25.4 C
Hubli
ಏಪ್ರಿಲ್ 26, 2024
eNews Land
ಸುದ್ದಿ

ಪ್ರತಿಯೊಬ್ಬ ಪತ್ರಿಕಾ ವಿತರಕರು ಒಕ್ಕೂಟದ ಕೈ ಬಲಪಡಿಸಬೇಕು: ನಾಗರಾಜ ಕುಲಕರ್ಣಿ. ಪತ್ರಿಕಾ ವಿತರಕರು ನೋಡಲೇಬೇಕಾದ ಸುದ್ದಿ

ಇದನ್ನೂ ನೋಡಿ

https://youtu.be/jgBxOCNx2xM

ಇಎನ್ಎಲ್ ಧಾರವಾಡ: ಪತ್ರಿಕಾ ವಿತರಕರು ಸ್ಥಳೀಯ ಪತ್ರಿಕೆಗಳ ವಿತರಣೆ ಮಾಡುವಾಗಿ ಎಲ್ಲ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ. ನಮ್ಮ ಸಮಸ್ಯೆಗಳನ್ನು ಕೇಳಲು ಸಂಘಟನೆ ಅವಶ್ಯವಾಗಿದೆ. ನಗರ, ತಾಲೂಕು, ಗ್ರಾಮೀಣ ಮಟ್ಟದಲ್ಲಿ ವಿತರಕರ ಸದಸ್ಯತ್ವ ಪಡೆಯಬೇಕು. ವಿತರಕರು ಅಸಂಘಟಿತ ಕಾರ್ಮಿಕರಲ್ಲಿ ಸೇರ್ಪಡೆ ಮಾಡಿ ಸರಕಾರದ ಯೋಜನೆಗಳು ನಮಗೂ ಸಿಗುವಂತಾಗಲು ಪತ್ರಿಕಾ ವಿತರಕರ ಒಕ್ಕೂಟದ ಕೈ ಬಲಪಡಿಸಬೇಕೆಂದು ಜಿಲ್ಲಾ ವಿತರಕರ ಸಂಘದ ಕಾರ್ಯದರ್ಶಿ ನಾಗರಾಜ ಕುಲಕರ್ಣಿ ಹೇಳಿದರು.

ಇದನ್ನು ಓದಿ ಹುಬ್ಬಳ್ಳಿ ಮಹಿಳೆ ಮಹಾರಾಷ್ಟ್ರದಲ್ಲಿ ಕಿಡ್ನಾಪ್: ಹೆಂಡ್ತಿ ಸುರಕ್ಷತೆಗೆ ಓದಲೇಬೇಕಾದ ಸುದ್ದ

ನಗರದ ಉಳವಿ ಚೆನ್ನಬಸವೇಶ್ವರ ದೇವಸ್ಥಾನದಲ್ಲಿ ನಡೆದ ಜಿಲ್ಲಾ ವಿತರಕರ ಸಂಘದಿಂದ ಕರೆದ ಸಭೆಯಲ್ಲಿ ಮಾತನಾಡಿದರು.

ಬೆಳಗಾವಿ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಪ್ರತಾಪ ಬೋಸ್ಲೆ ಮಾತನಾಡಿ ಮಹಾರಾಷ್ಟ್ರದಲ್ಲಿ ಪತ್ರಿಕೆ ವಿತರಕರಿಗೆ ಹಲವಾರು ಯೋಜನೆಗಳನ್ನು ರೂಪಿಸಿದ್ದಾರೆ. ಅದರಂತೆ ರಾಜ್ಯ ಸರಕಾರ ಪತ್ರಿಕಾ ವಿತರಕರ ಕಷ್ಟಗಳಿಗೆ ಸ್ಪಂದಿಸಿದರೆ ಅವರ ಕುಟುಂಬಗಳಿಗೆ ಆಸರೆಯಾಗುತ್ತದೆಂದು ಹೇಳಿದರು.
ಗ್ರಾಮೀಣ ವಿತರಕರು ಸೇರಿದಂತೆ ನಗರದ ಎಲ್ಲ ವಿತರಕರು ಸದಸ್ಯತ್ವವನ್ನು ಮಾಡಿ ಸಂಘಟನೆ ಬಲ ಪಡಿಸಿ ಸರಕಾರಕ್ಕೆ ನಮ್ಮ ಬೇಡಿಕೆಗಳನ್ನು ಕೇಳಿ ನಾವು ಆರ್ಥಿಕವಾಗಿ ಸದೃಢರಾಗೋನವೆಂದು ಹೇಳಿದರು.

ಇದನ್ನು ಓದಿಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ-2022. ಜಿಲ್ಲೆಯ 21 ಮತಗಟ್ಟೆಗಳ ಮಾಹಿತಿ ಇಲ್ಲಿದೆ ನೋಡಿ

ಜಿಲ್ಲಾ ಅಧ್ಯಕ್ಷ ಶಿವು ಹಲಗಿ ಮಾತನಾಡಿ ತಾಲೂಕಿನ ಪತ್ರಿಕಾ ವಿತರಕರಲ್ಲಿ ಹಲವಾರು ಬಾರಿ ಭೇಟಿಯಾಗಿ ಸದಸ್ಯತ್ವ ಪಡೆಯಲು ಒತ್ತಾಯಿಸಿದ್ದೇನೆ. ಈ ಸಭೆಯಲ್ಲಿ ಕೇಳಿಕೊಳ್ಳುವುದೇನೆಂದರೆ ರಾಜ್ಯ ಮಟ್ಟದಲ್ಲಿ ನಾವು ನಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಸದಸ್ಯತ್ವ ಮುಖ್ಯವಾಗಿದೆ ಪ್ರತಿಯೊಬ್ಬರು ಸದಸ್ಯತ್ವ ಪಡೆದು ಪತ್ರಿಕಾ ವಿತರಕರ ಒಗ್ಗೂಟದ ಕೈ ಬಲಪಡಿಸುಣವೆಂದು ಹೇಳಿದರು.
ತಾಲೂಕಾ ಪತ್ರಿಕಾ ವಿತರಕರಾದ ಪುಂಡಲೀಕ ಮುಧೋಳೆ, ಶೇಖರ ಬೇಲೂರ, ಗಂಗಾಧರ ಡಾಂಗೆ, ಶ್ರೀಧರ ಪಾಸ್ತೆ ಮಾತನಾಡಿ ಪತ್ರಿಕೆಗಳ ವಿತರಕರು 20 ರಿಂದ 30 ವರ್ಷಗಳಿಂದ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿರುತ್ತಾರೆ. ಆದರೆ ವಿತರಕರು ಸಂಘಟನೆ ಕೊರತೆಯಿಂದ ನಾವು ಸರಕಾರದ ಯೋಜನೆಗಳನ್ನು ಪಡೆಯುವಲ್ಲಿ ವಿಫಲರಾಗಿದ್ದೇವೆ. ಕೋವಿಡ್ ಇತರೆ ಸಂದರ್ಭಗಳಲ್ಲಿಯೂ ಪತ್ರಿಕೆ ಸರಬರಾಜು ಮಾಡಿ ತಮ್ಮ ಜೀವದ ಹಂಗನ್ನು ತೊರೆದು ಕಾಯಕವನ್ನು ಮಾಡಿದ್ದಾರೆ. ಇದನ್ನೆಲ್ಲ ಸರಕಾರ ಗಮನದಲ್ಲಿಟ್ಟುಕೊಂಡು ಸರಕಾರದ ಯೋಜನೆಗಳು ವಿಶೇಷವಾಗಿ ಪತ್ರಿಕಾ ವಿತರಕರಿಗೂ ಲಭಿಸುವಂತೆ ಮಾಡಬೇಕೆಂದು ಹೇಳಿದರು.

ಇದನ್ನು ಓದಿಹುಬ್ಬಳ್ಳಿ ಮಹಿಳೆ ಮಹಾರಾಷ್ಟ್ರದಲ್ಲಿ ಕಿಡ್ನಾಪ್: ಹೆಂಡ್ತಿ ಸುರಕ್ಷತೆಗೆ ಓದಲೇಬೇಕಾದ ಸುದ್ದಿ

ಈ ವೇಳೆ ಕೃಷ್ಣಾ ಕುಲಕರ್ಣಿ, ರಾಮದೇವ ಕಲ್ಲಿಬುಡ್ಡಿ, ಸತೀಶ ಜಿತೂರಿ, ಎ.ಎಮ್.ಹಿರೇಮಠ, ರವಿ ಪತ್ರೇಶ, ಗುರು ಹಿರೇಮಠ, ಚಂದ್ರಶೇಖರ ಬೇಲೂರ, ಶಿವರಾಮ ಗೋವಿಂದ ಶಿರಗುಪ್ಪಿ ಸೇರಿದಂತೆ ಇತರರಿದ್ದರು.

Related posts

ಧಾರವಾಡ ಜಿಲ್ಲಾ ಪಂಚಾಯತ ನೂತನ ಸಿಇಓ ಆಗಿ ಡಾ.ಸುರೇಶ ಇಟ್ನಾಳ ಅಧಿಕಾರ ಸ್ವೀಕಾರ

eNewsLand Team

ನೈಋತ್ಯ ರೈಲುಗಳ ಮಾರ್ಗ ಬದಲಾವಣೆ ಮಾಹಿತಿ

eNEWS LAND Team

ಬೇರು ಮಟ್ಟದಲ್ಲಿ ಬಿಜೆಪಿ ಬಲಪಡಿಸಲು ಕರೆ

eNEWS LAND Team