ಇಎನ್ಎಲ್ ಅಣ್ಣಿಗೇರಿ;
ಅಣ್ಣಿಗೇರಿಯ ಯೂನಿಯನ್ ಬ್ಯಾಕಿನಲ್ಲಿ ಹಾಗೂ ಊರಲ್ಲಿ ಅಲ್ಲಲ್ಲಿ ಕೈಗಡ ಸಾಲ ಮಾಡಿದ್ದ ರೈತನೊಬ್ಬ ಸಾಲಬಾಧೆಗೆ ಹೆದರಿ ಹತ್ತಿಗೆ ಸಿಂಪಡಿಸುವ ವಿಷಕಾರಕ ಔಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಣ್ಣಿಗೇರಿ ಜಾಡಗೇರ ಓಣಿಯ ಸಣ್ಣವೀರಪ್ಪ ತಂದೆ ಗಂಗಪ್ಪ ಉಳ್ಳಾಗಡ್ಡಿ (50) ಮೃತಪಟ್ಟ ರೈತ.
ಜಮೀನು ಸಾಗುವಳಿ ಸಲುವಾಗಿ ಸಾಲ ಮಾಡಿದ್ದ. 2-3 ವರ್ಷಗಳಿಂದ ಮಳೆ ಸರಿಯಾಗಿ ಬಾರದೆ ಹಾಗೂ ಕಳೆದ ವರ್ಷ ಅತಿಯಾದ ಮಳೆಯಿಂದಾಗಿ ತಾನು ಬೇಳೆದ ಮೇಣಸಿನ ಪೀಕು ಹಾಗೂ ಹತ್ತಿ ಪೀಕು ಸರಿಯಾಗಿ ಬಾರದೇ ಬಹಳೆ ಲಕ್ಸಾನ ಆಗಿದ್ದರಿಂದ ತಾನು ಮಾಡಿದ ಸಾಲವನ್ನು ಹೇಗೆ ತೀರಿಸಬೇಕು ಅಂತಾ ಮಾನಸಿಕ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ: 06-06-2022 ರಂದು 12-00 ಗಂಟೆಗೆ ಅಣ್ಣಿಗೇರಿಯ ತನ್ನ ಜಮೀನಿನಲ್ಲಿ ಹತ್ತಿಗೆ ಸಿಂಪಡಿಸುವ ವಿಷಕಾರಕ ಔಷಧಿಯನ್ನು ಸೇವನೆಮಾಡಿ ಅಸ್ವಸ್ಥನಾಗಿದ್ದ. ಅವರನ್ನು ಉಪಚಾರಕ್ಕಾಗಿ ಅಣ್ಣಿಗೇರಿಯ ಸರಕಾರಿ ಆಸ್ಪತ್ರೆಯಲ್ಲಿ ದಾಖಲ ಮಾಡಿದ್ದು ನಂತರ ಹೇಚ್ಚಿನ ಉಪಚಾರಕ್ಕೆ ಅಂತಾ ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಯಲ್ಲಿ ದಾಖಲ್ ಮಾಡಲಾಗಿಯು ಸಹಿತ ಉಪಚಾರ ಪಲಿಸದೆ ದಿನಾಂಕ 10-06-2022 ರಂದು 10-55 ಗಂಟೆಗೆ ಮರಣ ಹೊಂದಿದ್ದಾರೆ.
ಹುಬ್ಬಳ್ಳಿ ಮಹಿಳೆ ಮಹಾರಾಷ್ಟ್ರದಲ್ಲಿ ಕಿಡ್ನಾಪ್: ಹೆಂಡ್ತಿ ಸುರಕ್ಷತೆಗೆ ಓದಲೇಬೇಕಾದ ಸುದ್ದಿ
ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಯುಡಿನಂ 16/2022 ಕಲಂ 174 ಸಿ.ಆರ್.ಪಿ ಸಿನೇದ್ದರಲ್ಲಿ ಪ್ರಕರಣ ದಾಖಲಾಗಿದೆ.