ಇಎನ್ಎಲ್ ನವಲಗುಂದ: ತಾಲೂಕಿನ ಜಾವೂರ ಗ್ರಾಮದ ಶೌರ್ಯ ಪ್ರಶಸ್ತಿ ಪಡೆದ ಸಿದ್ದಪ್ಪ ಉಪ್ಪಾರ ಅವರ ಮನೆಗೆ ಬೇಟಿ ನೀಡಿ ಅವರ ತಾಯಿಯವರನ್ನು ಸನ್ಮಾನಿಸಿದರು.
ಶೌರ್ಯ ಪ್ರಶಸ್ತಿ ಪಡೆದ ಸಿದ್ದಪ್ಪ ಉಪ್ಪಾರ ಅವರ ಮನೆಗೆ ಸಚಿವರು ಭೇಟಿ.
ಭಾರತ ಸರಕಾರದ ಶೌರ್ಯ ಪ್ರಶಸ್ತಿಯನ್ನು ಪಡೆದ ಅಗ್ನಿಶಾಮಕ ದಳದ ಸಿದ್ದಪ್ಪ ಉಪ್ಪಾರ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಬೇಟಿ ನೀಡಿ ಅವರ ತಾಯಿಯವರಿಗೆ ಸನ್ಮಾನಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಮಾತನಾಡಿ ತಾಲೂಕಿನ ಜಾವೂರ ಗ್ರಾಮದ ಸಿದ್ದಪ್ಪ ಉಪ್ಪಾರ ಅವರು ಭಾರತ ಸರಕಾರ ಕೊಡಮಾಡುವ ಶೌರ್ಯ ಪ್ರಶಸ್ತಿಯನ್ನು ಪಡೆದು ತಾಲೂಕಿಗೆ ಕೀರ್ತಿ ತಂದಿರುತ್ತಾರೆ. ಇದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದರು.
ಸಿದ್ದಪ್ಪ ಉಪ್ಪಾರ ಅವರು ಕರ್ತವ್ಯ ನಿರತರಾಗಿದ್ದರಿಂದ ಅವರ ಜಾವೂರಲ್ಲಿನಲ್ಲಿರುವ ಅವರ ತಾಯಿಯವರಿಗೆ ಸನ್ಮಾನಿಸಿದರು. ನಂತರ ಜಾವೂರ ಗ್ರಾಮದ ಕೆರೆ ಸಂಜೀವಿನಿ ಯೋಜನೆಯ ಅಡಿಯಲ್ಲಿ ನೀರಿನ ಕೆರೆಯ ಕಾಮಗಾರಿ ವೀಕ್ಷಿಸಿ ಗ್ರಾಮಸ್ಥರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಎಸ್.ಬಿ.ದಾನಪ್ಪಗೌಡರ, ಎ.ಎಂ.ಮನಮಿ, ಶಂಕರಗೌಡ ರಾಯನಗೌಡರ, ಸಿದ್ದಣ್ಣ ಕಿಟಗೇರಿ, ಪ್ರಭು ಇಬ್ರಾಹಿಂಪೂರ ಇತರರ ಇದ್ದರು.