31 C
Hubli
ಅಕ್ಟೋಬರ್ 8, 2024
eNews Land
ಜನಪದ

ಸಂಗೀತ ಕಾಶಿ ಕುಂದಗೋಳ ಹಾಗೂ ಸಂಗೀತ ಕಲಾವಿದರ ತವರು

ಇಎನ್ಎಲ್ ಕುಂದಗೋಳ: ಸಂಗೀತ ಕಾಶಿ ಎಂದೇ ಕರೆಯುವ ಕುಂದಗೋಳ ಸಂಗೀತ ಕಲಾವಿದರನ್ನು ಹುಟ್ಟುಹಾಕಿದ ತವರೂರು, ದಿ.ಶ್ರೀ ಸವಾಯಿ ಗಂಧರ್ವರಲ್ಲಿ ಸಂಗೀತ ಅಭ್ಯಾಸವನ್ನು ಪಡೆದು ದೇಶ-ವಿದೇಶಗಳಲ್ಲಿ  ಖ್ಯಾತಿ ಗಳಿಸಿದ ವಿದ್ಯಾರ್ಥಿಗಳಲ್ಲಿ ಭಾರತ ರತ್ನ ಪಂ.ಭೀಮ್ ಸೇನ್ ಜೋಶಿ ಅವರು ಒಬ್ಬರು ಎಂದು ಸವಾಯಿ ಗಂಧರ್ವ ಸ್ಮಾರಕ ವಿಶ್ವಸ್ಥ ಸಂಸ್ಥೆಯ ಅಧ್ಯಕ್ಷ  ಅರವಿಂದ ಕಟಗಿ ಅವರು ಹೇಳಿದರು.
  ಪಟ್ಟಣದ ಪ್ರವಾಸಿ ಮಂದಿರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ. ಭೀಮಸೇನ್ ಜೋಶಿ ಮೂಲತಃ ಗದಗ ಜಿಲ್ಲೆಯ ರೋಣದಲ್ಲಿ ಜನಿಸಿ. ತಮ್ಮ ಜೀವನವನ್ನೆಲ್ಲಾ ಸಂಪೂರ್ಣವಾಗಿ ಸಂಗೀತಕ್ಕೆ ಅರ್ಪಿಸಿದವರು. ಹಿಂದೂಸ್ತಾನಿ ಸಂಗೀತದ ಜೊತೆಗೆ ಹಿಂದಿ ಭಜನೆಗಳನ್ನು ಹಾಗೂ ಚಲನಚಿತ್ರಗಳಲ್ಲಿ ಗೀತೆಗಳನ್ನು ಹಾಡಿ ಸಂಗೀತದ ಎಲ್ಲ ವಿಭಾಗಗಳಲ್ಲಿ ತಮ್ಮ ಛಾಪು ಮೂಡಿಸಿದವರು. ಇಂತಹ ಮಹಾನ್  ಸಂಗೀತ ವಿದ್ವಾಂಸರನ್ನಾಗಿ ಮಾಡಿದ ಗುರುಗಳಾದ  ಶ್ರೀ ಸವಾಯಿ ಗಂಧರ್ವರ  ಸ್ಥಾನದಲ್ಲಿ ಇವರ ಜನ್ಮಶತಮಾನೋತ್ಸವವನ್ನು ಆಚರಿಸಬೇಕೆಂದು ಈ ಮೂಲಕ ಸರ್ಕಾರವನ್ನು ಒತ್ತಾಯಿಸಿದರು. ಭೀಮ್ ಸೇನ್ ಜೋಶಿ ಪದ್ಮವಿಭೂಷಣ ಡಾ. ಗಂಗೂಬಾಯಿ ಹಾನಗಲ್ ಸಹ ಇವರಲ್ಲಿ ಸಂಗೀತ ಅಭ್ಯಾಸವನ್ನು ಮಾಡಿದ್ದರು. ಪಟ್ಟಣದಲ್ಲಿ ದಿ.ಸವಾಯಿ ಗಂಧರ್ವರ ಪುಣ್ಯತಿಥಿಯ ಸಂಗೀತೋತ್ಸವವನ್ನು ಕಳೆದ 69 ವರ್ಷಗಳಿಂದ ಸವಾಯಿ ಗಂಧರ್ವರ ಸ್ಮಾರಕ ವಿಶ್ವಸ್ಥ ಸಂಸ್ಥೆಯು ನಿರಂತರವಾಗಿ ನಡೆಸುತ್ತಾ ಬಂದಿದೆ. ಈ ಉತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅನುದಾನವನ್ನು ನೀಡುತ್ತಾ ಬಂದಿದೆ. ಇದಲ್ಲದೆ ಅಂತಹ ಶ್ರೇಷ್ಠ ಗುರುಗಳ ಆಸ್ಥಾನದಲ್ಲಿ  ಭಾರತ ರತ್ನ ಭೀಮಸೇನ್ ಜೋಶಿಯವರ  ಜನ್ಮಶತಮಾನೋತ್ಸವವನ್ನು ಹುಬ್ಬಳ್ಳಿಯಲ್ಲಿ ಮಾಡುವುದಕ್ಕಿಂತ ಪಟ್ಟಣದ ದಿ.ಸವಾಯಿ ಗಂಧರ್ವರ ಕಲಾಭವನದಲ್ಲಿ ಮಾಡುವುದು ಸೂಕ್ತ ಎಂದರು. ಇದರ ಜೊತೆಗೆ ಅವರ ಗುರುಗಳಿಗೂ ಸಹ ಗೌರವವನ್ನು ಸಲ್ಲಿಸಿದಂತೆ ಆಗುತ್ತದೆ. ಇದು ತಾಲೂಕಿನ ಜನತೆಯ ಹಾಗೂ ಸಂಗೀತಗಾರರ ಇಚ್ಛೆಯಾಗಿದೆ. ಇದರ ವಿಷಯವಾಗಿ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಿಗೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
   ಈ ಸಂದರ್ಭದಲ್ಲಿ ಆಯ್.ಎಮ್.ನಾವಳ್ಳಿಮಠ, ಅಶೋಕ ನಾಡಿಗೇರ್,ಎಸ್.ವಿ. ಧಾರವಾಡಶೆಟ್ಟರ್, ಜಿತೇಂದ್ರ ಕುಲಕರ್ಣಿ, ಎಮ್.ಎನ್. ತಡಸೂರು ಹಾಗೂ ಇತರರು ಇದ್ದರು.

Related posts

ರಂಗಗೀತೆ, ನಾಟಕ ಪ್ರದರ್ಶನ ಕಲಾವಿದರಿಗೆ ದುತ್ತರಗಿ ಪ್ರಶಸ್ತಿ

eNEWS LAND Team

ಕಲಾ ತವರು ಕಲಘಟಗಿ: ಬಸವರಾಜ ಹೊರಟ್ಟಿ

eNEWS LAND Team

ಬಾಲಗೌರವ ಪ್ರಶಸ್ತಿ ಹಾಗೂ ಮಕ್ಕಳ ಪುಸ್ತಕ ಚಂದಿರ ಪ್ರಶಸ್ತಿಗೆ ಅರ್ಜಿ ಆಹ್ವಾನ

eNEWS LAND Team