26.8 C
Hubli
ಏಪ್ರಿಲ್ 20, 2024
eNews Land
ಸುದ್ದಿ

ನೈಋತ್ಯ ರೈಲುಗಳ ಮಾರ್ಗ ಬದಲಾವಣೆ ಮಾಹಿತಿ

ಇಎನ್ಎಲ್ ಡೆಸ್ಕ್ :

ರೈಲು ಸೇವೆಯ ಭಾಗಶಃ ರದ್ದತಿ ಹಾಗೂ ನಿಯಂತ್ರಣ

ಕುಪ್ಪಂ ರೈಲ್ವೆ ನಿಲ್ದಾಣದ ಯಾರ್ಡ್ ನಲ್ಲಿ ಅಸ್ತಿತ್ವದಲ್ಲಿರುವ ಫುಟ್ ಓವರ್ ಬ್ರಿಡ್ಜ್ ನ ಬದಲಾಗಿ ಹೊಸ ಫುಟ್ ಓವರ್ ಬ್ರಿಡ್ಜ್ ನ ಅಳವಡಿಕೆಯ ಕಾರ್ಯದ ಸಲುವಾಗಿ ಲೈನ್ ಬ್ಲಾಕ್ ಹಾಗೂ ಪವರ್ ಬ್ಲಾಕ್ ಇರುವ ನಿಮಿತ್ತ ಈ ಕೆಳಗಿನ ರೈಲುಗಳ ಸೇವೆಯ ಭಾಗಶಃ ರದ್ದತಿ ಹಾಗೂ ನಿಯಂತ್ರಣ ಈ ಕೆಳಗಿನ ವಿವರಗಳಂತೆ ಜಾರಿಗೆ ಬರುವುದು.

ರೈಲು ಸೇವೆಯ ಭಾಗಶಃ ರದ್ದತಿ:

1. ದಿನಾಂಕ 30.11.2021, 01.12.2021 ಮತ್ತು 02.12.2021 ರಂದು ರೈಲು ಸಂಖ್ಯೆ 06551 ಕೆಎಸ್ಆರ್ ಬೆಂಗಳೂರು – ಜೋಲಾರಪೇಟೆ ವಿಶೇಷ ಮೆಮು ಸೇವೆಯು ಬಂಗಾರಪೇಟೆ ಹಾಗೂ ಜೋಲಾರಪೇಟೆ ನಿಲ್ದಾಣ ಗಳ ನಡುವೆ ಭಾಗಶಃ ರದ್ದಾಗುವುದು.

2. ದಿನಾಂಕ 30.11.2021, 01.12.2021 ಮತ್ತು 02.12.2021 ರಂದು ರೈಲು ಸಂಖ್ಯೆ 06552 ಜೋಲಾರಪೇಟೆ – ಕೆಎಸ್ಆರ್ ಬೆಂಗಳೂರು ವಿಶೇಷ ಮೆಮು ಸೇವೆಯನ್ನು ಜೋಲಾರಪೇಟೆ ಹಾಗೂ ಬಂಗಾರಪೇಟೆಗಳ ನಡುವೆ ಭಾಗಶಃ ರದ್ದಾಗುವುದು ಮತ್ತು ರೈಲು ಈ ದಿನಾಂಕಗಳಂದು ಬಂಗಾರಪೇಟೆಯಿಂದ ತನ್ನ ನಿಗದಿತ ನಿರ್ಗಮನ ಸಮಯಕ್ಕೆ ಕೆಎಸ್ಆರ್ ಬೆಂಗಳೂರು ನಿಲ್ದಾಣದೆಡೆಗೆ ಹೊರಡುವುದು.

ರೈಲುಗಳ ನಿಯಂತ್ರಣ:

1. ರೈಲು ಸಂಖ್ಯೆ . 22497 ಶ್ರೀಗಂಗಾನಗರ – ತಿರುಚಿನಾಪಳ್ಳಿ ಹಮ್ ಸಫರ್ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ದಿನಾಂಕ
29. 11. 2021 ರಂದು ಟ್ಯಾಕಲ್ ನಿಲ್ದಾಣದಲ್ಲಿ 30 ನಿಮಿಷಗಳ ಅವಧಿಗೆ ನಿಯಂತ್ರಿಸಲಾಗುವುದು.

2. ರೈಲು ಸಂಖ್ಯೆ 12577 ದರ್ಭಾಂಗ – ಮೈಸೂರು ಭಾಗಮತಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲನ್ನು ದಿನಾಂಕ
30.11. 2021 ರಂದು ಮಲ್ಲನೂರು ನಿಲ್ದಾಣದಲ್ಲಿ 80 ನಿಮಿಷಗಳ ಅವಧಿಗೆ ನಿಯಂತ್ರಿಸಲಾಗುವುದು .

3. ರೈಲು ಸಂಖ್ಯೆ 22626 ಕೆಎಸ್ಆರ್ ಬೆಂಗಳೂರು – ಎಂಜಿಆರ್ ಚೆನ್ನೈ ಸೆಂಟ್ರಲ್ ಡಬಲ್ ಡೆಕ್ಕರ್ ಎಕ್ಸ್ ಪ್ರೆಸ್ ರೈಲನ್ನು ದಿನಾಂಕ 30.11. 2021 ಮತ್ತು 02.12.2021 ರಂದು ಬಿಸನಟ್ಟಮ್ ನಿಲ್ದಾಣದಲ್ಲಿ 30 ನಿಮಿಷಗಳ ಅವಧಿಗೆ ಹಾಗೂ ದಿನಾಂಕ 01.12.2021 ರಂದು ವರದಪುರ ನಿಲ್ದಾಣದಲ್ಲಿ 40 ನಿಮಿಷಗಳ ಅವಧಿಗೆ ನಿಯಂತ್ರಿಸಲಾಗುವುದು.

4. ರೈಲು ಸಂಖ್ಯೆ 12640 ಕೆಎಸ್ಆರ್ ಬೆಂಗಳೂರು – ಎಂಜಿಆರ್ ಚೆನ್ನೈ ಸೆಂಟ್ರಲ್ ಬೃಂದಾವನ್ ಎಕ್ಸ್ ಪ್ರೆಸ್ ರೈಲನ್ನು ದಿನಾಂಕ 30.11.2021, 01.12.2021 ಮತ್ತು 02.12.2021 ರಂದು ಬಂಗಾರಪೇಟೆ ನಿಲ್ದಾಣದಲ್ಲಿ 30 ನಿಮಿಷಗಳ ಅವಧಿಗೆ ನಿಯಂತ್ರಿಸಲಾಗುವುದು.

5. ದಿನಾಂಕ 01.12.2021ರ ರೈಲು ಸಂಖ್ಯೆ 12539 ಯಶವಂತಪುರ – ಲಕ್ನೌ ಎಕ್ಸ್ ಪ್ರೆಸ್ ರೈಲನ್ನು ದಿನಾಂಕ 01.12.2021ರಂದು ಬಿಸನಟ್ಟಮ್ ನಿಲ್ದಾಣದಲ್ಲಿ 75 ನಿಮಿಷಗಳ ಅವಧಿಗೆ ನಿಯಂತ್ರಿಸಲಾಗುವುದು ಎಂದು ಹುಬ್ಬಳ್ಳಿ ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ ಹೆಗಡೆ ತಿಳಿಸಿದ್ದಾರೆ.

Related posts

ವಿದ್ಯಾರ್ಥಿನಿಯರಲ್ಲಿ ದೈರ್ಯ ತುಂಬಲು ಓಬವ್ವ ಆತ್ಮರಕ್ಷಣಾ ಕಲೆ ತರಬೇತಿ- ಜಿಲ್ಲಾಧಿಕಾರಿ 

eNewsLand Team

ಹುಬ್ಬಳ್ಳಿಲೂ ಮಕ್ಕಳಿಗೆ ಕೋವಿಡ್ ಲಸಿಕಾಕರಣ

eNewsLand Team

ಚಿನ್ನದ ವ್ಯಾಪಾರಿಗಳಿಗೆ ಐಟಿ ಶಾಕ್

eNEWS LAND Team