27 C
Hubli
ಫೆಬ್ರವರಿ 27, 2024
eNews Land
ಸುದ್ದಿ

ದಿ.ಶಿವಳ್ಳಿ ಆದರ್ಶ ರಾಜಕಾರಣಿ, ಅಧಿಕಾರ ಇರಲಿ, ಇಲ್ಲದಿರಲಿ, ಜನರ ಕಷ್ಟಗಳಿಗೆ ಸ್ಪಂದಿಸುವ ಜನನಾಯಕ: ಮಾಜಿ ಸಿಎಂ ಸಿದ್ರಾಮಯ್ಯ

ಇಎನ್ಎಲ್ ಕುಂದಗೋಳ: ಅಧಿಕಾರದ ವಿಷಯದಲ್ಲಿ ಸಮಾಜದಲ್ಲಿ ಎರಡು ವರ್ಗದ ಜನರಿದ್ದಾರೆ ಅಂಥವರಲ್ಲಿ ದಿ.ಸಿ.ಎಸ್.ಶಿವಳ್ಳಿ ಆದರ್ಶ ರೂಪದ ರಾಜಕಾರಣಿ ಅಧಿಕಾರ ಇರಲಿ ಇಲ್ಲದಿರಲಿ ಜನರ ಕಷ್ಟಗಳಿಗೆ ಸ್ಪಂದಿಸುವ ಜನನಾಯಕ ಎಂದು ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯ ಹೇಳಿದರು.

ಇದನ್ನೂ ಓದಿ:ಕುಂದಗೋಳ; ಕಾರ್ಯಕ್ರಮಕ್ಕೆ ಗೈರಾಗಿ ಸಣ್ಣತನ ಪ್ರದರ್ಶಿಸಿದರಾ ಶಾಸಕಿ ಕುಸುಮಾವತಿ?

ದಿ.ಸಿ.ಎಸ್.ಶಿವಳ್ಳಿ ಅವರ ತೃತೀಯ ಪುಣ್ಯಸ್ಮರಣೆ ಅಂಗವಾಗಿ ಅವರ ಸ್ವಗ್ರಾಮ ಯರಗುಪ್ಪಿಯಲ್ಲಿ ಮೂರ್ತಿಯನ್ನು ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಉದ್ಘಾಟಿಸಿ ಮಾತನಾಡಿ ದೇವರು ಹಣೆಬರಹವನ್ನು ಬರೆಯುವುದಿಲ್ಲ ಅದನ್ನು ನಾವು ರೂಪಿಸಿಕೊಳ್ಳಬೇಕು ದಿ.ಶಿವಳ್ಳಿ ಅವರು ಒಂದು ಸಣ್ಣ ರೈತ ಕುಟುಂಬದಲ್ಲಿ ಜನಿಸಿ ಒಳ್ಳೆಯ ಸಿದ್ಧಾಂತಗಳನ್ನು ಇಟ್ಟುಕೊಂಡು ಸಮಾಜದ ಏಳಿಗೆಗಾಗಿ ಸದಾ ಜನರ ಮನದಲ್ಲಿ ನೆಲೆಸಿದ್ದಾರೆ ಎನ್ನುವುದಕ್ಕೆ ಸಮಾರಂಭದಲ್ಲಿ ಸೇರಿರುವ ಅಭಿಮಾನಿಗಳೇ ಸಾಕ್ಷಿ ಎಂದರು.

ಇದನ್ನೂ ಓದಿ:ಬಸವರಾಜ ಹೊರಟ್ಟಿ ಮೇಲೆ ಎಫ್ಐಆರ್ ದಾಖಲಿಸಿದ ಪೊಲೀಸ್ ಸಸ್ಪೆಂಡ್

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ ಜೀವನದಲ್ಲಿ ಅಧಿಕಾರ ಬರುತ್ತೆ ಹೋಗುತ್ತೆ ದಿ.ಸಿ.ಎಸ್.ಶಿವಳ್ಳಿ ಇಷ್ಟು ಅಭಿಮಾನಿಗಳನ್ನು ನೋಡಿದರೆ ಅವರು ತಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ ಅನಿಸುತ್ತದೆ. ಅವರಿಗಿಂತ ಪತ್ನಿ ಶಾಸಕಿ ಕುಸುಮಾವತಿ ಶಿವಳ್ಳಿ ಅವರು ಅತಿ ಉತ್ತಮ ಕೆಲಸ ಮಾಡಲಿ ಎಂದು ಹಾರೈಸಿದರು.
ಜನಸಾಮಾನ್ಯರ ಜೊತೆ ಹೇಗೆ ಬೇರೆಯಬೇಕು ಎಂದು ನಾವೆಲ್ಲರೂ ದಿ.ಸಿ.ಎಸ್.ಶಿವಳ್ಳಿ ಅವರಿಂದ ಪಾಠ ಕಲಿಯಬೇಕು ಎಂದು ಹಾನಗಲ್ ಕ್ಷೇತ್ರದ ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಇದನ್ನೂ ಓದಿ:ಕುರಿಗಾಹಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದವರನ್ನು ಗಲ್ಲು ಹಾಕಿ ಎಂದು ಆಗ್ರಹ

ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ, ಎಂ.ಎಸ್. ಅಕ್ಕಿ, ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್, ವೀರಣ್ಣ ಮತ್ತಿಕಟ್ಟಿ, ಪ್ರಕಾಶ್ ರಾಥೋಡ್, ದೀಪಕ್ ಚಿಂಚೋಳಿ, ಶಾಸಕ ಪ್ರಸಾದ ಅಬ್ಬಯ್ಯ ಇನ್ನೂ ಅನೇಕರು ಮಾತನಾಡಿದರು. ಮುಕ್ತಿಮಂದಿರ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಆಶೀರ್ವದಿಸಿದರು.

ಇದನ್ನೂ ಓದಿ:ಸಂಗೀತ ಕಾಶಿ ಕುಂದಗೋಳ ಹಾಗೂ ಸಂಗೀತ ಕಲಾವಿದರ ತವರು

ಈ ಕಾರ್ಯಕ್ರಮದಲ್ಲಿ ಕುಂದಗೋಳ ಕಲ್ಯಾಣಪುರ ಬಸವಣ್ಣಜ್ಜನವರು, ಬೆಳಗಾವಿ ಮುಕ್ತಿ ಮಠದ ಶಿವಯೋಗೇಶ್ವರ ಮಹಾಸ್ವಾಮಿಗಳು, ಮನಸೂರ ಬಸವರಾಜ ದೇವರು ಸಾನಿಧ್ಯ ವಹಿಸಿದ್ದರು.

ಇದನ್ನೂ ಓದಿ:ಟ್ರ್ಯಾಕ್ಟರ್ ಟ್ರೇಲರ ಕಳ್ಳನ ಹೆಡೆಮುರಿ ಕಟ್ಟಿದ ಪೋಲಿಸರು

ಈ ವೇಳೆ ಅರವಿಂದ ಕಟಗಿ, ಜಗದೀಶ್ ಉಪ್ಪಿನ, ಅಡಿವೆಪ್ಪ ಶಿವಳ್ಳಿ, ಮುತ್ತು ಶಿವಳ್ಳಿ, ಷಣ್ಮುಖಪ್ಪ ಶಿವಳ್ಳಿ, ಅಮರಶಿವ.ಸಿ.ಶಿವಳ್ಳಿ, ಬಾಬಣ್ಣ ಬೆಟಗೇರಿ, ಸಿದ್ದಪ್ಪ ಹುಣಸೆಣ್ಣವರ, ದಯಾನಂದ್ ಕುಂದೂರ, ಸಕ್ರು ಲಮಾಣಿ, ವಿಜಯಾನಂದ ಹಾಲಿ, ಉಮೇಶ ಹೆಬಸೂರ, ಸುರೇಶ್ ಸವಣೂರ, ಚಂದ್ರಶೇಖರ್ ಜುಟ್ಟಲ್, ಜಿ.ಡಿ.ಘೋರ್ಪಡೆ ಹಾಗೂ ಇನ್ನೂ ಅನೇಕ ಮುಖಂಡರು ಕಾರ್ಯಕರ್ತರು ಪಾಲ್ಗೊಂಡಿದ್ದರು. ದಿ.ಸಿ.ಎಸ್.ಶಿವಳ್ಳಿಯವರ ಪುಣ್ಯಸ್ಮರಣೆ ಅಂಗವಾಗಿ ಅವರ ಅಭಿಮಾನಿಗಳ ಬಳಗದಿಂದ 100ಕ್ಕೂ ಹೆಚ್ಚು ಜನರು ರಕ್ತದಾನವನ್ನು ಮಾಡಿದರು.

ಇದನ್ನೂ ಓದಿ:ಹುಬ್ಬಳ್ಳಿಲಿ ಡಿ.ಕೆ.ಶಿ, ಸಿದ್ದರಾಮಯ್ಯ ಸುಟ್ಟಿದ್ದು ಯಾಕೆ ಗೊತ್ತಾ?

 

Related posts

ಇಎನ್ಎಲ್ ಬೆಳಗಿನ ಸಮಾಚಾರ

eNewsLand Team

ಉಕ್ರೇನ್ ಮೇಲೆ ಯುದ್ಧ ಆರಂಭಿಸಿದ ರಷ್ಯಾ; ಜಗತ್ತಿನಲ್ಲಿ ತಲ್ಲಣ

eNewsLand Team

ಹುಬ್ಬಳ್ಳಿ ಶ್ರೀ ಸಿದ್ಧಾರೂಢ ಮಠದಲ್ಲಿ ಗುರು ಪೂರ್ಣಿಮಾ ಅದ್ಧೂರಿ ಆಚರಣೆ

eNEWS LAND Team