ನಾಲ್ಕು ಪ್ರತಿಗಳನ್ನು ಸಲ್ಲಿಸಬೇಕು.
ಸದರಿ ಪ್ರಶಸ್ತಿಗಳಿಗೆ ಅಗತ್ಯ ದಾಖಲೆಗಳೊಂದಿಗೆ ಭರ್ತಿಮಾಡಿದ ಅರ್ಜಿಯನ್ನು ದಿನಾಂಕ 31-03-2022ರೊಳಗಾಗಿ ಯೋಜನಾಧಿಕಾರಿಗಳು, ಕರ್ನಾಟಕ ಬಾಲವಿಕಾಸ ಅಕಾಡೆಮಿ, ಚಂದ್ರಿಕಾ ಲೇಔಟ್ ಹಿಂಭಾಗ, ಕೆ.ಎಚ್.ಬಿ.ಕಾಲೋನಿ  ಲಕಮನಹಳ್ಳಿ, ಧಾರವಾಡ-580004 ಈ ವಿಳಾಸಕ್ಕೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0836-2461666 ಸಂಪರ್ಕಿಸಲು ಕೋರಲಾಗಿದೆ.

ಕನ್ನಡ ನಾಡು ಉಳಿಸಿ ಬೆಳಸಿ ಕನ್ನಡ ಮನಸ್ಸುಗಳನ್ನು ಕಟ್ಟಿ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ

Related posts

ದೇಶದ್ರೋಹಿ ಶಕ್ತಿಗಳನ್ನು ಸಹಿಸಲಾಗುವುದಿಲ್ಲ: ಸಿಎಂ ಬೊಮ್ಮಾಯಿ

eNEWS LAND Team

ಆರ್ಥಿಕತೆಲಿ ವೇಗದ ಪ್ರಗತಿ ದರ ದಾಖಲಿಸಿದ ವಿಶ್ವದ ನಂ.1 ದೇಶ ಯಾವ್ದು? ಇಲ್ಲಿದೆ ಮಾಹಿತಿ

eNewsLand Team

ಪುಟಾಣಿಗಳಿಗೆ ಪುಷ್ಪ ನೀಡಿ, ಅಂಗನವಾಡಿ ಕೇಂದ್ರಕ್ಕೆ ಸ್ವಾಗತಿಸಿದ ಡಿಸಿ

eNEWS LAND Team