33 C
Hubli
ಏಪ್ರಿಲ್ 25, 2024
eNews Land
ಅಪರಾಧ

ಹುಬ್ಬಳ್ಳಿ ಮಾಜಿ ಕಾರ್ಪೊರೇಟರ್ ಮಗನ ಫೋಟೊ ದುರ್ಬಳಕೆ ಮಾಡುತ್ತಿರುವ ಕಿಡಿಗೇಡಿಗಳು

ಇಎನ್ಎಲ್ ಹುಬ್ಬಳ್ಳಿ: ಆನ್‌ಲೈನ್ ಲೋನ್ ಆ್ಯಪ್ ಗೋಲ್ಡ್ ಕ್ಯಾಶ್ ಮೂಲಕ ತೆಗೆದುಕೊಂಡ ಸಾಲವನ್ನು ಮರುಪಾವತಿ ಮಾಡಿದ್ದರೂ ಕೂಡ ಫೋಟೋ ಮತ್ತು ಕಾಂಟ್ಯಾಕ್ಟ್ ಲೀಸ್ಟ್ ದುರುಪಯೋಗ ಪಡಿಸಿಕೊಂಡು ಅಶ್ಲೀಲ ಚಿತ್ರ ಎಡಿಟ್ ಮಾಡಿ ಪರಿಚಿತರಿಗೆ ರವಾನಿಸಿದ ಬಗ್ಗೆ ಇಲ್ಲಿನ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಬೇಕಾಬಿಟ್ಟಿ ನ್ಯೂಸ್ ಪ್ರಿಂಟ್ ಬಳಸೊ ಪತ್ರಿಕಾ ಸಂಸ್ಥೆಗಳ ಕಥೆ… ಮಾಧ್ಯಮದಲ್ಲಿ ಕೆಲಸ ಮಾಡ್ತಾ ಇದೀರಾ ಇದನ್ನು ತಪ್ಪದೆ ಓದಿ

ಇಲ್ಲಿನ ಶಾಂತಿನಿಕೇತನ ಕಾಲನಿಯ ನಿವಾಸಿ ಆದರ್ಶ ಯಮನೂರ ಜಾಧವ ಅವರು ಗೋಲ್ಡ್ ಕ್ಯಾಶ್ ಮೂಲಕ 8020ರೂ. ಸಾಲ ಅಪ್ಲೈ ಮಾಡಿದ್ದರು. ಸರ್ವೀಸ್ ಚಾರ್ಜ್ ಎಂದು ಒಂದಿಷ್ಟು ಮೊತ್ತ ಕಡಿತ ಮಾಡಿದ್ದ ಆರೋಪಿಗಳು 4935ರೂ. ಹಣವನ್ನು ಸಾಲವಾಗಿ ನೀಡಿದ್ದರು. ಬಳಿಕ ಆದರ್ಶ ಸಾಲವನ್ನು ಮರುಪಾವತಿ ಮಾಡಿದ್ದರು. ಆದರೆ, ಪುನಃ ಸಂಸ್ಥೆಯವರು ಎಂದು ಪರಿಚಯ ಮಾಡಿಕೊಂಡು ಆದರ್ಶ ಅವರನ್ನು ಸಂಪರ್ಕಿಸಿದ ವ್ಯಕ್ತಿಗಳು ಸಾಲ ಮರುಪಾವತಿ ಆಗಿಲ್ಲ. ಪುನಃ ಕಟ್ಟಿ ಎಂದು ಪೀಡಿಸಿದ್ದಾರೆ. ಇದನ್ನು ನಿರಾಕರಿಸಿದಾಗ ಸಾಲಕ್ಕೆ ಅಪ್ಲೈ ಮಾಡುವಾಗ ಸಲ್ಲಿಸಿದ್ದ ಫೋಟೊ ಬಳಸಿಕೊಂಡು ಅಶ್ಲೀಲ ಚಿತ್ರವನ್ನು ಎಡಿಟ್ ಮಾಡಿ ಅವರ ಕಾಂಟಾಕ್ಟ್ ಲೀಸ್ಟ್’ನಲ್ಲಿರುವ ಹಲವರಿಗೆ ರವಾನಿಸಿದ್ದಾರೆ. ಈ ಬಗ್ಗೆ ಕೆಲವರು ಮಾಹಿತಿ ನೀಡಿದ ಬಳಿಕ ಎಚ್ಚೆತ್ತ ಆದರ್ಶ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

Related posts

ಹುಬ್ಬಳ್ಳಿ ಮಹಿಳೆ ಮಹಾರಾಷ್ಟ್ರದಲ್ಲಿ ಕಿಡ್ನಾಪ್: ಹೆಂಡ್ತಿ ಸುರಕ್ಷತೆಗೆ ಓದಲೇಬೇಕಾದ ಸುದ್ದಿ

eNEWS LAND Team

ದೇವದುರ್ಗದ ಮಹಿಳೆ ಕಾಣೆ: ಪತ್ತೆಗೆ ಮನವಿ

eNewsLand Team

ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು ಒತ್ತಾಯಿಸುತಿದ್ದ ಮತಾಂತರಿ

eNEWS LAND Team