27 C
Hubli
ಡಿಸೆಂಬರ್ 7, 2023
eNews Land
ಸುದ್ದಿ

ಧಾರವಾಡ ಜಿಲ್ಲಾ ಪಂಚಾಯತ ನೂತನ ಸಿಇಓ ಆಗಿ ಡಾ.ಸುರೇಶ ಇಟ್ನಾಳ ಅಧಿಕಾರ ಸ್ವೀಕಾರ

ಇಎನ್ಎಲ್ ಧಾರವಾಡ: ಧಾರವಾಡ ಜಿಲ್ಲಾ ಪಂಚಾಯತಿ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಡಾ.ಸುರೇಶ ಇಟ್ನಾಳ ಅವರು ಸೋಮವಾರ ಬೆಳಗ್ಗೆ ಅಧಿಕಾರ ಸ್ವೀಕರಿಸಿದರು.

ಹಿಂದಿನ ಸಿಇಓ ಡಾ.ಸುಶೀಲಾ ಬಿ. ಅವರು ಡಾ. ಇಟ್ನಾಳ ಅವರಿಗೆ ಅಧಿಕಾರ ವಹಿಸಿಕೊಟ್ಟರು.

ಡಾ.ಸುರೇಶ ಇಟ್ನಾಳ ಅವರು ಬೆಳಗಾವಿ ಮತ್ತು ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಮತ್ತು ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ.

ಅವರು ಇಂದು ಬೆಳಿಗ್ಗೆ ಧಾರವಾಡ ಜಿಲ್ಲಾ ಪಂಚಾಯತನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿ ಅಧಿಕಾರವಹಿಸಿಕೊಂಡರು.

ಈ ವೇಳೆ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ರೇಖಾ ಡೊಳ್ಳಿನವರ, ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ, ಯೋಜನಾ ನಿರ್ದೇಶಕ ಬಿ.ಎಸ್.ಮುಗನೂರಮಠ ಸೇರಿ ಜಿಲ್ಲಾ ಪಂಚಾಯತ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.

Related posts

ನೀತಿ ನಿಯಮಗಳ ಆಡಳಿತ ಬೇಕು: ಶಾಸಕ ನಿಂಬಣ್ಣವರ

eNEWS LAND Team

ಹುಬ್ಬಳ್ಳಿಲಿ ಪ್ರತ್ಯೇಕ ಅಪಘಾತ; ಇಬ್ಬರು ಸ್ಪಾಟ್ ಔಟ್

eNewsLand Team

ನಗರದಲ್ಲಿ‌ ಇಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಏನು ಹೇಳಿದರು?

eNEWS LAND Team