27 C
Hubli
ಮೇ 25, 2024
eNews Land
ರಾಜ್ಯ ಸುದ್ದಿ

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟ ASRTU ನೀಡುವ “HERO’S ON THE ROAD” ರಾಷ್ಟ್ರಮಟ್ಟದ ಪ್ರಶಸ್ತಿ ಯಾರಿಗೆ?

ಇದನ್ನು ಓದಿ:ಕಾಂಗ್ರೆಸ್ 40 ಸ್ಟಾರ್ ಪ್ರಚಾರಕ ಪಟ್ಟಿ ಬಿಡುಗಡೆ. ಯಾರ್ಯಾರು ಪ್ರಚಾರಕರು ನೋಡಿ!

ಇಎನ್ಎಲ್ ಹುಬ್ಬಳ್ಳಿ: ಅತಿ ಹೆಚ್ಚಿನ ಅವಧಿಗೆ ಅಪಘಾತ ರಹಿತ ಸುರಕ್ಷಿತ ಬಸ್ ಚಾಲನೆಗಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟ ASRTU ನೀಡುವ  “HERO’S ON THE ROAD” ರಾಷ್ಟ್ರಮಟ್ಟದ ಸುರಕ್ಷಾ ಪ್ರಶಸ್ತಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗದ ಅಥಣಿ ಘಟಕದ ಕೇದಾರಿ ತಮ್ಮಣ್ಣ ಬಕಾರಿ ಮತ್ತು ಬೆಳಗಾವಿ ವಿಭಾಗದ ಬೆಳಗಾವಿ-2ನೇ ಘಟಕದ ಸುರೇಶ ಎನ್. ಭಾವಿಕಟ್ಟಿ ಭಾಜನರಾಗಿದ್ದಾರೆ.

ಇದನ್ನು ಓದಿ:ಹುಬ್ಬಳ್ಳಿ ಸಿದ್ಧಾರೂಢಮಠ ಮೂರಸಾವಿರ ಮಠದ ದರ್ಶನ ಪಡೆದ ಜೆ.ಪಿ.ನಡ್ಡಾ
ಏ.18ರಂದು ನವದೆಹಲಿಯಲ್ಲಿ ಜರುಗಿದ ಸಮಾರಂಭದಲ್ಲಿ ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ  ಹಾಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟದ  (ASRTU) ಅಧ್ಯಕ್ಷೆ ಅಲ್ಕಾ ಉಪಾಧ್ಯಾಯ ಹಾಗೂ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮತ್ತು ASRTU ಉಪಾಧ್ಯಕ್ಷ  ಶೇಖರ್ ಚನ್ನೆ ರವರು ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ರಾಜ್ಯ ಸಾರಿಗೆ ಸಂಸ್ಥೆಗಳ ಅತಿ ಹೆಚ್ಚಿನ ಅವಧಿಗೆ ಅಪಘಾತ ರಹಿತ ಬಸ್  42 ಚಾಲಕರುಗಳಿಗೆ  ಪ್ರಶಸ್ತಿ ವಿತರಿಸಲಾಯಿತು.ವಾಕರಸಾ ಸಂಸ್ಥೆಯ  ಮುಖ್ಯ ಸಂಚಾರ ವ್ಯವಸ್ಥಾಪಕ ರಾಜೇಶ ಹುದ್ದಾರ ಹಾಗೂ ವಿವಿಧ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಹಾಗೂ ಚಾಲಕರುಗಳ ಕುಟುಂಬದವರು ಪಾಲ್ಗೊಂಡಿದ್ದರು.

ಇದನ್ನು ಓದಿ:ಹು-ಧಾ ಸೆಂಟ್ರಲ್ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಪಡೆದ ಶೆಟ್ಟರ್
ದೇಶದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಸುರಕ್ಷಿತ ಬಸ್ ಚಾಲನೆಯನ್ನು ಉತ್ತೇಜಿಸಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟ (ASRTU) ವತಿಯಿಂದ ಮೊದಲ ಬಾರಿಗೆ ಈ ಪ್ರಶಸ್ತಿಯನ್ನು ನೀಡಲಾಗಿರುತ್ತದೆ. ವಿವಿಧ ರಾಜ್ಯಗಳ ಸಾರಿಗೆ ಸಂಸ್ಥೆಗಳಲ್ಲಿ ಸೇವಾವಧಿಯಲ್ಲಿ ದೂರು, ಅಪರಾಧಗಳಿಲ್ಲದ ಅಪಘಾತ ರಹಿತ ಚಾಲಕರುಗಳನ್ನು ಆಯ್ಕೆ ಮಾಡಲಾಗುತ್ತದೆ.ಪ್ರಶಸ್ತಿಯು  ಪ್ರಶಂಷನಾ ಫಲಕ, ಗಿಫ್ಟ್ ಹ್ಯಾಂಪರ್ ಹಾಗೂ ರೂ.10,000 ನಗದು ಪುರಸ್ಕಾರ ಒಳಗೊಂಡಿದೆ.

ಇದನ್ನು ಓದಿ:ಟಿಕೆಟ್ ಕೈತಪ್ಪಲು ಬಿ.ಎಲ್. ಸಂತೋಷ ಕಾರಣ: ಜಗದೀಶ ಶೆಟ್ಟರ್. ಮಾನಸ ಪುತ್ರ ಯಾರು?
ಕೇದಾರಿ ತಮ್ಮಣ್ಣ ಬಕಾರಿ 39 ವರ್ಷ ಸೇವೆ ಸಲ್ಲಿಸಿದ್ದು ಪ್ರಸ್ತುತ ಚಿಕ್ಕೋಡಿ ವಿಭಾಗದ ಅಥಣಿ ಡಿಪೊದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಪಘಾತ ರಹಿತ ಬಸ್ ಚಾಲನೆ ಗಾಗಿ ಸಾರಿಗೆ ಸಂಸ್ಥೆಯಲ್ಲಿ ನೀಡುವ 1990ರಲ್ಲಿ ಬೆಳ್ಳಿ ಪದಕ ಹಾಗೂ 1999ರಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ ಲಭಿಸಿರುತ್ತದೆ‌. ಸುರೇಶ ಎನ್ ಭಾವಿಕಟ್ಟಿ 29 ವರ್ಷ ಸೇವೆ ಸಲ್ಲಿಸಿದ್ದು ಪ್ರಸ್ತುತ ಬೆಳಗಾವಿ ವಿಭಾಗದ ಬೆಳಗಾವಿ -2ನೇ ಡಿಪೊದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2006ರಲ್ಲಿ ಬೆಳ್ಳಿ ಪದಕ ಹಾಗೂ  2017ರಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದಿರುತ್ತಾರೆ.

ಇದನ್ನು ಓದಿ:ಡಾ.ಕ್ರಾಂತಿ ಕಿರಣ ಪರ ಮತಯಾಚಿಸಿದ ಹುಬ್ಬಳ್ಳಿ,-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರು
ಪ್ರಶಸ್ತಿ ಪುರಸ್ಕೃತ ಚಾಲಕರನ್ನು ವಾ.ಕ.ರ.ಸಾ.ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್. ಎಸ್ ಅಭಿನಂದಿಸಿದ್ದಾರೆ. ದಿನದಿಂದ ದಿನಕ್ಕೆ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ.ಅಪಘಾತ ರಹಿತ  ಸುರಕ್ಷಿತ ಬಸ್ ಚಾಲನೆ ಸವಾಲಿನ ಕೆಲಸ.ಇಬ್ಬರೂ ಚಾಲಕರು ತಮ್ಮ ಸುಧೀರ್ಘ ಸೇವಾವಧಿಯಲ್ಲಿ  ಯಾವುದೇ ಅಪರಾಧ, ದೂರುಗಳಿಗೆ ಅವಕಾಶ ನೀಡದೆ ಅಪಘಾತ ರಹಿತ ಚಾಲನೆ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಎಚ್.ರಾಮನಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ‌.
ಇದನ್ನು ಓದಿ:ನಾನು ಅಂಬೇಡ್ಕರ್ ವಾದಿ, ಮೀಸಲಾತಿ ಹೆಚ್ಚಳ ದಿಟ್ಟ ನಿರ್ಧಾರ : ಸಿಎಂ ಬೊಮ್ಮಾಯಿ

Related posts

ಇಎನ್ಎಲ್ ಬೆಳಗಿನ ಸಮಾಚಾರ

eNewsLand Team

ಪುರಸಭೆ ಚುನಾವಣೆಗೆ ರಾಷ್ಟ್ರೀಯ ಪಕ್ಷಗಳ ಟಿಕೇಟ ಆಕಾಂಕ್ಷೆಗೆ ಅಭ್ಯರ್ಥಿಗಳ ಪೈಪೋಟಿ

eNEWS LAND Team

EXTENSION OF PERIODICITY OF SPECIAL TRAINS ಸಾಪ್ತಾಹಿಕ ವಿಶೇಷ ರೈಲುಗಳ ಸೇವೆ ವಿಸ್ತರಣೆ

eNEWS LAND Team