27 C
Hubli
ಮಾರ್ಚ್ 28, 2023
eNews Land
ವಿದೇಶ ವೈರಲ್ ಸುದ್ದಿ ಸುದ್ದಿ

ಧಾರವಾಡ ಅಮರ್ ಅಣ್ಣನ ಗಿನ್ನೆಸ್ ದಾಖಲೆ ನೋಡ್ರಿ ; ಇವರ ಸಾಧನೆ ಎಂಥದ್ದು ಗೊತ್ತಾ?

Listen to this article

ಸುದ್ದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಹಂಚಿಕೊಳ್ಳಿ ನಮಗೆ ಬೆಂಬಲಿಸಿದಂತಾಗುತ್ತದೆ. ಪ್ಲೀಸ್ ಲೈಕ್ & ಶೇರ್

ಸುದ್ದಿ, ಜಾಹೀರಾತು, ಬ್ಯುಸಿನೆಸ್ ಪ್ರಮೋಷನ್ ಹಾಗೂ ಮಾಧ್ಯಮ ಸಲಹೆಗಾಗಿ ಸಂಪರ್ಕಿಸಿರಿ.

(ವರದಿಗಾರರು ಬೇಕಾಗಿದ್ದಾರೆ)

ಮೊಬೈಲ್ :+91 9141651260

ಇಮೇಲ್ : enewsland@gmail.com

________________________________________________

ಇಎನ್ಎಲ್ ಧಾರವಾಡ: ಒಂದು ನಿಮಿಷದ ಅವಧಿಯಲ್ಲಿ 98 ಬಾರಿ ಹಸ್ತ ಮುದ್ರಿಕೆ ಕಲೆಯನ್ನು ನಿರ್ಮಿಸಿದ ಧಾರವಾಡದ ಯುವ ಕಲಾವಿದ ಅಮರ್ ರಾಜು ಕಾಳೆ ಅವರ ಸಾಧನೆ ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಯಾಗಿದೆ.

 ಆಸಕ್ತಿಯ ಮೂಲಕ ಚಿತ್ರಕಲಾ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ಮೆರೆಯುತ್ತಿರುವ ಯುವಕನ ಸಾಧನೆಯನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ಪ್ರಶಂಸಿಸಿ ಅಭಿನಂದಿಸಿದರು.

ಕಳೆದ 2021ರ ಅಗಷ್ಟ 10ರಂದು ಗಿನ್ನೆಸ್ ವಿಶ್ವ ದಾಖಲೆ ಸಂಸ್ಥೆಯು ಧಾರವಾಡದ ಅರಣ್ಯ ಇಲಾಖೆಯ ಸಮುದಾಯ ಭವನದಲ್ಲಿ ನಿಗದಿಪಡಿಸಿದ್ದ ಪರೀಕ್ಷೆಯಲ್ಲಿ ಸಮಯಪಾಲನೆ, ಸಾಕ್ಷಿ ಮತ್ತಿತರ ಮಾನದಂಡಗಳನ್ನು ಪ್ರಮಾಣೀಕರಿಸುವವರ ಸಮ್ಮುಖದಲ್ಲಿ ಅಮರ್ ಕಾಳೆ ಅವರು ಒಂದು ನಿಮಿಷದ ಅವಧಿಯಲ್ಲಿ 98 ಬಾರಿ ಹಸ್ತ ಮುದ್ರಿಕೆಗಳನ್ನು ಕಲಾತ್ಮಕವಾಗಿ ಕ್ಯಾನವಾಸ್ ಮೇಲೆ ಮೂಡಿಸುವದರ ಜೊತೆಗೆ ಮಧ್ಯ ಭಾಗದಲ್ಲಿ ‘ಕನ್ನಡನಾಡು’ ಎಂಬ ಪದವನ್ನು ಕೂಡ ಬರೆದಿದ್ದರು. ಇವರ ಪ್ರಯತ್ನವನ್ನು ಸಂಸ್ಥೆಯಿಂದ ಗುರುತಿಸಲ್ಪಟ್ಟಿದ್ದ ಅಧಿಕೃತ ವ್ಯಕ್ತ್ತಿಗಳು ಹಾಗೂ ಹಿರಿಯ ಐಎಫ್‍ಎಸ್ ಅಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ಪ್ರಮಾಣ ಪತ್ರ ನೀಡಿ ಗಿನ್ನೆಸ್ ಸಂಸ್ಥೆಗೆ ಕಳಿಸಿದ್ದರು.

ಗಿನ್ನೆಸ್ ದಾಖಲೆಗಳ ಸಂಸ್ಥೆಯು ಪರಿಶೀಲನೆ ನಡೆಸಿ ಅಮರ್ ಕಾಳೆ ಅವರ ಸಾಧನೆಗೆ ಮನ್ನಣೆ ನೀಡಿ ದಾಖಲೆಗೆ ಸೇರಿಸಿಕೊಂಡಿದೆ. ಇದುವರೆಗೆ ಈ ವಿಭಾಗದಲ್ಲಿನ ದಾಖಲೆಯು ಅರಬ್ ರಾಷ್ಟ್ರದ ಬಳಿ ಇತ್ತು.ಇದೀಗ ಅದು ಭಾರತದ ಧಾರವಾಡ ಯುವಕನ ಮುಡಿಗೆ ಏರಿದೆ.  ಕಲಾವಿದ ಅಮರ್ ಕಾಳೆ ಅವರನ್ನು ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ್ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಭಿನಂದಿಸಿದರು.

ಅಮರ್ ಕಾಳೆ ಅವರು ರಚಿಸಿರುವ ನಟ ಪುನೀತ್ ರಾಜಕುಮಾರ, ಗಂಗೂಬಾಯಿ ಹಾನಗಲ್, ಕೃಷ್ಣ ಹಾಗೂ ರಾಧೆ,ನಟರಾಜ, ಮೂಲರಾಮನನ್ನು ಪೂಜಿಸುತ್ತಿರುವ ರಾಘವೇಂದ್ರರು,ಸಿದ್ಧಾರೂಢರು ಸೇರಿದಂತೆ ಅನೇಕ ಆಕರ್ಷಕ ಕಲಾಕೃತಿಗಳನ್ನು ವೀಕ್ಷಿಸಿದ ಜಿಲ್ಲಾಧಿಕಾರಿಗಳು ಮೆಚ್ಚುಗೆ ವ್ಯಕ್ತ ಪಡಿಸಿ, ಧಾರವಾಡದಲ್ಲಿ ಪ್ರದರ್ಶನ ಏರ್ಪಡಿಸಲು ಅವಕಾಶ ಕಲ್ಪಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಕಲಾವಿದನ ತಂದೆ ರಾಜು ಕಾಳೆ ಮತ್ತಿತರರು ಇದ್ದರು.

Related posts

ರಾಷ್ಟ್ರೀಯ ಯುವಜನ ಉತ್ಸವದ ಲೋಗೋ ಮತ್ತು ಮ್ಯಾಸ್ಕಾಟ್ ಬಿಡುಗಡೆ

eNewsLand Team

ಮಹಿಳಾ ಉದ್ಯಮಿಗಳಿಗೆ ಪ್ರತ್ಯೇಕ ಆರ್ಥಿಕ ಸಂಸ್ಥೆ ರಚನೆಗೆ ಚಿಂತನೆ

eNewsLand Team

ಭಿಕ್ಷಕರಲ್ಲೂ ಸಂಘಟನೆ ಶಕ್ತಿ ಇದೆ, ಸಂಘಟನೆ ಅನಿವಾರ್ಯ: ಬಸವರಾಜ ಹೊರಟ್ಟಿ

eNEWS LAND Team