26 C
Hubli
ಏಪ್ರಿಲ್ 30, 2024
eNews Land
ಸುದ್ದಿ

ಅಣ್ಣಿಗೇರಿ: ಭಾರತ ಗ್ಯಾಸ ವಿತರಕರ ಪ್ರಗತಿ ಪರಿಶೀಲನಾ ಸಭೆ

ಇಎನ್ಎಲ್ ಅಣ್ಣಿಗೇರಿ: ತಾಲೂಕಿನ 9 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ಯಾಸ ಸಿಲೆಂಡರ್ ವಿತರಿಸುವ ಮಹಿಳಾ ಎಜೇನ್ಸಿ ವಿತರಕರು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಪ್ರಮಾಣದಲ್ಲಿ ಗ್ಯಾಸ ಬಳಕೆ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಕಷ್ಟದಲ್ಲಿರುವ ಕುಟುಂಬದ ಮಹಿಳೆಯರ ಆರೋಗ್ಯ ಕಾಪಾಡುವ ಹಿನ್ನಲೆಯಲ್ಲಿ ನೀಡಿದ ಉಚಿತ ಉಜ್ವಲ ಯೋಜನೆ ಗ್ಯಾಸ ವಿತರಣೆ ಕುರಿತು ಮಹಿಳೆಯರಿಗೆ ತಿಳಿಸಿ, ಸದ್ಬಳಕೆಗೆ ಉತ್ತೇಜಿಸಿ ವಿತರಣೆ ಪ್ರಮಾಣ ಹೆಚ್ಚಿಸಬೇಕೆಂದು ಕರ್ನಾಟಕ ರಾಜ್ಯ ಬಿಪಿಸಿಎಲ್ ಮುಖ್ಯಸ್ಥ ರಾಜೇಶ ಕುಂಬ್ಹಾರೆ ಹೇಳಿದರು.

ಇದನ್ನು ಓದಿ ಹುಬ್ಬಳ್ಳಿ ಮಹಿಳೆ ಮಹಾರಾಷ್ಟ್ರದಲ್ಲಿ ಕಿಡ್ನಾಪ್: ಹೆಂಡ್ತಿ ಸುರಕ್ಷತೆಗೆ ಓದಲೇಬೇಕಾದ ಸುದ್ದಿ

ಪಟ್ಟಣದ ಮುಳಗುಂದ ಗ್ಯಾಸ ವಿತರಕರ ಕಾರ್ಯಲಯದಲ್ಲಿ ಆಯೋಜಿಸಿದ ಬಿಪಿಸಿಎಲ್ ಗ್ಯಾಸ ವಿತರಕರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ನಂತರ ಮಾತನಾಡಿ, ಗ್ರಾಹಕರಿಗೆ ಸಕಾಲಕ್ಕೆ ಗ್ಯಾಸ ಸಿಲೆಂಡರ್ ಪೂರೈಸುವಲ್ಲಿ ಸನ್ನದ್ದರಾಗಬೇಕಿದೆ. ಕಂಪನಿ ನಿಭಂದನೆಗಳನ್ನು ಪಾಲಿಸಿ ಸಿಲಿಂಡರ್ ಶೇಖರಿಸಬೇಕು. ಸಮುದಾಯದ ಕುಟುಂಬಗಳ ಆರೋಗ್ಯ ದೃಷ್ಟಿಯಿಂದ ಗ್ರಾಮೀಣ ಪ್ರದೇಶದಲ್ಲಿ ಕಟ್ಟಿಗೆ ಒಲೆ ಉಪಯೋಗ ಕಡಿಮೆಗೊಳಿಸಿ, ಗ್ಯಾಸ ಬಳಿಕೆ ಮಾಡುವಲ್ಲಿ ಜಾಗೃತೆ ಮೂಡಿಸಬೇಕೆಂದರು. ಆರ್ಥಿಕವಾಗಿ ಮಹಿಳಾ ಸಭೀಲಕರಣವಾಗಬೇಕಾದರೆ, ನಿಮ್ಮ ಗ್ಯಾಸ ವಿತರಕರು ಪ್ರಾಮಾಣಿಕ ಕರ್ತವ್ಯ , ನಿಷ್ಠೆಯಿಂದ ಸಾಧನೆ ಪ್ರಗತಿಯಲ್ಲಿ ಸಾಗಬೇಕಿದೆ. ಎಂದರು.
ಧಾರವಾಡ ಜಿಲ್ಲಾ ಬಿಪಿಸಿಎಲ್ ಟೋರೊಟರಿ ಮ್ಯಾನೇಜರ ದೀಪಕ ಅಗರವಾಲ ಮಾತನಾಡಿ, ಮಹಿಳೆಯರು ಗ್ಯಾಸ ಬಳಕೆ ಪ್ರಮಾಣ ತಮ್ಮ ವಿತರಕರ ಪಾಯಿಂಟಿನಲ್ಲಿ ಹೆಚ್ಚಿಸಬೇಕು. ಮಹಿಳೆಯರಲ್ಲಿ ಗ್ಯಾಸ ಬಳಕೆ ಕುರಿತು ಸಂಪೂರ್ಣ ಜ್ಞಾನ, ತಿಳುವಳಿಕೆ ನೀಡುವ ಮೂಲಕ ಬಳಸುವ ವಿಧಾನ, ಯಾವುದೇ ಅನಾಹುತಕ್ಕೆ ಅಡೆ ತಡೆ ಬರದಂತೆ ಜಾಗೃತಿವಹಿಸಿ, ಗ್ರಾಹಕರ ವಿಶ್ವಾಸಕ್ಕೆ ಭಾಜನರಾಗಿ, ಗ್ಯಾಸ ಸಿಲೆಂಡರ್ ಉಪಯೋಗಿಸುವ ನಿಟ್ಟಿನಲ್ಲಿ ಸೇವಾ ಸೌಲಭ್ಯ ಒದಗಿಸಬೇಕೆಂದರು. ಈಗಾಗಲೇ ತಾಲೂಕಿನಲ್ಲಿ ಬಸಾಪೂರ, ಶಲವಡಿ ಗ್ರಾಮದಲ್ಲಿ ನೂತನ ಗ್ಯಾಸ ವಿತರಕರ ಪಾಯಿಂಟ್ ಪ್ರಾರಂಭಿಸಲಾಗಿದೆ ಎಂದರು.
ಸೇಲ್ಸ್ ಆಪೀಸರ್ ಶಿವಕುಮಾರ, ಸಂತೂಲ ದಯಾತ್, ಕರ್ನಾಟಕ ರಾಜ್ಯ ಬಿಪಿಸಿಎಲ್ ಮುಖ್ಯಸ್ಥ ರಾಜೇಶ ಕುಂಬ್ಹಾರೆ, ಜಿಲ್ಲಾ ಬಿಪಿಸಿಎಲ್ ಮ್ಯಾನೇಜರ ದೀಪಕ ಅಗರವಾಲ್ ಮುಳಗುಂದ ಗ್ಯಾಸ ವಿತರಕ ಸಿಬ್ಬಂದಿ ಶೇಖಪ್ಪ ಸೊಮಣ್ಣವರ ಮಗ ಟ್ರಾಕ್ಟರ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದರಿoದ 10,000/-ಸಾವಿರ ಸಹಾಯ ಧನ ವಿತರಿಸಿದರು. ಹಾಗೂ ಸಿಬ್ಬಂದಿ ವರ್ಗ, ನೂತನ ಗ್ಯಾಸ ವಿತರಕರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಅಣ್ಣಿಗೇರಿ ಮುಳಗುಂದ ಗ್ಯಾಸ ವಿತರಕ ಅನ್ನಪ್ಪ ಚನ್ನವೀರಪ್ಪ ಮುಳಗುಂದ ಹಾಗೂ ಸಿಬ್ಬಂದಿ ವರ್ಗ ಸೇರಿದಂತೆ ಉಪಸ್ಥಿತರಿದ್ದರು.

Related posts

ಹೊಸಪೇಟೆ ಯಾರ್ಡಲ್ಲಿ ರೈಲು ಅಪಘಾತವಾಯ್ತಾ? ಆಗಿದ್ದೇನು? ಅಷ್ಟೊಂದು ಸಿಬ್ಬಂದಿಯ ಕಾರ್ಯಾಚರಣೆ!

eNewsLand Team

ತಲೆ ತಗ್ಗಿಸಿ ನಿನ್ನ ಕೆಲಸ ಮಾಡಿದರೆ ಅದರ ಫಲ ನಿನ್ನನ್ನು ತಲೆ ಎತ್ತುವಂತೆ ಮಾಡುತ್ತದೆ: ಪ್ರಾಚಾರ್ಯ ಬಿರಾದಾರ

eNEWS LAND Team

ಅಣ್ಣಿಗೇರಿಲಿ ಅನ್ನದಾತನ ಆತ್ಮಹತ್ಯೆ; ಸಾಯುವಂಥದ್ದು ಏನಾಗಿತ್ತು?

eNewsLand Team