17 C
Hubli
ಡಿಸೆಂಬರ್ 7, 2022
eNews Land
ಸುದ್ದಿ

ಬೇರು ಮಟ್ಟದಲ್ಲಿ ಬಿಜೆಪಿ ಬಲಪಡಿಸಲು ಕರೆ

Listen to this article

ಇಎನ್ಎಲ್ ಧಾರವಾಡ: ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ವಿಸ್ತಾರಕರ ಕಾರ್ಯಾಗಾರ ಸಭೆ ಹುಬ್ಬಳ್ಳಿ ದೇಶಪಾಂಡೆ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಜರುಗಿತು. ನೂತನವಾಗಿ ಆಯ್ಕೆಯಾದ ವಿಸ್ತಾರಕರಿಗೆ ಕಾರ್ಯ ನಿರ್ವಹಿಸುವ ವಿವರವನ್ನು ನೀಡಲಾಯಿತು.

ಜಿಲ್ಲಾಧ್ಯಕ್ಷ ಸಂಜಯ ಕಪಟಕರ ವಿಸ್ತಾಕರಾಗಿ ನೇಮಕಗೊಂಡ ಬಿಜೆಪಿ ಕಾರ್ಯಕರ್ತ ಉದ್ದೇಶಸಿ ಮಾತನಾಡಿದ ಪಕ್ಷದ ಬಲವರ್ಧನೆ ಕುರಿತು ಪಕ್ಷದ ಧ್ಯೇಯೋದ್ದೇಶಗಳು, ಚುನಾವಣೆ ಗೆಲ್ಲುವಲ್ಲಿ ಬೂತ್ ಮಟ್ಟದ ಕಾರ್ಯಸಿದ್ದತೆ ಮಹತ್ವದ ಪಾತ್ರ ವಹಿಸಿದೆ ಈ ಹಿನ್ನೆಲೆಯಲ್ಲಿ ಬೂತ್ ಮಟ್ಟದಲ್ಲಿ ಸಮರ್ಥ ಕಾರ್ಯಕರ್ತರನ್ನು ನೇಮಿಸಿ ಬೇರು ಮಟ್ಟದಲ್ಲಿ ಪಕ್ಷ ಸಂಘಟನೆಯನ್ನು ಮಾಡಬೇಕು ಎಂದು ವಿಸ್ತಾರಕರ ಕಾರ್ಯವ್ಯಾಪ್ತಿ ಬಗ್ಗೆ ತಿಳಿಸಿಕೊಟ್ಟರು.

ಹು-ಧಾ ಪೂರ್ವ ಕ್ಷೇತ್ರದ ಅಧ್ಯಕ್ಷ ಪ್ರಭು ನವಲಗುಂದಮಠ ಮಾತನಾಡಿ ದಿನದಯಾಳ ಉಪಾಧ್ಯಯ ಪಕ್ಷ ಸಂಘಟನೆಗೆ ಹಾಕಿಕೊಟ್ಟಿರುವ ಹಾದಿಯಲ್ಲಿ ಇಂದು ಬಿಜೆಪಿ ನಡೆಯುತ್ತಿದ್ದು ನಾವು ವಿಸ್ತಾರಕರಾಗಿ ಕೆಲಸಮಾಡುತ್ತಾ ಪಕ್ಷವನ್ನು ಸಂಘಟಿಸುತ್ತಾ ಬಲಪಡಿಸುವ ನಿಟ್ಟಿನಲ್ಲಿ ಸಾಗುತ್ತಿದ್ದೇವೆ. ಮಂಡಳದಿಂದ ಜಿಲ್ಲೆಯ ವ್ಯಾಪ್ತಿಯ ಬೇರೆ ಮಂಡಳದಲ್ಲಿ ಸಂಘಟನಾತ್ಮಕ ಕಾರ್ಯ ನಿರ್ವಹಿಸಬೇಕು ಎಂದರು.

ಹು-ಧಾ ಪೂರ್ವ ಕ್ಷೇತ್ರದ ಅಧ್ಯಕ್ಷ ಪ್ರಭು ನವಲಗುಂದಮಠ, ಜಿಲ್ಲಾ ಅಧ್ಯಕ್ಷ ಸಂಜಯ ಕಪಟಕರ, ವಿಭಾಗದ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಬಸವಾ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಹುಡಾ ಸದಸ್ಯ ಚಂದ್ರಶೇಖರ ಗೋಕಾಕ, ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ವಿನಯ ಸಜ್ಜನವರ, ಜಗದೀಶ ಬುಳ್ಳಾನವರ, ನಾಗರಾಜ ಟಗರಗುಂಟಿ, ಜಿಲ್ಲಾ ಎಸ್.ಸಿ ಮೋರ್ಚಾ ಅಧ್ಯಕ್ಷ ಬಸವರಾಜ ಅಮ್ಮಿನಬಾವಿ, ಸುವರ್ಣಾ ಜಂಗಮಗೌಡರ, ಪ್ರೀತಮ ಅರಕೇರಿ, ಪ್ರತಿಭಾ ಪವಾರ, ಜಶವಂತ ಜಾಧವ, ಮಲ್ಲಪ್ಪ ಶಿರಕೋಳ, ಪೂರ್ಣಿಮಾ ಶಿಂಧೆ, ಹು-ಧಾ ಪೂರ್ವ ವಕ್ತಾರ ಲಕ್ಷ್ಮೀಕಾಂತ ಘೋಡಕೆ ಹಾಗೂ ಸುಮಾರು 50 ಬಿಜೆಪಿ ವಿಸ್ತಾರಕರು ಭಾಗವಹಿಸಿದ್ದರು.

Related posts

ಮಾಜಿ ಶಾಸಕ ಎಂ‌ ಪಿ ಕರ್ಕಿ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ

eNEWS LAND Team

ಮೇ 28 ಹುಧಾ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ

eNewsLand Team

ಕೋವಿಡ್ ಸೋಂಕಿತರ ಟೆಲಿಮೆಡಿಸಿನ್ ಸೇವೆಗಾಗಿ ಈ ನಂಬರ್ ಸಂಪರ್ಕಿಸಿ…

eNewsLand Team