29.9 C
Hubli
ಮಾರ್ಚ್ 29, 2024
eNews Land
ಜನಪದ

ಅಣ್ಣಿಗೇರಿ: ಮಕ್ಕಳ ಸಾಹಿತ್ಯ ಪರಿಷತ್‌ನಿಂದ ಪ್ರತಿಭಾ ಪುರಸ್ಕಾರ

ಇಎನ್ಎಲ್ ಅಣ್ಣಿಗೇರಿ: ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ತಾಲೂಕ ಶಿಕ್ಷಣ ಸಂಸ್ಥೆಗಳಿಗೆ, ಶಿಕ್ಷಕರಿಗೆ, ಕೀರ್ತಿ ತಂದಿರುವ ಮಕ್ಕಳನ್ನು ಸನ್ಮಾನಿಸಿದ ಕ್ಷೇತ್ರಶಿಕ್ಷಣಾಧಿಕಾರಿ ಬಿ.ಎಸ್.ಮಾಯಾಚಾರಿ. ಮಕ್ಕಳು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು, ಪರಿಶ್ರಮ, ಅಧ್ಯಾಯನ, ದೃಢಸಂಕಲ್ಪ, ಆತ್ಮವಿಶ್ವಾಸ, ಸಾಧಿಸುವ ಛಲ ಮೂಲಕ ಪ್ರತಿಭೆ, ಅಭಿವ್ಯಕ್ತಗೊಳಿಸಿ ಸಾಧನೆ ಮಾಡಿರೋದು ಶ್ಲಾಘನೀಯವೆಂದು ಹೇಳಿದರು.

ಇದನ್ನು ಓದಿಜುಗಲಬಂದಿ ರಾಜಕಾರಣ ಮಾಡಿ ಎಳು ಬಾರಿ ಗೆದ್ದ ಹೊರಟ್ಟಿ : ಪಿ.ಎಚ್.ನೀರಲಕೇರಿ

ಪಟ್ಟಣದ ಶ್ರೀ ಸಿದ್ಧರಾಮೇಶ್ವರ ಪ್ರೌಢಶಾಲೆಯಲ್ಲಿ ಮಕ್ಕಳ ಸಾಹಿತ್ಯ ಪರಿಷತ್ ಆಯೋಜಿಸಿದ ಪ್ರತಿಭಾ ಪುರಸ್ಕಾರ ಸಮಾರಂಭದ ಉದ್ಘಾಟನೆ ನೇರವೆರಸಿ ಮಾತನಾಡಿದರು.
ಮಕ್ಕಳಿಗೆ ಪದಗಳ ಅದಲು-ಬದಲು ಕುರಿತು ತಿಳಿಸಿ, ವಿಚಾರಶಕ್ತಿ ಶಬ್ದಭಂಡಾರ ಅಭಿವೃದ್ಧಿಗೊಳಿಸುವಲ್ಲಿ ಹೇಗೆ ಸಹಕಾರಿಯಾಗುತ್ತದೆ ಎಂದು ಮಜಾಗಟ ಮಾಸ್ತರ ಸಾಹಿತಿ ಎಮ್.ಎಸ್.ಪೂಜಾರ ವಿವರಿಸಿದರು.

ಇದನ್ನು ಓದಿಬಸವ ಸಮಿತಿ ಅಂಬೇಡ್ಕರ ವಸತಿ ಯೋಜನೆ ವರ್ಕ್ ಆರ್ಡರ ವಿತರಣೆ

ಮಕ್ಕಳಿಗೆ ಪರಿಸರ ಜಾಗೃತಿ ಮೂಡಿಸುವಲ್ಲಿ ಶಾಲಾ ಆವರಣದಲ್ಲಿ ಸಸಿ ನೆಡುವ ಪೋಷಿಸುವ ನಿಟ್ಟಿನಲ್ಲಿ ಉಪತಹಶೀಲ್ದಾರ ಸಂತೋಷ ಆಸ್ಕಿ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ನಿಡವಣಿ ಪರಿಸರ ಸಂರಕ್ಷಣೆ ಕುರಿತು ತಿಳಿಸಿದರು.

ಮಸಾಪ ಅಧ್ಯಕ್ಷೆ ಲಲಿತಾ ಸಾಲಿಮಠ ಮಾತನಾಡಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಅವರ ಮಾನಸಿಕ ದೈಹಿಕ ಸ್ಥಿತಿಗತಿಗಳನ್ನು ಅವಲೋಕಿಸಿ ಸಹಪಾಠಿಗಳಂತೆ ಮನವರಿಕೆ ಮಾಡಿಕೊಟ್ಟರೇ ಮಕ್ಕಳಲ್ಲಿರುವ ಪ್ರತಿಭೆ ಹೊರಹೊಮ್ಮಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಮಕ್ಕಳ ಪ್ರತಿಭೆ ಗುರ್ತಿಸಿ ಅಭಿನಂದಿಸುತ್ತಿರೋದು ಸಂತಸ ತಂದಿದೆ. ಮಕ್ಕಳ ಪ್ರೋತ್ಸಾಹಿಸುತ್ತಿರುವ ಅಭಿಮಾನಿಗಳ ಬಳಗವನ್ನು ಅಭಿನಂದಿಸಿದರು.

ಇದನ್ನು ಓದಿಅಣ್ಣಿಗೇರಿಲಿ ಅನ್ನದಾತನ ಆತ್ಮಹತ್ಯೆ; ಸಾಯುವಂಥದ್ದು ಏನಾಗಿತ್ತು?

ಈ ಸಂದರ್ಭದಲ್ಲಿ ಶ್ರೀಶೈಲ ಮೂಲಿಮನಿ, ಜಿಲ್ಲಾ ಮಸಾಪ ಅಧ್ಯಕ್ಷ ಸಂಜೀವ ಡುಮಕನಾಳ, ವಿ.ಎಮ್.ಹಿರೇಮಠ, ಬಿ.ವಿ.ಅಂಗಡಿ, ಅವೀನಸಾಬ್ ಪಾಪಣ್ಣವರ, ಪದ್ಮರಾಜ ಅಂತಣ್ಣವರ, ಬಸವರಾಜ ಶಿರೂರ, ಶಶಿಕಲಾ ಯಮನೂರ, ದೇವರಾಜ ನಾವಳ್ಳಿ, ವಿರುಪಾಕ್ಷಪ್ಪ ಉಳ್ಳಾಗಡ್ಡಿ, ಸೇರಿದಂತೆ ಕಸಾಪ ಅಧ್ಯಕ್ಷ ರವಿರಾಜ ವೇರ್ಣೆಕರ. ಮಸಾಪ ಉಪಾಧ್ಯಕ್ಷ ಪಾಂಡುರoಗ ಓಸೇಕರ, ನಂದಾ ಕೊರ್ಲಹಳ್ಳಿ , ಶಿಕ್ಷಕಿ ಪ್ರೇಮಾ, ಹನಮಂತ ಗುಮ್ಮಗೋಳ ಉಪಸ್ಥಿತರಿದ್ದರು.

Related posts

ಅಣ್ಣಿಗೇರಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಪದಸ್ವೀಕಾರ ನಾಳೆ

eNEWS LAND Team

ಡಿ. 17ರಂದು ಕನ್ನಡ ನಾಡು-ನುಡಿ- ವಿಚಾರ ಸಂಕಿರಣ ಮತ್ತು ಕವಿಗೋಷ್ಠಿ

eNEWS LAND Team

ಬಾಲಗೌರವ ಪ್ರಶಸ್ತಿ ಹಾಗೂ ಮಕ್ಕಳ ಪುಸ್ತಕ ಚಂದಿರ ಪ್ರಶಸ್ತಿಗೆ ಅರ್ಜಿ ಆಹ್ವಾನ

eNEWS LAND Team