23 C
Hubli
ಜುಲೈ 23, 2024
eNews Land
ಜನಪದ ಸುದ್ದಿ

ಅಳಗವಾಡಿಯಲ್ಲಿ ಸಂಕ್ಷಿಪ್ತ ದೊಡ್ಡಾಟ

ಇಎನ್ಎಲ್ ನವಲಗುಂದ: ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ಸಂಕ್ಷಿಪ್ತ ದೊಡ್ಡಾಟವನ್ನು ಪ್ರದರ್ಶಿಸಿದರು.
ಯುವ ಪೀಳಿಗೆ ದೊಡ್ಡಾಟವನ್ನು ಬೆಳೆಸಿಕೊಂಡು ಹೋಗಬೇಕಾಗಿದೆ ಎಂದ ತಿಮ್ಮರಡ್ಡಿ ಮೇಟಿ.
 ದೊಡ್ಡಾಟಗಳು ರಾಮಾಯಣ, ಮಹಾಭಾರತದಂತಹ ಪೌರಾಣಿಕ ಕಥೆಗಳನ್ನು ಸಾರುವಂತಹ ದೊಡ್ಡಾಟಗಳು ಉಳಿಯಬೇಕಾಗಿದೆ ಇಂದಿನ ಯುವ ಪೀಳಿಗೆಯವರು ದೊಡ್ಡಾಟವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾಗಿದೆ ಎಂದು ರಾಜ್ಯ ಪ್ರಶಸ್ತಿ ವಿಚೇತ ತಿಮ್ಮರಡ್ಡಿ ಮೇಟಿ ಅವರು ಹೇಳಿದರು.
ಅವರು ತಾಲೂಕಿನ ಅಳಗವಾಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಾರುತೇಶ್ವರ ದೊಡ್ಡಾಟ ಸಂಘ ಅಳಗವಾಡಿ ಹಾಗೂ ಕನ್ನಡ ಮತ್ತು ಸಂಸ್ಕ್ರಾತಿಕ ಇಲಾಖೆ ಧಾರವಾಡ ಇವರ ಸಹಯೋಗದೊಂದಿಗೆ ಬಯಲು ದೊಡ್ಡಾಟದ ಕಾರ್ಯಕ್ರಮದ ಅತಿಥಿಗಳಾಗಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ರಾತ್ರಿಯಿಂದ ಬೆಳಗಿನವರೆಗೂ ಸಹ ದೊಡ್ಡಾಟಗಳು ಇರುತ್ತಿದ್ದವು ಆದರೆ ಕಲಾವಿದರ ಕೊರತೆಯಿಂದ ದೊಡ್ಡಾಟಗಳು ನಶಿಸಿ ಹೋಗುತ್ತೇವೆ. ಆದರೆ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ದೊಡ್ಡಾಟ ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶಿಸಿಸುತ್ತಿದ್ದಾರೆ. ಇಂತಹ ಒಳ್ಳೇಯ ಕಲಾವಿದರ ಸಹ ಪ್ರಶಸ್ತಿಗೆ ಭಾಜನರಾಗಲಿ ಎಂದು ಹೇಳಿದರು.
ಶ್ರೀ ವೀರಭದ್ರಯ್ಯ ಸ್ವಾಮಿಗಳು ಸಾನಿದ್ಯ ವಹಿಸಿ ಮಾತನಾಡಿ ಯುವಕರು ದೊಡ್ಡಾಟದಂತಹ ಪೌರಣಿಕತೆಯನ್ನು ಪ್ರದರ್ಶಿಸುವ ಕಲೆಯನ್ನು ಕಲಿತು ಮುಂದಿನ ಪೀಳಿಗೆಯವರಿಗೆ ದೊಡ್ಡಾಟದ ರೂಪರೇಷ, ತಯಾರಿ ಮಾಡಿಕೊಳ್ಳುವುದನ್ನು ಗ್ರಾಮದಲ್ಲಿರುವಂತಹ ದೊಡ್ಡಾಟದ ಪರಿಣಿತರ ಸಹಾಯ ಸಹಕಾರದಿಂದ ಕಲೆಯನ್ನು ಉಳಿಸಿಕೊಂಡು ಹೋಗಬೇಕೆಂದು ಹೇಳಿದರು.
ಕೋವಿಡ್ ನಿಯಮ ಪಾಲನೆಯೊಂದಿಗೆ ಸಂಕ್ಷಿಪ್ತವಾಗಿ ಸುಗಂಧ ಪುಷ್ಪಾಹರಣ ದೊಡ್ಡಾಟವನ್ನು ಪ್ರದರ್ಶಿಸಿದರು. ಇದರ ಜೊತೆಗೆ ಕೋರೋನಾದಿಂದ ದೂರವಿರಲು ಸಾರ್ವಜನಿಕರು ಮುಜಾಗೃತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕೆಂದು ದೊಡ್ಡಾಟದ ಪ್ರಸಂಗದಲ್ಲಿ ಸಂದೇಶವನ್ನು ನೀಡಿದರು.
ತುಳಸಪ್ಪ ಹನಮಪ್ಪ ಇನಾಮತಿ, ಕಲ್ಲಪ್ಪ ಈರಪ್ಪ ಕಾಲವಾಡ, ಮಲ್ಲಪ್ಪ ಈರಪ್ಪ ಕಾಲವಾಡ. ರಾಮಪ್ಪ ಯಲ್ಲಪ್ಪ ಕಮ್ಮಾರ, ಸುರೇಶ ರಾಮಲಿಂಗಪ್ಪ ಪೂಜಾರ, ಬಸನಗೌಡ ಫಕ್ಕೀರಗೌಡ ಬಮ್ಮನಗೌಡರ, ಮುತ್ತಣಗೌಡ ಬಸನಗೌಡ ಚನ್ನಪ್ಪಗೌಡರ, ಚಂದ್ರಶೇಖರ ಕಲ್ಲಪ್ಪ ಪೂಜಾರ, ರಾಮಲಿಂಗಪ್ಪ ಪೂಜಾರ, ಮಲ್ಲಪ್ಪ ಸೊಟಕನಾಳ, ಸಕ್ರಪ್ಪ ಬಸಪ್ಪ ಬಗಲಿ, ಮಲ್ಲಪ್ಪ ಪರಸಪ್ಪ ಬಗಲಿ, ಅಮೃತಪ್ಪ ಲಕ್ಷ್ಮಣ ಪೂಜಾರ, ಶಿವಪ್ಪ ದೊಡಪ್ಪ ಯಡ್ರಾವಿ, ಭೀಮರಡ್ಡಿ ಹನಮರಡ್ಡಿ ಮೇಟಿ, ಮಲ್ಲಿಕಾರ್ಜುನ ಬಸಪ್ಪ ಹದ್ಲಿ ಇತರ ಕಲಾವಿದರು ಒಂದು ಗಂಟೆ ದೊಡ್ಡಾಟದ ವೇಷಭೂಷಣಗಳನ್ನು ಹಾಕಿಕೊಂಡು ಸುಂದರವಾಗಿ ದೊಡ್ಡಾಟದ ಕಥೆಯನ್ನು ಪ್ರದರ್ಶಿಸಿದರು.

Related posts

ನೈಋತ್ಯ ರೈಲ್ವೆ: ಯಾವ ರೈಲು ರದ್ದು? ಮಾರ್ಗ ಬದಲಾವಣೆ, ಇಲ್ಲಿದೆ ಮಾಹಿತಿ

eNEWS LAND Team

ಸರ್ಕಾರಿ ಶಾಲೆಗಳಿಗೆ ಹೈಟೆಕ್ ಸ್ಪರ್ಶ: ಶಾಸಕ ಪ್ರಸಾದ ಅಬ್ಬಯ್ಯ “ಸನ್ಮಾನದ ಹಾರ ತುರಾಯಿಗಳ ಬದಲು, ಶೈಕ್ಷಣಿಕ ಸಾಮಗ್ರಿಗಳ ದೇಣಿಗೆ ನೀಡಿ”

eNEWS LAND Team

ನಾಳೆ ಹಳೇ ಹುಬ್ಬಳ್ಳಿ, ಗೋಕುಲ ರಸ್ತೆಯ ಬಡಾವಣೆಗೆ ನೀರು ಬರಲ್ಲ

eNewsLand Team