ಇಎನ್ಎಲ್ ಧಾರವಾಡ: ಉತ್ತರ ಕರ್ನಾಟಕ ಆಟೋರಿಕ್ಷಾ ಚಾಲಕರ ಸಂಘ ಜಮಖಂಡಿ ಗ್ರಾಮ ಘಟಕದ ಸದಸ್ಯನ ಆಟೋ ಚಾಲಕನಿಗೆ ಆಕ್ಸಿಡೆಂಟ್’ನಲ್ಲಿ ಕಾಲು ಮುರಿದು ಕೊಂಡಿರುವ ಜಮಖಂಡಿನಲ್ಲಿ ಆಪರೇಷನ್’ಗಾಗಿ ಸುಮಾರು 1.30 ಲಕ್ಷ ರು. ದವರೆಗೆ ಖರ್ಚು ಆಗುತ್ತೆ ಅಂತ ಹೇಳಿದ್ದರು. ಚಾಲಕನ ಮನೆಯಲ್ಲಿ ಕಡು ಬಡವರು ಇದ್ದು ಏನು ತೋಚದೆ ಇದ್ದಾಗ ಪೆಟ್ರೋಲ್ ಆಟೋ ಸ್ವಾಭಿಮಾನಿ ಸಂಘದ ಅಧ್ಯಕ್ಷರು ಗಣಪತಿ ಮನಗೂಳಿ ಅವರು ತಕ್ಷಣ ಉತ್ತರ ಕರ್ನಾಟಕ ಆಟೋ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಅವರನ್ನು ಸಂಪರ್ಕಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕೆಎಂಸಿ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಿಸಿ ಕೊಡಬೇಕೆಂದು ಮನವಿ ಮಾಡಿಕೊಂಡರು ತಕ್ಷಣ ಅವರ ಕರೆಗೆ ಸ್ಪಂದಿಸಿ ಜೈ ಭಾರತಿ ಆಟೋ ನಿಲ್ದಾಣ ಸದಸ್ಯರು ಹಾಗೂ ಶೇಖರಯ್ಯ ಮಠಪತಿಯವರು ಕೆಎಂಸಿ ಅಲ್ಲಿರುವ ಹಿರಿಯ ವೈದ್ಯರಿಗೆ ಮತ್ತು ಅಲ್ಲಿರುವ ಆಡಳಿತ ಮಂಡಳಿಗೆ ಭೇಟಿ ನೀಡಿ ಆಪರೇಷನ್ ಮಾಡಿಸಲಾಗಿತು ಈಗ ಅವರ ಜಮಖಂಡಿಗೆ ಕಳುಹಿಸಿಕೊಡಲಾಯಿತು ಈಗವರು ಚೇತರಿಸಿಕೊಳ್ಳುತ್ತಿದ್ದಾರೆ.
ಇದೇ ವೇಳೆ ರೋಗಿಗೆ ರಕ್ತ ನೀಡಿಲು ಮುಂದಾದ ಆಟೋರಿಕ್ಷಾ ಸದಸ್ಯರಿಗೆ ಹಾಗೂ ಉತ್ತರ ಕರ್ನಾಟಕ ಆಟೋರಿಕ್ಷಾ ಸಂಘದ ಅಧ್ಯಕ್ಷರಾದ ಶೇಖರಯ್ಯ ಮಠಪತಿ ಅವರಿಗೆ ಗಣಪತಿ ಮನಗೂಳಿ ಮತ್ತು
ಪದಾಧಿಕಾರಿಗಳು ಸನ್ಮಾನಿಸಿದರು.
ಜೈ ಭಾರತ್ ಆಟೋ ನಿಲ್ದಾಣದ ಸದಸ್ಯರಾದ ದಾವಲ್ ಸಾಬ್ ಕೊರಟ್ಟಿ ಮುರಳಿ ಇಂಗಳಹಳ್ಳಿ ಜಾಫರ್ ಕೆರೂರ್ ದಾವಲ್ ಅಲಿಶೆಖ ಗುರು ಬೆಟಗೇರಿ ಕಲ್ಲಪ್ಪ ಅಣ್ಣಿಗೇರಿ ರಫೀಕ್ ಕುಂದಗೋಳ ಮಹಾವೀರ್ ಬಿಲನಾ ಆಟೋ ಸೂರಿ ಅನೇಕ ಆಟೋರಿಕ್ಷಾ ಚಾಲಕರು ಉಪಸ್ಥಿತರಿದ್ದರು.