27 C
Hubli
ಡಿಸೆಂಬರ್ 7, 2023
eNews Land
ಸುದ್ದಿ

ರಾಡಿಹಳ್ಳ ಹೋರಾಟ ಸಮಿತಿಯಿಂದ ಪ್ರವಾಹದ ಸಮಸ್ಯೆಗೆ ಆಗ್ರಹ

 

ಇಎನ್ಎಲ್ ಅಣ್ಣಿಗೇರಿ: ಕಳೆದ ಹಲವಾರು ವರ್ಷಗಳಿಂದ ರಾಡಿಹಳ್ಳದ ಪ್ರವಾಹದಿಂದ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಭೂಮಿ ನಾಶವಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹಳ್ಳದ ಸುತ್ತಮುತ್ತಲಿನ ಗ್ರಾಮಗಳ ರೈತರು ರಾಡಿಹಳ್ಳದ ಹೋರಾಟ ಸಮಿತಿ ರಚಿಸಿದ್ದು, ಶಾಶ್ವತ ಪರಿಹಾರಕ್ಕೆ ಉಗ್ರಹೋರಾಟ ಮಾಡಲಾಗುವುದೆಂದು ರಾಡಿಹಳ್ಳದ ಹೋರಾಟ ಸಮಿತಿ ಅಧ್ಯಕ್ಷ ಪ್ರದೀಪ ಲೆಂಕಿನಗೌಡ್ರ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.

ಇದನ್ನು ಓದಿಅಣ್ಣಿಗೇರಿ: ಭಾರತ ಗ್ಯಾಸ ವಿತರಕರ ಪ್ರಗತಿ ಪರಿಶೀಲನಾ ಸಭೆ

ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ರಾಡಿಹಳ್ಳ ಮಳೆ ಬಂದಾಗ ವರ್ಷದಲ್ಲಿ ಪ್ರವಾಹ ಬಂದು ರೈತರು ಸಾಕಷ್ಟು ಖರ್ಚು ಮಾಡಿ, ಕಟ್ಟಿಕೊಂಡಿರುವ ಹೊಲಗಳ ಒಳಗಟ್ಟಿ, ಬದುವು, ಬಾಂದಾರುಗಳು, ಜಮೀನಿನಲ್ಲಿರುವ ಬೆಳೆಗಳು, ಫಲವತ್ತಾದ ಮಣ್ಣು ಕೊಚ್ಚಿ ಹೋಗುತ್ತಿದ್ದು, ಭಾರಿ ಪ್ರಮಾಣದ ಮಣ್ಣು ಸವಕಳಿ ಆಗಿದೆ. ಅನೇಕ ಸಲ ಬೆಳೆ ಕಟಾವು ಮಾಡುವ ಸಂದರ್ಭದಲ್ಲಿ ಪ್ರವಾಹ ಬಂದು ಪೈರು ಕೊಚ್ಚಿ ಹೋಗಿದೆ. ಈ ಸಮಸ್ಯೆ ಕುರಿತು ಹಲವಾರು ಬಾರಿ ಸಂಬoಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಿ ಸಾಕಾಗಿದೆ. ಕಿಂಚತ್ತೂ ಗಮನಹರಿಸಿಲ್ಲ ಎಂದು ದೂರಿದರು.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಯತ್ನಳ್ಳಿ ಗಾಮದಲ್ಲಿ ಹುಟ್ಟಿ ಹುಬ್ಬಳ್ಳಿ ತಾಲೂಕಿನ ಕಿರೇಸೂರ, ಗ್ರಾಮದ ಹತ್ತಿರ ಬೆಣ್ಣಿಹಳ್ಳ ಸೇರುತ್ತದೆ. ರಾಡಿ ಹಳ್ಳದ ಸಂಕಷ್ಟದಿoದ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ, ನಲವಡಿ, ಉಮಚಗಿ, ಶಿಶ್ವಿನಹಳ್ಳಿ, ಬೆನ್ನೂರು, ದುಂದೂರ, ಇಂಗಳಹಳ್ಳಿ, ಬಲ್ಲರವಾಡ ಗ್ರಾಮಗಳ ರೈತರು ರಾಡಿಹಳ್ಳದ ಹೋರಾಟ ಸಮಿತಿ ಮೂಲಕ ಉಗ್ರಹೋರಾಟ ಮಾಡುವ ನಿಟ್ಟಿನಲ್ಲಿ ರಾಡಿಹಳ್ಳದ ಹೋರಾಟ ಸಮಿತಿ ರಚಿಸಿ ಎಂದರು.
ಈ ಸಂದರ್ಭದಲ್ಲಿ ರಾಡಿ ಹಳ್ಳ ಹೋರಾಟ ಸಮಿತಿ ಅಧ್ಯಕ್ಷ ಪ್ರದೀಪ ಲೆಂಕಿನಗೌಡ್ರ, ಎನ್.ಕೆ.ಶಿವನಗೌಡರ, ಆನಂದಗೌಡ ಪಾಟೀಲ, ತಾಲೂಕ ರೈತ ಸಂಘಟನೆ ಹಸಿರು ಸೇನೆ ಅಧ್ಯಕ್ಷ ಶಂಕರ ನಾಯ್ಕರ, ಧಾ.ಜಿ. ರೈತ ಸಂಘಟನೆ ಹಸಿರುಸೇನೆ ಅಧ್ಯಕ್ಷ ಬಸವರಾಜ ಶೆಟ್ಟರ, ಪ್ರಧಾನಿ ನಾಯ್ಕರ ಉಪಸ್ಥಿತರಿದ್ದರು.

Related posts

CIVIL DEFENCE ORGANISATION OF SWR ORGANISES TRAINING ON DISASTER MANAGEMENT

eNEWS LAND Team

ಪಶ್ಚಿಮ ಶಿಕ್ಷಕರ ಕ್ಷೇತ್ರ: ಮತದಾರರ ಕರಡು ಪಟ್ಟಿ ಪ್ರಕಟ ಡಿ.27 ರವರೆಗೆ ಆಕ್ಷೇಪಣೆಗಳ ಸಲ್ಲಿಕೆಗೆ ಅವಕಾಶ

eNEWS LAND Team

ಅಣ್ಣಿಗೇರಿ: ಕರ್ನಾಟಕ ಬಂದ್ ಬೆಂಬಲಿಸಿ ಪ್ರತಿಭಟನೆ

eNEWS LAND Team