eNews Land
ಸುದ್ದಿ

ಕುಂದಗೋಳ: ಪ್ರಸಿದ್ಧ ಸಂಗೀತ ಕಲಾವಿದರ ಪುಣ್ಯಭೂಮಿ: ಡಾ.ಬಂಡು ಕುಲಕರ್ಣಿ

Listen to this article

ಇಎನ್ಎಲ್ ಕುಂದಗೋಳ : ಶ್ರೀ ಸವಾಯಿ ಗಂಧರ್ವರ ಸಾಂಸ್ಕೃತಿಕ ಪರಂಪರೆಯಿಂದ ಪ್ರಸಿದ್ಧ ಸಂಗೀತ ಕಲಾವಿದರು ಈ ಪುಣ್ಯಭೂಮಿಯಲ್ಲಿ ಬಂದು ಹೋಗಿದ್ದಾರೆ ಎಂದ ವಿಜಯ ಕರ್ನಾಟಕ ದಿನಪತ್ರಿಕೆ ಸ್ಥಾನಿಕ ಸಂಪಾದಕ ಡಾ.ಬಂಡು ಕುಲಕರ್ಣಿ.

ಇದನ್ನೂ ಓದಿ:ಇಂದು ಪಂ.ಭೀಮಸೇನ ಜೋಶಿ ಜನ್ಮ ಶತಮಾನೋತ್ಸವ ಸಮಾರಂಭ

ಅವರು ಮಂಗಳವಾರ ಸಾಯಂಕಾಲ ಪಟ್ಟಣದ ಶ್ರೀ ಸವಾಯಿ ಗಂಧರ್ವ ಸ್ಮಾರಕ ವಿಶ್ವಸ್ಥ ಸಂಸ್ಥೆಯ ಸಭಾಂಗಣದಲ್ಲಿ ಭಾರತ ರತ್ನ ಪಂ.ಭೀಮಸೇನ ಜೋಶಿ ಅವರ ಜನ್ಮ ಶತಮಾನೋತ್ಸವದ ಪ್ರಯುಕ್ತ ನಡೆದ ಸಂಗೀತೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಯುವ ಶಕ್ತಿ ಇಂತಹ ಕಾರ್ಯಕ್ರಮಗಳನ್ನು ಗೌರವಿಸಬೇಕು ಹಾಗೂ ಭವಿಷ್ಯದ ಪೀಳಿಗೆಗೆ ಸಂಗೀತದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಅಂದರೆ ಮಾತ್ರ ಸಂಗೀತದ ಯಾತ್ರೆ ಮುಂದುವರಿಯುತ್ತದೆ. ಕುಂದಗೋಳ ಪಟ್ಟಣದಲ್ಲಿಯೇ ಸಂಗೀತ ಸಮಾರೋಪ ಆಗಬೇಕೆಂದು ಸಂಗೀತ ನೃತ್ಯ ಅಕಾಡೆಮಿಗೆ ಸ್ಥಳೀಯ ಸಂಗೀತ ಆಸಕ್ತರ ಪರವಾಗಿ ಮನವಿ ಮಾಡಿದರು.

ಇದನ್ನೂ ಓದಿ:ಸಂಗೀತ ಕಾಶಿ ಕುಂದಗೋಳ ಹಾಗೂ ಸಂಗೀತ ಕಲಾವಿದರ ತವರು

ವಿಶ್ವಸ್ಥ ಸಂಸ್ಥೆಯ ಅಧ್ಯಕ್ಷ ಅರವಿಂದ ಕಟಗಿ ಮಾತನಾಡಿ ಸಂಗೀತ ಕಾಶಿ ಎಂದೇ ಕರೆಯುವ ಕುಂದಗೋಳ ಪಟ್ಟಣ ಸಂಗೀತ ಕಲಾವಿದರನ್ನು ಹುಟ್ಟು ಹಾಕಿದ ತವರೂರು ದಿ.ಶ್ರೀ ಸವಾಯಿ ಗಂಧರ್ವರಲ್ಲಿ ಸಂಗೀತ ಅಭ್ಯಾಸವನ್ನು ಪಡೆದು ದೇಶ-ವಿದೇಶದಲ್ಲಿ ಖ್ಯಾತಿ ಗಳಿಸಿದ ವಿದ್ಯಾರ್ಥಿಗಳಲ್ಲಿ ಭಾರತ ರತ್ನ ಪಂ.ಭೀಮಸೇನ ಜೋಶಿಯವರು ಒಬ್ಬರು. ಇಂತಹ ಮಹಾನ ಸಂಗೀತ ಕಲಾವಿದರ ಜನ್ಮಶತಮಾನೋತ್ಸವವನ್ನು ಅವರ ಗುರುಗಳ ಸ್ಥಾನದಲ್ಲಿ ಆಚರಿಸಲಾಗುತ್ತಿದೆ. ಇದು ಈ ಭಾಗದ ಜನತೆಗೆ, ಸಂಗೀತಗಾರರಿಗೆ ಅಲ್ಲದೆ ವಿಶ್ವಸ್ಥ ಸಂಸ್ಥೆಗೆ ಹೆಮ್ಮೆಯ ವಿಷಯ. ನಾವು ಕರ್ನಾಟಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಂಗೀತ ನೃತ್ಯ ಅಕಾಡೆಮಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.

ಇದನ್ನೂ ಓದಿ:ಉರುಸು ಪ್ರಯುಕ್ತ ಸಾಮೂಹಿಕ ಪ್ರಸಾದ ಸೇವನೆ :ಗ್ರಾಮಸ್ಥರು ಅಸ್ವಸ್ಥ

ಸಂಗೀತ ಮತ್ತು ನೃತ್ಯ ಅಕಾಡೆಮಿಯ ಎಲ್ಲಾ ಕಲಾವಿದರನ್ನು ಬೆಳೆಸಿ ಪ್ರೋತ್ಸಾಹಿಸಲು ಮೊದಲು ಸರಕಾರ ₹1.40 (ಒಂದು ಕೋಟಿ ನಲವತ್ತು ಲಕ್ಷ) ಅನುದಾನವನ್ನು ನೀಡುತ್ತಿತ್ತು. ಈಗ ಕೊರೋನಾದಿಂದ ₹60ಲಕ್ಷ ಬರುತ್ತಿದೆ. ಇದು ಪಂ.ಭೀಮಸೇನ ಜೋಶಿ ಅವರ ಮೂರನೇ ಕಾರ್ಯಕ್ರಮ ನಮ್ಮ ಇಲಾಖೆಯ ಕಮೀಟಿಯಲ್ಲಿ ತೀರ್ಮಾನವಾದರೆ ಹಬ್ಬದ ವಾತಾವರಣದೊಂದಿಗೆ ಸಂಗೀತ ಸಮಾರೋಪವನ್ನು ಇಲ್ಲಿಯೇ ಮಾಡುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಿಜಿಸ್ಟರ್ ಎಸ್.ಎಚ್. ಶಿವರುದ್ರಪ್ಪ ಹೇಳಿದರು.

ಇದನ್ನೂ ಓದಿ:ದಿ.ಶಿವಳ್ಳಿ ಆದರ್ಶ ರಾಜಕಾರಣಿ, ಅಧಿಕಾರ ಇರಲಿ, ಇಲ್ಲದಿರಲಿ, ಜನರ ಕಷ್ಟಗಳಿಗೆ ಸ್ಪಂದಿಸುವ ಜನನಾಯಕ: ಮಾಜಿ ಸಿಎಂ ಸಿದ್ರಾಮಯ್ಯ

ಈ ವೇಳೆ ಧಾರವಾಡದ ಪಂ.ಬಸವರಾಜ ಹೆಡಿಗ್ಗೊಂಡ ಶಹನಾಯಿ(ಹಂಸ-ರಾಗ), ಗದಗದ ಶ್ರೀ ವೀರೇಶ್ವರ ಪುಣ್ಯಾಶ್ರಮದ ವಿದ್ಯಾರ್ಥಿಗಳು ಪ್ರಾರ್ಥನೆ ಮತ್ತು ನಾಡಗೀತೆಯನ್ನು ಹಾಡಿದರು. ಕೊಪ್ಪಳದ ಪಂ.ಸದಾಶಿವ ಪಾಟೀಲ ಭಕ್ತಿ ಸಂಗೀತ (ದಾಸ-ವಾಣಿ) ಹಾಗೂ ಇನ್ನೂ ಅನೇಕ ಕಲಾವಿದರು ಸುಮಧುರ ಸಂಗೀತವನ್ನು ಪ್ರಸ್ತುತಪಡಿಸದರು.
ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯೆ ಹೇಮಾ ವಾಗ್ಮೋಡೆ ಅವರು ಸ್ವಾಗತ ಭಾಷಣವನ್ನು ಮಾಡಿದರು.
ಈ ಸಂದರ್ಭದಲ್ಲಿ ಶಂಕರಗೌಡ ದೊಡ್ಡಮನಿ, ವಿಶ್ವಸ್ಥ ಸಂಸ್ಥೆಯ ಸದಸ್ಯರಾದ ಜಿತೇಂದ್ರ ಕುಲಕರ್ಣಿ, ರಾಮಣ್ಣ ಬ್ಯಾಹಟ್ಟಿ, ಪಿ.ಎಸ್.ಗೌಡಪ್ಪನವರ, ಸಿದ್ದು ಧಾರವಾಡಶೆಟ್ಟರ ಹಾಗೂ ಎ.ಕೆ.ಕುಲಕರ್ಣಿ ಇದ್ದರು.

ಇದನ್ನೂ ಓದಿ:ಕುಂದಗೋಳ; ಕಾರ್ಯಕ್ರಮಕ್ಕೆ ಗೈರಾಗಿ ಸಣ್ಣತನ ಪ್ರದರ್ಶಿಸಿದರಾ ಶಾಸಕಿ ಕುಸುಮಾವತಿ?

Related posts

ತೊಗರಿ ಬೆಳೆಯಲ್ಲಿ ಉತ್ತಮ ಇಳುವರಿಗೆ ಏನು ಮಾಡಬೇಕು?

eNEWS LAND Team

6000 ಸಿ.ಎಸ್.ಸಿ ಕೇಂದ್ರಗಳ ಸ್ಥಾಪನೆ: ಎಲ್.ಎಚ್.ಮಂಜುನಾಥ

eNEWS LAND Team

ಅಣ್ಣಿಗೇರಿ ಪುರಸಭೆ ಮತದಾನ : ಜಾತ್ರೆ, ಸಂತೆ ನಿಷೇಧ

eNewsLand Team