27.8 C
Hubli
ನವೆಂಬರ್ 12, 2024
eNews Land
ವೈರಲ್ ಸುದ್ದಿ

ಪೊಲೀಸ್ ಅಂಕಲ್ ಇಂವ ನನ್ನ ಪೆನ್ಸಿಲ್ ಕದ್ದಾನ್ರಿ…!! ಕೇಸ್ ಮಾಡ್ರಿ

ಇಎನ್ಎಲ್ ವೈರಲ್ ಡೆಸ್ಕ್: ಸಾರ್ ಇಂವ ನನ್ನ ಪೆನ್ಸಿಲ್ ಕದ್ದಾನ್ರಿ.. ಇಂವ ರಬ್ಬರ್ ತಗೋಂಡಾನ್ರಿ, ಪೆನ್ ತಗೋಂಡಾನ್ರಿ..!

ಇದು ನಮ್ಮೂರ ಶಾಲೆಗಳಲ್ಲಿ ಪುಟ್ಟ ಮಕ್ಕಳು ಶಿಕ್ಷಕರ ಬಳಿ ಹೇಳುವ ಸಾಮಾನ್ಯ ದೂರು. ಆದರೆ, ಇಲ್ಲೊಬ್ಬ ಮಹಾಶಯ ಶಿಕ್ಷಕರಿಗೆ ತಿಳಿಸದೇ ಸೀದಾ ಪೊಲೀಸ್ ಸ್ಟೇಶನ್ ಮೆಟ್ಟಿಲೇರಿ ಸಹಪಾಠಿಯ ವಿರುದ್ಧ ಕೇಸ್ ಮಾಡಲು ಹೊರಟಿದ್ದ!

https://twitter.com/eNewsLand/status/1464186758170497026?t=05naoVwiI6qpV_uwJMN4qQ&s=08

ಹೌದು ಇದು ನಡೆದಿರೋದು ಆಂಧ್ರದ ಕರ್ನೂಲ್‌ನಲ್ಲಿ. ಪ್ರತಿ ದಿನ ತಾನು ತರುವ ಪೆನ್ಸಿಲನ್ನು ಸಹಪಾಠಿ ಕಳ್ಳತನ ಮಾಡುತ್ತಿದ್ದಾನೆ ಎಂದು ದೂರಿದ್ದಾನೆ. ಇದಕ್ಕೆ ಆರೋಪಿ ಸ್ಥಾನದಲ್ಲಿರುವ ಬಾಲಕ, ತಾನು ಪೆನ್ಸಿಲ್‌ ಕದ್ದಿಲ್ಲ ಎಂದು ವಾದಿಸುತ್ತಾನೆ.

ಇಬ್ಬರ ಮಾತನ್ನು ಕೇಳಿದ ಪೊಲೀಸ್ ಅಧಿಕಾರಿ ಮಕ್ಕಳಿಗೆ ಈ ರೀತಿ ನಡೆದುಕೊಳ್ಳದಂತೆ ಬುದ್ಧಿವಾದ ಹೇಳಿ ರಾಜಿ ಮಾಡಿಸಿ ಮನೆಗೆ ಕಳುಹಿಸಿದ್ದಾರೆ. ಈ ವಿಡಿಯೋ ತುಣುಕನ್ನು ಟ್ವಿಟ್ಟರ್ ಮೂಲಕ ಶೇರ್‌ ಮಾಡಿರುವ ಪೊಲೀಸರು ಶಾಲಾ ಮಕ್ಕಳು ಕೂಡ ಆಂಧ್ರಪ್ರದೇಶ ಪೊಲೀಸರ ಮೇಲೆ ನಂಬಿಕೆ ಇಡ್ತಾರೆ ಎಂಬುದಕ್ಕೆ ಇದಕ್ಕಿಂತಲೂ ದೊಡ್ಡ ಉದಾಹರಣೆ ಬೇಕಿಲ್ಲ ಎಂದಿದ್ದಾರೆ.

ಅದೇನೇ ಇರಲಿ, ಪೊಲೀಸ್ ಠಾಣೆಯಲ್ಲಿ ಮಕ್ಕಳ ಮಾತು ಸೋಶಿಯಲ್ ಮಿಡಿಯಾದಲ್ಲಿ ಸಖತ್ ಮೈಲೇಜ್ ಪಡೆದಿದೆ.

Related posts

Indian basket ball team is still looking for this lady

eNEWS LAND Team

ಶಕ್ತಿ ಯೋಜನೆಯಿಂದ ನಿಶಕ್ತಿಯಾಗಿ ಕ್ಷೀಣಿಸುತ್ತಿದೆ ವಿದ್ಯಾಭ್ಯಾಸ!!!

eNEWS LAND Team

AC cabin mandatory in trucks from 2025: Decision

eNEWS LAND Team