30 C
Hubli
ಮಾರ್ಚ್ 21, 2023
eNews Land
ವೈರಲ್ ಸುದ್ದಿ

ಮದುವೆ ಮಾಡಿಸಿ : ಕನ್ಯೆ ಕೊಡ್ತಿಲ್ಲಾ ಎಂದು ಡಿಸಿಗೆ ಪತ್ರ ಬರೆದ ಯುವಕರು

Listen to this article

ಮದುವೆ ಮಾಡಿಸಿ : ಕನ್ಯೆ ಸಿಗ್ತಾ ಇಲ್ಲ ಎಂದು ಡಿಸಿಗೆ ಪತ್ರ ಬರೆದ ಯುವಕರು

ಇಎನ್ಎಲ್ ಬ್ಯೂರೋ :

ತುಮಕೂರು (ಅ.17): ನಮ್ಮನ್ನು ಮದುವೆ ಮಾಡಿಕೊಳ್ಳಲು ಯಾರು ಮುಂದೆ ಬರುತ್ತಿಲ್ಲ. ಹಾಗಾಗಿ ನಮಗೆ ಮದುವೆ ಮಾಡಿಸಿ ಎಂದು 7 ಮಂದಿ ಯುವ ರೈತರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಲಕ್ಮಗೊಂಡನಹಳ್ಳಿ, ತಿಪಟೂರು ತಾಲೂಕಿನ ತಿಮ್ಲಾಪುರ ಗ್ರಾಮದ ರೈತ ಯುವಕರು ಪತ್ರ ಬರೆದು ನಾವು ರೈತರಾಗಿರುವುದರಿಂದ ನಮಗೆ ಎಲ್ಲೂ ವಧು ಸಿಗುತ್ತಿಲ್ಲ. ಆದ್ದರಿಂದ ನಮ್ಮ ಮದುವೆ ಮಾಡಿಸಬೇಕು ಎಂದು ಪತ್ರದ ಮೂಲಕ ತಿಳಿಸಿದ್ದಾರೆ. ರೈತ ಯುವಕರನ್ನು ಮದುವೆಯಾಗಲು ಯಾವುದೇ ಯುವತಿಯರು ಮುಂದೆ ಬರುತ್ತಿಲ್ಲ. ನಮ್ಮ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದ್ದಾರೆ. 7 ಮಂದಿ ಯುವ ರೈತರ ಮದುವೆ ವಿಚಾರ ಇದೀಗ ಸಾಕಷ್ಟು ವೈರಲ್ ಆಗಿದೆ. ಇತ್ತೀಚಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಹೆಚ್ಚು ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ಅನೇಕ ರೈತರು ತಮಗೆ ವಿವಾಹವಾಗಲು ಹೆಣ್ಣು ಸಿಗುತ್ತಿಲ್ಲವೆಂದು ಹೇಳುತ್ತಿದ್ದಾರೆ.

ರೈತರ ಮದುವೆಯಾಗುವ ಯುವತಿಗೆ ಪ್ರೋತ್ಸಾಹಧನ ಯೋಜನೆ?

ಅಂತರ್ಜಾತಿ ವಿವಾಹವಾದರೆ ಸರ್ಕಾರ ಪ್ರೋತ್ಸಾಹಧನ ನೀಡುತ್ತಿದ್ದು ದೇಶಕ್ಕೆ ಅನ್ನ ನೀಡುವ ಕೃಷಿ ಕಾಯಕದಲ್ಲಿ ತೊಡಗಿಕೊಂಡಿರುವ ಯುವ ರೈತರನ್ನು ಮದುವೆಯಾಗುವ ಯುವತಿಯರಿಗೆ ಪ್ರೋತ್ಸಾಹಧನ ನೀಡುವ ಯೋಜನೆಯನ್ನು ಜಾರಿಗೆ ತರಬೇಕೆಂದು ರಾಜ್ಯ ಕೃಷಿ ಸಚಿವರಾದ ಬಿ.ಸಿ.ಪಾಟೀಲರಿಗೆ ಹಾಗೂ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ತಾಲೂಕು ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಕೆ.ಎಸ್‌.ಸದಾಶಿವಯ್ಯ ಆಗ್ರಹಿಸಿದ್ದರು.
ರೈತರು ದೇಶದ ಬೆನ್ನೆಲುಬು, ಅನ್ನ ನೀಡುವ ಅನ್ನದಾತರು. ಆದರೆ ಹೊಲದಲ್ಲಿ ಹಾಗೂ ತೋಟದಲ್ಲಿ ದುಡಿಯುವವರು ಎಂಬ ಕಾರಣಕ್ಕೆ ಹುಡುಗಿಯರು ಯುವ ರೈತರನ್ನು ಮದುವೆಯಾಗಲು ಮುಂದೆ ಬರುತ್ತಿಲ್ಲ. ಹಾಗಾಗಿ ಸಾಕಷ್ಟುಗ್ರಾಮಗಳಲ್ಲಿ ಮದುವೆ ವಯಸ್ಸು ಮೀರಿದ ಯುವಕರು ಪಶ್ಚಾತಾಪಕ್ಕೀಡಾಗಿದ್ದು, ಇದು ಬಹಳಷ್ಟುಯುವ ರೈತರ ವ್ಯಥೆಯ ಕಥೆಯಾಗಿದೆ ಎಂದಿದ್ದರು.

ಕೃಷಿ ಯೋಜನೆಯಡಿ ಈ ರೈತರಿಗೆ ಸಿಗಲಿದೆ ಸಹಾಯಧನ : ಅರ್ಜಿ ಸಲ್ಲಿಸಿ.
ಕೃಷಿ ಕಾಯಕದಲ್ಲಿ ದುಡಿಯುವ ಯುವ ರೈತರಾದರೆ ಹೆಣ್ಣು ಕೊಡಲು ಹಿಂಜರಿಯುತ್ತಾರೆ. ಆದ್ದರಿಂದ ಯುವ ಗ್ರಾಮೀಣ ಯುವ ರೈತರುಗಳು ವಿವಾಹವಾಗಿ ನೆಮ್ಮದಿ ಜೀವನ ಸಾಗಿಸಲು ಕಷ್ಟಕರವಾಗುತ್ತಿದೆ. ಆದ್ದರಿಂದ ಸರ್ಕಾರ ಕೂಡಲೆ ಗ್ರಾಮೀಣ ಯುವರೈತರನ್ನು ಮದುವೆಯಾಗುವ ಯುವತಿಯರಿಗೆ ಪೋತ್ಸಾಹಿಸಲು ಸರ್ಕಾರ ಪ್ರೋತ್ಸಾಹಧನ ಯೋಜನೆಗಳನ್ನು ಜಾರಿ ಮಾಡಬೇಕು ಎಂದು ಕೆ.ಎಸ್‌. ಸದಾಶಿವಯ್ಯ ಕೋರಿದ್ದರು.

Related posts

ಧಾರವಾಡ ಅಮರ್ ಅಣ್ಣನ ಗಿನ್ನೆಸ್ ದಾಖಲೆ ನೋಡ್ರಿ ; ಇವರ ಸಾಧನೆ ಎಂಥದ್ದು ಗೊತ್ತಾ?

eNEWS LAND Team

ಹಿಜಾಬ್ V/S ಕೇಸರಿ ಶಾಲು ; ಸಿಎಂ ಸಭೆಯಲ್ಲಿ ಹೇಳಿದ್ದೇನು?

eNEWS LAND Team

ಜೆಸಿಬಿ ಡ್ರೈವರ್ ಪೋಟೋ ಶೂಟ್ ಮರೆತು ಹೋಗಿದ್ನಾ❓‼️ ಇಲ್ಲಿದೆ ನೋಡಿ

eNEWS LAND Team