27 C
Hubli
ಡಿಸೆಂಬರ್ 7, 2023
eNews Land
ಸುದ್ದಿ

ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ-2022. ಜಿಲ್ಲೆಯ 21 ಮತಗಟ್ಟೆಗಳ ಮಾಹಿತಿ ಇಲ್ಲಿದೆ ನೋಡಿ

ಜಿಲ್ಲೆಯ 21 ಮತಗಟ್ಟೆಗಳ ಮಾಹಿತಿ

ಇಎನ್ಎಲ್ ಹುಬ್ಬಳ್ಳಿ: ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ನಾಳೆ ಜೂನ್ 13 ರಂದು ಮತದಾನ ನಡೆಯಲಿದೆ. ಜಿಲ್ಲೆಯಲ್ಲಿ 21 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ 6445 ಒಟ್ಟು ಮತದಾರರಿದ್ದಾರೆ. ಅವರಲ್ಲಿ 3450 ಪುರುಷ ಹಾಗೂ 2995 ಮಹಿಳಾ ಮತದಾರರಾಗಿದ್ದಾರೆ.

ಜಿಲ್ಲೆಯ ಮತಗಟ್ಟೆಗಳ ಸಂಖ್ಯೆ, ಸ್ಥಳ ಮಾಹಿತಿ:

16-ಅಳ್ನಾವರ ಪಟ್ಟಣ ಪಂಚಾಯತ ಕಚೇರಿ, 17-ಗರಗದ ಶಾಸಕರ ಮಾದರಿ ಕನ್ನಡ ಪ್ರಾಥಮಿಕ ಶಾಲೆ,

ಧಾರವಾಡ ಶಹರ
-18 ತಹಶೀಲ್ದಾರ ಕಚೇರಿ, 19-ಕರ್ನಾಟಕ ಕಾಲೇಜು ಬಿಬಿಎ ಕಟ್ಟಡ, 20-ಸಪ್ತಾಪೂರ ರಸ್ತೆಯ ಶಾರದಾ ಹೆಣ್ಣು ಮಕ್ಕಳ ಶಾಲೆ, 21-ಆಝಾದ್ ಪಾರ್ಕ್ ಹತ್ತಿರ ಟಿಸಿಡಬ್ಲ್ಯೂ ಆವರಣದ ಸರ್ಕಾರಿ ಪ್ರಾಥಮಿಕ ಶಾಲೆ, 22-ವಿದ್ಯಾಗಿರಿಯ ಜೆಎಸ್‍ಎಸ್ ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್ ರೂಮ್ ನಂಬರ್ 3ಜಿ.

ಹುಬ್ಬಳ್ಳಿ ಶಹರ
-23 ಭೈರಿದೇವರಕೊಪ್ಪದ ಸನಾ ಶಾಹೀನ ಪಿಯು ಸೈನ್ಸ್ ಕಾಲೇಜು, 24-ದೇಶಪಾಂಡೆ ನಗರದ ಎನ್.ಆರ್.ದೇಸಾಯಿ ರೋಟರಿ ಕನ್ನಡ ಮಾಧ್ಯಮ ಶಾಲೆ, 25-ಗೋಕುಲ ರಸ್ತೆ, ಬಸವೇಶ್ವರ ನಗರದ ಚನ್ನಬಸಮ್ಮ ಲಿಂಗನಗೌಡ ಪಾಟೀಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, 26-ಪಿಬಿ ರಸ್ತೆಯ ಬಾಸೆಲ್ ಮಿಷನ್ ಗಂಡು ಮಕ್ಕಳ ಹೈಸ್ಕೂಲ್, 27-ತಹಶೀಲ್ದಾರ ಕಚೇರಿಯ ಕೋರ್ಟ್ ಹಾಲ್, ಮಿನಿ ವಿಧಾನ ಸೌಧ,

28-ಹೆಬಸೂರು ಕನ್ನಡ ಪ್ರಾಥಮಿಕ ಗಂಡು ಮಕ್ಕಳ ಶಾಲೆ, 29-ವರೂರು ಕನ್ನಡ ಹಿರಿಯ ಪ್ರಾಥಮಿಕ ಶಾಲೆ,

30-ಕುಂದಗೋಳ ತಾಲೂಕು ಪಂಚಾಯತ, 31-ಗುಡಗೇರಿ ಎಫ್.ಸಿ.ಮುತ್ತೂರ ಹೈಸ್ಕೂಲು ಹೊಸ ಕಟ್ಟಡ ಪಿಯುಸಿ ವಿಭಾಗ, 32-ಯಲಿವಾಳ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹೊಸ ಕಟ್ಟಡ,

33-ಕಲಘಟಗಿ ತಹಶೀಲ್ದಾರ ಕಚೇರಿ, 34-ಗಳಗಿ ಹುಲಕೊಪ್ಪ ಮಾಡೆಲ್ ಸೆಂಟ್ರಲ್ ಸ್ಕೂಲ್,

35-ನವಲಗುಂದ ತಹಶೀಲ್ದಾರ ಕಚೇರಿ ಮಿನಿ ವಿಧಾನ ಸೌಧ, 36-ಅಣ್ಣಿಗೇರಿ ತಾಲೂಕಾ ಶಾಸಕರ ಸರಕಾರಿ ಮಾದರಿ ಶಾಲೆ ನಂ.1 ಈ ಮತಗಟ್ಟೆಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದೆ ಎಂದು ಸಹಾಯಕ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ರೈತರ ಸಮಸ್ಯೆ ನೀಗಿಸಲು ಒಂದಾಗೋಣ: ಸಿಎಂ ಕರೆ

eNewsLand Team

ಜಗದೀಶ್ ಶೆಟ್ಟರ್ ರಾಜೀನಾಮೆ ನೋವು ತಂದಿದೆ: ಸಿಎಂ ಬೊಮ್ಮಾಯಿ

eNEWS LAND Team

ಅಧಿಕಾರಿಗಳ ನಡೆ, ಶಾಲೆ ಕಡೆ

eNEWS LAND Team