29 C
Hubli
ಅಕ್ಟೋಬರ್ 8, 2024
eNews Land
ಸುದ್ದಿ

ಅಣ್ಣಿಗೇರಿಯಲ್ಲಿ ಸಂಭ್ರಮದ ಹೋಳಿ ಹಬ್ಬ

ಇಎನ್ಎಲ್ ಅಣ್ಣಿಗೇರಿ: ಪಟ್ಟಣದ ಮಾರ್ಕೆಟಿನಲ್ಲಿ ಪ್ರತಿಷ್ಠಾಪಿಸಿದ ಕಾಮರತಿಯರ ಮೂರ್ತಿಗಳನ್ನು ಅಲಂಕೃತಗೊಳಿಸಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಪೂಜೆ ಪುನಸ್ಕಾರಗಳಿಂದ ಶೃಂಗರಿಸಿರುತ್ತಾರೆ. ಪಟ್ಟಣದ ಸಕಲ ಭಕ್ತರು ದರುಶನ ಪಡೆದು ಪುನಿತರಾಗುತ್ತಾರೆ. ಹುಣ್ಣಿಮೆ ಮರುದಿನ ಬಣ್ಣ ಎರಚಿ, ವಿವಿಧ ವಾಧ್ಯಮೇಳಗಳನ್ನು ಭಾರಿಸುವ ಮೂಲಕ ಕುಣಿದು ಕುಪ್ಪಳಿಸುತ್ತ ಕಾಮರತಿ ಮೂರ್ತಿಯನ್ನು  ಹೊತ್ತು, ಮೆರವಣಿಗೆ ಮೂಲಕ ಪಟ್ಟಣದ ಕಿತ್ತೂರು ಚೆನ್ನಮ್ಮ ವೃತ್ತದ ಹತ್ತಿರ ಕಾಮದಹನ ಮಾಡಿದ ನಂತರ ಹೋಳಿ ಹಬ್ಬದ ಬಣ್ಣದ ಕಿರಿಚಾಟದಲ್ಲಿ ಹೊಯ್ಯುಕೊಳ್ಳುತ್ತಾ ಎಲ್ಲರೂ ಸಂಭ್ರಮಿಸಿದರು.

ಪಟ್ಟಣದ ಯುವಕರು, ರೈತರು, ವ್ಯಾಪಾರಸ್ಥರು, ಮಕ್ಕಳು, ಹಿರಿಯರು, ಹೆಚ್ಚಿನ ಸಂಖ್ಯೆಯಲ್ಲಿ ಹೋಳಿ ಹಬ್ಬದಲ್ಲಿ ಪಾಲ್ಗೊಂಡು ಆಚರಣೆ ಮಾಡಿದ್ದು ವಿಶೇಷವಾಗಿತ್ತು. ಕಳೆದೆರಡು ವರ್ಷಗಳಿಂದ ಕೋವಿಡ್ ನಿಮಿತ್ಯ ಹೋಳಿ ಹಬ್ಬ ಬ್ರೇಕ್ ಆಗಿ ಕುಂಠಿತಗೊoಡಿತ್ತು. ಈ ವರ್ಷ ಆಚರಣೆಗೆ ಮೆರಗು ಬಂದoತೆ ಕಾಣುತಿತ್ತು. ಆರಕ್ಷಕ ಇಲಾಖೆ ಯಾವುದೇ ಅಹಿತಕರ ಘಟನೆ ಜರುಗದಂತೆ ಕಟ್ಟುನಿಟ್ಟಿನ ಜಾಗೃತೆ ವಹಿಸಿತ್ತು.ಪಟ್ಟಣದ 23 ವಾರ್ಡುಗಳಲ್ಲಿ  ಕಾಮದಹನ ಮಾಡಿ ,ಚಿಕ್ಕಮಕ್ಕಳು, ಹೆಣ್ಣುಮಕ್ಕಳು ತಮ್ಮ ಓಣಿಯಲ್ಲಿ ಬಣ್ಣ ಎರಚಿ ಕೇಕೇ ಹಾಕಿ ಸಂಭ್ರಸಿದ್ದು ಕಂಡುಬoತು.    

Related posts

DIVERSION OF TRAINS/ರೈಲುಗಳ ಮಾರ್ಗ ಬದಲಾವಣೆ

eNewsLand Team

ಚೊಚ್ಚಲ ಪ್ರವೇಶದಲ್ಲೇ ಗುಜರಾತ್ ಟೈಟನ್ಸ್’ಗೆ ಚಾಂಪಿಯನ್ ಪಟ್ಟ!!

eNewsLand Team

ಅಮೃತ ಯೋಜನೆ ಅಡಿಯ ಕಾಮಗಾರಿ ಶೀಘ್ರ ಇತ್ಯರ್ಥಗೊಳಿಸುವಂತೆ ಹುಡಾ ಅಧ್ಯಕ್ಷ ನಾಗೇಶ ಕಲ್ಬುರ್ಗಿ ಸೂಚನೆ

eNEWS LAND Team