eNews Land
ಅಪರಾಧ

ಹುಬ್ಬಳ್ಳಿ ಮಹಿಳೆ ಮಹಾರಾಷ್ಟ್ರದಲ್ಲಿ ಕಿಡ್ನಾಪ್: ಹೆಂಡ್ತಿ ಸುರಕ್ಷತೆಗೆ ಓದಲೇಬೇಕಾದ ಸುದ್ದಿ

Listen to this article

ಇಎನ್ಎಲ್ ಹುಬ್ಬಳ್ಳಿ : ಮದುವೆಯಾದ ಮಹಿಳೆಗೆ ಬ್ಲಾಕ್’ಮೇಲ್, ಅವಳ ಮಗನ ಸಮೇತ ಮಹಾರಾಷ್ಟ್ರಕ್ಕೆ ಕರೆದೊಯ್ದು ತನ್ನ ಜೊತೆಯೇ ಇರಬೇಕು ಎಂದು ಮಾನಸಿಕ ಹಿಂಸೆ ಹಾಗೂ ಹಲ್ಲೆ ನಡೆಸಿದ ವ್ಯಕ್ತಿ ಹಾಗೂ ಅವನ ಸಂಬಂಧಿಕರ ವಿರುದ್ಧ ಗೋಕುಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾರಾಷ್ಟ್ರ ಮೀರಜ್‌ನ ಸುನಿಲ್‌ ಡೋರಕರ್‌ ಹಾಗೂ ಸರಿತಾ ಕದಂ, ಮಹೇಶ್ ಕದಂ, ಪರಶುರಾಮ ಡೋರಕರ್‌, ಸುರೇಶ ಡೋರಕರ್‌ ವಿರುದ್ಧ ಗೋಕುಲ ರಸ್ತೆ ಮಹಿಳೆ ದೂರು ನೀಡಿದ್ದಾರೆ.

ಇದನ್ನು ಓದಿ:ಲೌಡ್’ಸ್ಪೀಕರ್ ಆದೇಶ ಪಾಲಿಸದಿದ್ದರೆ ಗುಂಡು ಹೊಡೆಯುತ್ತೇನೆ : ಪ್ರಮೋದ್ ಮುತಾಲಿಕ್

ಘಟಪ್ರಭಾದ ತವರು ಮನೆಯಲ್ಲಿ ಇದ್ದಾಗ ಮಹಿಳೆ ದೂರದ ಸಂಬಂಧಿಯಾದ ಸುನಿಲ್‌, ಪರಶುರಾಮ ಮತ್ತು ಸುರೇಖಾ ಅವರ ಜೊತೆ ಮಲ್ಲಿಕ್‌ಜಾನ್‌ ಬಾಬಾ ದರ್ಗಾಕ್ಕೆ ತೆರಳಿದ್ದರು. ಮಹಿಳೆ ತನ್ನ ಲಗೇಜನ್ನು ನೋಡಿಕೊಳ್ಳಲು ಹೇಳಿದ್ದಳು, ಆಗ ಸುನಿಲ್‌, ಮಹಿಳೆಗೆ ಗೊತ್ತಾಗದಂತೆ ಆಕೆಯ ಮೊಬೈಲ್‌ನಿಂದ ತನ್ನ ಮೊಬೈಲ್‌ಗೆ ‘ಐ ಲವ್‌ ಯೂ’ ಎಂದು ಮೆಸೆಜ್‌ ಕಳುಹಿಸಿಕೊಂಡು, ಮಹಿಳೆಯೇ ಮೆಸೆಜ್‌ ಮಾಡಿದ್ದಾಳೆ ಎಂದು, ಪತಿಗೆ ತಿಳಿಸುವುದಾಗಿ ಬೆದರಿಸುತ್ತಿದ್ದನು. ಭಯಗೊಂಡ ಮಹಿಳೆ ಏಪ್ರಿಲ್‌ ತಿಂಗಳಲ್ಲಿ 2 ವರ್ಷದ ಮಗನೊಂದಿಗೆ ಹುಬ್ಬಳ್ಳಿಯ ಪತಿ ಮನೆ ತೊರೆದಿದ್ದಳು.

ಇದನ್ನು ಓದಿಪಿಎಂ-ಕಿಸಾನ್ ಕರ್ನಾಟಕ:47.86 ಲಕ್ಷ ರೈತರಿಗೆ ರಾಜ್ಯದ ಕಂತು 956.71 ಕೋಟಿ ರು. ಬಿಡುಗಡೆ

ಆ ಸಂದರ್ಭ ಮಹಿಳೆ ಪತಿಗೆ ದೂರವಾಣಿಯಲ್ಲಿ ಸಂಪರ್ಕಿಸಲು ಮುಂದಾದಾಗ ಸುನಿಲ್‌ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾನೆ. ಅವಳ ಜೊತೆ ಫೋಟೊ ತೆಗೆಸಿಕೊಂಡು, ಬಲವಂತವಾಗಿ ಕೊಠಡಿಯೊಂದರಲ್ಲಿ ಕೂಡಿ ಹಾಕಿದ್ದನು. ವಕೀಲರ ಸಹಾಯದಿಂದ ಮೀರಜ್‌ನ ಮಹಾತ್ಮಾಗಾಂಧಿ ಚೌಕ್‌ ಪೊಲೀಸ್‌ ಠಾಣೆಗೆ ತೆರಳಿ, ‘ಸ್ವ ಇಚ್ಛೆಯಿಂದ ಬಂದಿರುವುದಾಗಿ’ ಬಾಂಡ್‌ ಮೇಲೆ ಸಹಿ ಹಾಕಿಸಿಕೊಂಡಿದ್ದನು. ಇದಕ್ಕೆ ಅವನ ಸಂಬಂಧಿಕರು ಸಹಾಯ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Related posts

ದೇವದುರ್ಗದ ಮಹಿಳೆ ಕಾಣೆ: ಪತ್ತೆಗೆ ಮನವಿ

eNewsLand Team

ಹುಬ್ಬಳ್ಳಿಲಿ ಧಗಧಗನೆ ಉರಿದ ಕಾರು! ಪ್ರಯಾಣಿಕರ ಕತೆ?

eNewsLand Team

ದ ಕಾಶ್ಮೀರ ಫೈಲ್ಸ್: ಕಲಾವಿದೆಗೆ ಗುಂಡಿಕ್ಕಿದ ನರರಾಕ್ಷಸರು!!

eNewsLand Team