26 C
Hubli
ಮೇ 25, 2024
eNews Land
ಸುದ್ದಿ

ಅಣ್ಣಿಗೇರಿಯಲ್ಲಿ ಪತ್ರಿಕಾ ವಿತರಕರ ದಿನಾಚರಣೆ

ಇಎನ್‌ಎಲ್ ಅಣ್ಣಿಗೇರಿ: ಪತ್ರಿಕಾ ವಿತರಕರು ಚಳಿ, ಮಳೆಯನ್ನದೇ, ಮುಂಜಾನೆ ಪಟ್ಟಣದ ಎಲ್ಲಾ ವಾರ್ಡುಗಳಲ್ಲಿ ಸಂಚರಿಸಿ  ಕಛೇರಿ, ಮನೆ ಮನೆಗಳಿಗೆ ತೆರಳಿ ಪ್ರಪಂಚದ ದಿನ ನಿತ್ಯದ ಸುದ್ದಿಗಳನ್ನು ಪ್ರಕಟಿಸುವ ದಿನಪತ್ರಿಕೆ ವಿತರಣೆ ಮಾಡುವ ಕಾರ್ಯ ಶ್ಲಾಘನೀಯವೆಂದು ಪೋಲಿಸ್ ಠಾಣಾಧಿಕಾರಿ ಸಿದ್ಧಾರೂಡ ಆಲದಕಟ್ಟಿ ಹೇಳಿದರು.

ಪಟ್ಟಣದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಲಯದಲ್ಲಿ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಂತರ ಮಾತನಾಡಿ, ಪತ್ರಿಕೋದ್ಯಮ ಅಂದರೆ ಸಾಕು ಕೀರ್ತಿಯ ಕನಸು ಹೊತ್ತು ಎಡತಾಕುವವರಿಗೆ ಕೊರತೆ ಎನೂ ಇಲ್ಲ. ಕೇವಲ ಕನಸು ಕಂಡರಾಗದು. “ದೂರದ ಬೆಟ್ಟ” ನೋಡಲು ನುಣ್ಣಗೆ ಕಾಣುತ್ತದೆ. ನಡೆದು ಹೊರಟಾಗಲೇ ಅಲ್ಲಿರುವ ಕಲ್ಲು ಮುಳ್ಳುಗಳ ಪರಿಚಯವಾಗುವುದು. ಸುದ್ದಿ ಮತ್ತು ಸುದ್ದಿಗಾರನ ಮದ್ಯ ನಿರ್ಧಷ್ಟತೆ, ವಸ್ತು ನಿಷ್ಟತೆ ಖಂಡಿತವಾಗಿರಬೇಕು. ಸಮಾಜ ಸುದ್ದಿಯ ಸಂವಹವನ್ನು ನಿರ್ಧಷ್ಟವಾಗಿ ಪಡೆಯಲು ಬಯಸುತ್ತದೆ. ತಿರುಚುವ ಸುದ್ದಿಗಳು ಸಂವಹನಕ್ಕೆ ದ್ರೋಹ ಬಗೆದಂತೆ. ಸುದ್ದಿಗೆ ಶುದ್ಧ ಚಾರಿತ್ರ್ಯವೂ ಇರಬೇಕೆಂದರು.
ಅಧ್ಯಕ್ಷತೆವಹಿಸಿದ್ದ ಹಿರಿಯ ಪತ್ರಕರ್ತ ಬಸವರಾಜ ಕುಬಸದ ಮಾತನಾಡಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾರಂಗ ಇವತ್ತು ಎನಾಗಿದೆ. ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಜನರನ್ನು ಜಾಗೃತರನ್ನಾಗಿ ಮಾಡಬೇಕಾದ ಹೊಣೆ ಪತ್ರಕೆಗಳದಾಗಿದೆ. ಆದರೆ ಇವತ್ತು ಪತ್ರಿಕೆಗಳು ಪರಿಸ್ಥಿತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಲಾಭದಾಯಕ ಉದ್ಯಮವಾಗಿ ಪರಿವರ್ತಿಸಿಕೊಂಡಿದ್ದಾರೆ.
ಪತ್ರಕರ್ತರು ನಿಷ್ಠೆಯಿಂದ ಪ್ರಾಮಾಣಿಕ ಸೇವೆಗೈದರೇ ಪತ್ರಿಕಾರಂಗದಲ್ಲಿ ಉಜ್ವಲಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ಸರ್ಕಾರ ಪತ್ರಕರ್ತರು, ವಿತರಕರು, ಕಷ್ಟನಷ್ಟಗಳನ್ನು ಅವಲೋಕಿಸಿ ಸಶಕ್ತ ಬದುಕಿಗೆ ಸೌಲಭ್ಯಗಳನ್ನು ಕಲ್ಪಿಸಬೇಕಿದೆ
ಪ್ರಪಂಚ, ರಾಜ್ಯದ, ರಾಜಕೀಯ, ಸಮಾಜಿಕ, ಸಾಂಸ್ಕೃತಿಕ ಸಾಹಿತ್ಯಕ, ಧಾರ್ಮಿಕ, ಚಟುವಟಿಕೆಗಳ ಮೇಲೆ ಅಚ್ಚಳಿಯದೇ ಪ್ರಭಾವ ಬೀರಿರುವ ದಿನಪತ್ರಿಕೆಗಳು ಆಡಳಿತ ಕೊರತೆಗಳನ್ನು ಸಾರ್ವಜನಿಕ ಹಿತಾಸಕ್ತಿಗಳನ್ನು ಸಮಾಂತರವಾಗಿ ತೂಗಿ ಜನಪರ ಸಮಸ್ಯೆ,ಕೆಲಸಗಳಿಗೆ ಬೆಂಬಲ ನೀಡುತ್ತವೆ.ಪತ್ರಿಕೆ ವರದಿಗಾರರು ಪ್ರಾಮಾಣಿಕ ವಸ್ತುನಿಷ್ಠೆ ವರದಿಗಳನ್ನು ಭಿತ್ತಿರುವ ಮೂಲಕ ತಮ್ಮ ಜ್ಞಾನ,ವ್ಯಕ್ತಿತ್ವ ವಿಕಸನದಿಂದ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವೆಂದರು.
ಅಣ್ಣಿಗೇರಿ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ನಿಂಗಪ್ಪ ಯಳವತ್ತಿ ಮಾತನಾಡಿ ಪತ್ರಿಕೆ ವಿರತಕರು ಪತ್ರಿಕೆಗಳ ಜೀವಾಳ, ಪತ್ರಿಕೆ ವಿತರಣೆ ಮಾಡುವುದರಿಂದ ನಿತ್ಯ ಪ್ರಪಂಚದ ಸುದ್ದಿಗಳನ್ನು ತಿಳಿಯಲು ಸಾಧ್ಯವಾಗಿದೆ. ವರ್ಷದ ಉದ್ದಕ್ಕೂ ನಿತ್ಯ ಚಳಿಮಳೆಯನ್ನದೇ ವಿತರಕರು ದಿನಪತ್ರಿಕೆ ವಿತರಣೆ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ವರದಿಗಾರರೇ ಎಜೆಂಟರಾಗಿ ಪತ್ರಿಕೆ ವಿತರಣೆ ಮಾಡುತ್ತಿದ್ದಾರೆ. ಪತ್ರಿಕಾ ಧರ್ಮದ ನೀತಿ ನಿಯಮಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸ್ವಸ್ಥ ಸಮಾಜ ನಿರ್ಮಾಣದೆಡಗೆ ಜಾಗೃತೆ ಮೂಡಿಸುವ ಪವಿತ್ರ ಕೆಲಸ ನಿಮ್ಮಿಂದಾಗಲಿ. ಎಲ್ಲಾ ದಿನಪತ್ರಿಕೆ ವಿತರಕರಿಗೆ ಪತ್ರಿಕಾ ದಿನಾಚರಣೆ ಶುಭಾಶಯ ಕೋರಿದರು.
ಪತ್ರಿಕಾ ವಿತರಕರಿಗೆ ನೆನಪಿನ ಕಾಣಿಕೆ ಪುಸ್ತಕ ಪೆನ್ನು ವಿತರಣೆ ಮಾಡಿ ಸನ್ಮಾನಿಸಲಾಯಿತು. ಹಾಗೂ ಪೋಲಿಸ್ ಠಾಣಾಧಿಕಾರಿ ಸಿದ್ಧಾರೂಢ ಆಲಕಟ್ಟಿ, ನಿಂಗಪ್ಪ ಯಳವತ್ತಿ ಅವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಈರಪ್ಪ ಗುರಿಕಾರ, ಅರುಣಕುಮಾರ ಹೂಗಾರ, ಜಗದೀಶ ಗಾಣಗೇರ, ಮಹಾಂತೇಶ ನ್ಯಾವಳ್ಳಿ, ರಾಜೇಶ ಮಣ್ಣನವರ, ರಫೀಕ ಕಲಿಗಾರ, ರಮೇಶ ಬಕ್ಕಸದ, ಬುಡ್ಡಾಸಾಬ ಬೆಟಗೇರಿ, ಪತ್ರಕರ್ತರ ಸಂಘದ ಪದಾಧಿಕಾರಿಗಳು, ಸದಸ್ಯರು, ವಿತರಕರು, ಸೇರಿದಂತೆ ಉಪಸ್ಥಿತರಿದ್ದರು.

Related posts

ಸಿದ್ದೇಶ್ವರ ಸ್ವಾಮೀಜಿಯವರ ಭೌತಿಕ ಅಗಲಿಕೆಗೆ ಪ್ರದಾನಿ ನರೇಂದ್ರ ಮೋದಿ ಕಂಬನಿ

eNEWS LAND Team

ಅಣ್ಣಿಗೇರಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಪದಸ್ವೀಕಾರ ನಾಳೆ

eNEWS LAND Team

ಎ.ಟಿ.ಎಮ್ ಹಣ ನಿರಾಕರಿಸಿದ ಹೆಚ್.ಡಿ.ಎಫ್.ಸಿ.ಬ್ಯಾಂಕಿಗೆ ರೂ.2 ಲಕ್ಷದ 24 ಸಾವಿರ ರೂ.ಗಳ ಭಾರಿದಂಡ

eNEWS LAND Team