27 C
Hubli
ಮಾರ್ಚ್ 28, 2023
eNews Land
ಸುದ್ದಿ

ಭಾರತೀಯ ವೈದ್ಯಕೀಯ ಸಂಘ ನೂತನ‌ ಪದಾಧಿಕಾರಿಗಳ‌ ಅಧಿಕಾರ ಸ್ವೀಕಾರ

Listen to this article

 

ಭಾರತೀಯ ವೈದ್ಯಕೀಯ ಸಂಘ
ನೂತನ‌ ಪದಾಧಿಕಾರಿಗಳ‌ ಅಧಿಕಾರ ಸ್ವೀಕಾರ

ಐಎಂಎ ಸಹಯೋಗದಲ್ಲಿ ಮಹಾನಗರಪಾಲಿಕೆ ಆಸ್ಪತ್ರೆ ಸೇವೆಗಳ ಸುಧಾರಣೆ- ಡಾ.ಸುರೇಶ್ ಇಟ್ನಾಳ

ಇಎನ್ಎಲ್ ಹುಬ್ಬಳ್ಳಿ:
ಕೋವಿಡ್ ಎರಡನೇ ಅವಧಿಯಲ್ಲಿ ಹುಬ್ಬಳ್ಳಿ ಧಾರಾವಾಡ ಅವಳಿನಗರದ ವೈದ್ಯರು ತಮ್ಮ ವಯಸ್ಸು,ಜೀವದ ಹಂಗು ತೊರೆದು ಎದುರಿಸಿದ ಪರಿಣಾಮವಾಗಿ ಇಂದು ಕೋವಿಡ್ ನಿಯಂತ್ರಿಸಲು ಸಾಧ್ಯವಾಗಿದೆ .ಐಎಂಎ ಘಟಕದ ವೈದ್ಯರ ಸಹಕಾರದೊಂದಿಗೆ ಮಹಾನಗರಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಯ ಸೇವೆಗಳನ್ನು ಉತ್ತಮಪಡಿಸೋಣ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ ಹೇಳಿದರು.

ಐಎಂಎ ಭವನದಲ್ಲಿ ಶನಿವಾರ ಸಂಜೆ (ಅ.16) ಭಾರತೀಯ ವೈದ್ಯಕೀಯ ಸಂಘದ ಹುಬ್ಬಳ್ಳಿ ಘಟಕದ 2021-22 ನೇ ಸಾಲಿನ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕೋವಿಡ್ ಮೊದಲ ಅಲೆಯಲ್ಲಿ ಸಹಜವಾಗಿಯೇ ಖಾಸಗಿ ವೈದ್ಯರು ಮತ್ತು ಆಸ್ಪತ್ರೆಗಳು ಸೇವೆಗೆ ಮುಂದೆ ಬಂದಿರಲಿಲ್ಲ.ಆದರೆ ಎರಡನೇ ಅಲೆಯ ವೇಳೆಗೆ ಅವಳಿನಗರದ ಎಲ್ಲಾ ವೈದ್ಯರು ಧೈರ್ಯದಿಂದ ತಮ್ಮ ಪ್ರಾಣದ ಹಂಗು ತೊರೆದು ಸೇವೆ ನೀಡಿದರು.ಅದರ ಪರಿಣಾಮವಾಗಿ ಕೋವಿಡ್ ಅಲೆ ನಿಯಂತ್ರಿಸಲು ಸಾಧ್ಯವಾಯಿತು.ಮಹಾನಗರಪಾಲಿಕೆಯು ಅವಳಿನಗರದಲ್ಲಿ ದೀರ್ಘ ಚರಿತ್ರೆಯುಳ್ಳ ಎರಡು ಆಸ್ಪತ್ರೆಗಳನ್ನು ನಿರ್ವಹಿಸುತ್ತಿದೆ.ಐಎಂಎ ವೈದ್ಯರು ಸಹಕಾರ ನೀಡಿದರೆ ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಯ ಸೇವೆಗಳನ್ನು ಇನ್ನಷ್ಟು ಸುಧಾರಿಸಬಹುದು,ಪಾಲಿಕೆ ಅಗತ್ಯ ಸಹಕಾರ ನೀಡಲಿದೆ.ಸಾರ್ವಜನಿಕ ನೈರ್ಮಲ್ಯ, ಆರೋಗ್ಯದ ಮಹತ್ವವನ್ನು ಜನರಿಗೆ ತಿಳಿಸಲು ಪಾಲಿಕೆಯೊಂದಿಗೆ ವೈದ್ಯರೂ ಕೂಡ ಕೈಜೋಡಿಸಬೇಕು ಎಂದರು.

ಐಎಂಎ ನೂತನ‌ ಅಧ್ಯಕ್ಷ ಡಾ.ಎಸ್.ವೈ.ಮುಲ್ಕಿಪಾಟೀಲ ಮಾತನಾಡಿ, ದೇವರು ನಿಸ್ವಾರ್ಥ ಸೇವೆಗಾಗಿಯೇ ವೈದ್ಯರನ್ನು ಸೃಜಿಸಿದ್ದಾನೆ.ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕೋವಿಡ್ ಅಲೆಯನ್ನು ಸಮಸ್ತ ವೈದ್ಯ ಸಮೂಹ ಪ್ರಾಣದ ಹಂಗು ತೊರೆದು ಎದುರಿಸಿ ಸೇವೆ ನೀಡಿದೆ.ಐವತ್ತು ವರ್ಷಗಳ ಇತಿಹಾಸ ಇರುವ ಹುಬ್ಬಳ್ಳಿ ಐಎಂಎ ಸಂಸ್ಥೆಯ ನಾಯಕತ್ವ ವಹಿಸಿಕೊಳ್ಳುತ್ತಿರುವುದು ಸಂತಸ ತಂದಿದೆ. ವೈದ್ಯಕೀಯ ರಂಗದ ಹಲವಾರು ಕಾರ್ಯಗಳನ್ನು ಹಮ್ಮಿಕೊಳ್ಳುವ ಹುಮ್ಮಸ್ಸು ಇದೆ. ವೈದ್ಯಕೀಯ ಜಾಗೃತಿ ಆರೋಗ್ಯದ ಅರಿವು ಮೂಡಿಸುವುದು,ಹುಬ್ಬಳ್ಳಿಯ ಎಲ್ಲ ಪೊಲೀಸ್ ಠಾಣೆಗಳಲ್ಲಿ ಆರೋಗ್ಯ ತಪಾಸಣೆಯಂತಹ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಗುರಿ ಇದೆ.ರಾಜ್ಯದ ಎರಡನೇ ಅತಿದೊಡ್ಡ ಐಎಂಎ ಘಟಕವಾಗಿರುವ ಹುಬ್ಬಳ್ಳಿ ಶಾಖೆಯ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ಕ್ರೀಡಾ ಚಟುವಟಿಕೆ ಆಯೋಜನೆ ,ಸಂಕಷ್ಟದ ಪರಿಸ್ಥಿತಿ ಎದುರಿಸಲು ವಿಪತ್ತು ನಿರ್ವಹಣಾ ಘಟಕ ಪ್ರಾರಂಭಿಸಲಾಗುವುದು.ಅರ್ಥಪೂರ್ಣ ಸುವರ್ಣ ಮಹೋತ್ಸವವನ್ನು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸುವ ಆಕಾಂಕ್ಷೆಯಿದೆ.ಹುಬ್ಬಳ್ಳಿ ಐಎಂಎ ಅಧ್ಯಕ್ಷನಾಗಿ ಸೇವೆ ದೊರೆತಿರುವುದು ಹರ್ಷ ತಂದಿದೆ,ಜವಾಬ್ದಾರಿ ಹೆಚ್ಚಿಸಿದೆ ಎಂದರು.

ಹುಬ್ಬಳ್ಳಿ ಐಎಂಎ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಡಾ.ಎಸ್.ವೈ.ಮುಲ್ಕಿಪಾಟೀಲ ಅವರಿಗೆ ಹಿರಿಯ ವೈದ್ಯ ಡಾ.ಆರ್.ಎನ್.ಜೋಷಿ ಅವರು ಅಧ್ಯಕ್ಷ ಪದಕ ತೊಡಿಸಿ ಅಧಿಕಾರವಹಿಸಿ, ಮಾತನಾಡಿದರು.

ಸನ್ಮಾನ:
ಕಿಮ್ಸ್ ಸಹಾಯಕ ಪ್ರಾಧ್ಯಾಪಕ ಡಾ.ಸೂರಜ್ ಕೂಬಿಹಾಳ , ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ, ಒಟಿಲಿ ಅನ್ಬನ್‌ಕುಮಾರ್, ಎಂ.ವಿ‌.ಕರಮರಿ, ಸಿಪಿಐಗಳಾದ ಮಹಾಂತೇಶ ಹೊಳಿ,ರವಿಚಂದ್ರ ಬಡಕಾಶಪ್ಪನವರ,ಎಎಸ್‌ಐ ರಾಮಪ್ಪ ಕೆಂಚಣ್ಣವರ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಐಎಂಎ ಉಪಾಧ್ಯಕ್ಷ ಡಾ.ಎಸ್.ವಿ.ಬಬ್ರುವಾಡ,ಕಾರ್ಯದರ್ಶಿ ಡಾ.ಮಂಜುನಾಥ ನೇಕಾರ, ಖಜಾಂಚಿ ಡಾ.ದೇವದಾಸ ಮಧುಕರ್

ಐಎಂಎ ಅಧ್ಯಕ್ಷ ಡಾ.ಎಸ್.ವೈ.ಮುಲ್ಕಿಪಾಟೀಲ ಸ್ವಾಗತಿಸಿದರು,ಶ್ರೀನಿಧಿ ಮುಲ್ಕಿಪಾಟೀಲ ಪ್ರಾರ್ಥಿಸಿದರು.

Related posts

ಹಿರಿಯರ ಸಮಸ್ಯೆ ಪರಿಹಾರಕ್ಕೆ “ಅನ್ವಯಾ” ಚಾಯ್ ಪೇ ಚರ್ಚಾ

eNEWS LAND Team

ಸರ್ಕಾರದ ವಿರುದ್ಧ ಬಹಿರಂಗವಾಗೇ‌ ಜಗದೀಶ ಶೆಟ್ಟರ್ ಅಸಮಾಧಾನ: ಸಿಎಂ ನಿರ್ಧಾರದ ಬಗ್ಗೆಯೂ..!

eNewsLand Team

ಡಿ. 17,18ರಂದು ಅಮೃತೇಶ್ವರ ಜಾತ್ರೆ‌

eNewsLand Team